»   » ಆಚಾರ ಹೇಳಿ ಬದನೆ ತಿಂದ ರಾಕ್ ಲೈನ್

ಆಚಾರ ಹೇಳಿ ಬದನೆ ತಿಂದ ರಾಕ್ ಲೈನ್

Posted By: * ಅಮರನಾಥ್ ಶಿವಶಂಕರ್, ಬೆಂಗಳೂರು
Subscribe to Filmibeat Kannada
Rockline cinemas poster
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಉನ್ನತ ಹುದ್ದೆಯಲ್ಲಿದ್ದು, ಕನ್ನಡ ಚಿತ್ರರಂಗದ ಮೇರು ನಿರ್ಮಾಪಕರ ಒಡೆತನದಲ್ಲಿ ಶುರುವಾಗಿರುವ ಹೊಸ ಮಲ್ಟಿಪ್ಲೆಕ್ಸ್ ನಲ್ಲಿ ಕನ್ನಡ ಚಿತ್ರ ಪ್ರದರ್ಶನ ಜೋರಾಗಿ ನಡೀತಿದೆ ನೋಡಿ. ಆಚಾರ ಹೇಳಿ ಬದನೆಕಾಯಿ ತಿಂದಂತೆ ಆಗಿದೆ ಮಹಾನ್ ನಿರ್ಮಾಪಕರ ಪರಿಸ್ಥಿತಿ.

8 ಚಿತ್ರಗಳಲ್ಲಿ ಕೇವಲ ಒಂದೇ ಕನ್ನಡ ಚಿತ್ರ. ಇತ್ತೀಚಿಗೆ ಬಿಡುಗಡೆ ಆಗಿ ಭರ್ಜರಿಯಾಗಿ ಓಡಿತ್ತಿರುವ ಲೈಫು ಇಷ್ಟೇನೆ, ಸಾರಥಿ ನ ಕೂಡ ಪ್ರದರ್ಶನ ಮಾಡಬಹುದಿತ್ತಲ್ವಾ? 80% ಗಿಂತ ಹೆಚ್ಚು ಕನ್ನಡಿಗರು ವಾಸವಾಗಿರೋ ಈ ಪ್ರದೇಶದಲ್ಲಿ 80% ಗಿಂತ ಜಾಸ್ತಿ ಪರಭಾಷಾ ಚಿತ್ರಗಳು. ಕನ್ನಡ ಚಿತ್ರರಂಗದ ಪ್ರಭಾವಿ ನಾಯಕರುಗಳಿಗೆ ಕನ್ನಡ ಚಿತ್ರಗಳ ಮೇಲೆ ಅದೇನ್ ಕಾಳಜಿ ನೋಡ್ರಪ್ಪಾ.

ರಾಕ್ ಲೈನ್ ವೆಂಕಟೇಶ್ ಅವರ ರಾಕ್ ಲೈನ್ ಸಿನಿಮಾಸ್ ಆರಂಭವಾಗಿದ್ದು ಪುನೀತ್ ಅಭಿನಯದ ಪರಮಾತ್ಮ ಚಿತ್ರದ ಮೂಲಕ ಎಂಬುದು ಸಂತಸದ ಸಂಗತಿ. ಆದರೆ, ಅಲ್ಲಿನ ಮಲ್ಟಿಪ್ಲೆಕ್ಸ್ ಸ್ಕ್ರೀನ್ ಗಳಲ್ಲಿ ಓಡುತ್ತಿರುವುದು ಏಕೈಕ ಕನ್ನಡ ಚಿತ್ರವೂ ಪರಮಾತ್ಮ ಆಗಿರುವುದು ದುರದೃಷ್ಟದ ಸಂಗತಿ. ಮಿಕ್ಕಂತೆ ಪರಭಾಷಾ ಚಿತ್ರಗಳ ಹಾವಳಿಯೇ ಹೆಚ್ಚಾಗಿದೆ.

ಒಂದು ಕಡೆ ಡಬ್ಬಿಂಗ್ ಅನ್ನು ಬಿಡದೆ, ಪರಭಾಷೆ ಚಿತ್ರಗಳಿಗೆ ಕಡಿವಾಣವೂ ಹಾಕದೇ ಇರೋದು ವಿಪರ್ಯಾಸವೇ ಸರಿ.

ಅಷ್ಟಿಲ್ಲದೇ ಹೇಳುತ್ತರಾ - ಬೇಲಿನೇ ಎದ್ದು ಹೊಲ ಮೇಯೋದು ಅಂತ?

English summary
It is glad that Puneet Starrer Paramathma is the first movie to be screened in Rockline cinemas multiplex theatre in Bangalore. But it is sad that Paramathma is the only Kannada movie screening here rest is occupied by non Kannada movies, KFCC is not taking action.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X