»   » ಶತದಿನೋತ್ಸವ ಸಂಭ್ರಮದಲ್ಲಿ ಪುನೀತ್ ಹುಡುಗರು

ಶತದಿನೋತ್ಸವ ಸಂಭ್ರಮದಲ್ಲಿ ಪುನೀತ್ ಹುಡುಗರು

Posted By:
Subscribe to Filmibeat Kannada

ಪುನೀತ್ ರಾಜ್ ಕುಮಾರ್ ಮುಖ್ಯಭೂಮಿಕೆಯ 'ಹುಡುಗರು' ಚಿತ್ರ ಶತಕ ಸಿಡಿಸಿದೆ. ಈ ಸಂಭ್ರಮ, ಸಡಗರವನ್ನು ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ದಿನ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಬೆಂಗಳೂರಿನಲ್ಲಿ ಶತದಿನೋತ್ಸವ ಸಂಭ್ರಮ ನಡೆಯಲಿದೆ.

ತಮಿಳಿನ 'ನಾಡೋಡಿಗಳ್' ಚಿತ್ರದ ರೀಮೇಕ್ ಆದರೂ ಕನ್ನಡ ಪ್ರೇಕ್ಷಕರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಚಿತ್ರವನ್ನು ತೆರೆಗೆ ತಂದಿದ್ದರು ಮಾದೇಶ್. ಇದೇ ಚಿತ್ರ ತೆಲುಗಿನಲ್ಲೂ 'ಶಂಭೋ ಶಿವ ಶಂಭೋ' ಹೆಸರಿನಲ್ಲಿ ರೀಮೇಕ್ ಆಗಿದೆ. ಆದರೆ ಕನ್ನಡ ಚಿತ್ರ ಹೆಚ್ಚು ಲವಲವಿಕೆಯಿಂದ ಮೂಡಿಬಂದಿತ್ತು. ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ.

ಪ್ರೇಮಿಗಳನ್ನು ಒಂದು ಮಾಡಲು ಸ್ನೇಹಿತರ ಪಾತ್ರ ದೊಡ್ಡದು. ಅವರ ಶ್ರಮ ನಗೆಪಾಟಲಾಗದಂತೆ ನೋಡಿಕೊಳ್ಳಬೇಕಾದದ್ದು ಪ್ರೇಮಿಗಳ ಧರ್ಮ ಎಂಬ ಸಂದೇಶ ಚಿತ್ರ ಸಾರುತ್ತದೆ. ಪುನೀತ್ ರಾಜ್ ಕುಮಾರ್, ಶ್ರೀನಗರ ಕಿಟ್ಟಿ, ರಾಧಿಕಾ ಪಂಡಿತ್, ಯೋಗೇಶ್ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದರು. (ದಟ್ಸ್‌ಕನ್ನಡ ಸಿನಿವಾರ್ತೆ)

English summary
The hundred day function celebration of Puneet Raj Kumar, Sreenagara Kitty, Radhika Pandit and Yogish starrer Hudugru produced by Chakreshwari Combines and directed by Maadesh will be celebrated on August 15, Monday in Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada