ತಮಿಳು ಕಲಾವಾಣಿ ರೀಮೇಕ್ ಚಿತ್ರದಲ್ಲಿ ಯಶ್

By Rajendra

ಕನ್ನಡ ಚಿತ್ರೋದ್ಯಮದಲ್ಲಿ ಈಗ ರೀಮೇಕ್ ಚಿತ್ರಗಳದ್ದೇ ಹವಾ. ತಮಿಳು, ತೆಲುಗಿನಲ್ಲಿ ಯಶಸ್ವಿಯಾದ ಆಕ್ಷನ್, ಸೆಂಟಿಮೆಂಟ್, ರೊಮ್ಯಾಂಟಿಕ್ ಚಿತ್ರಗಳನ್ನು ಈಗಾಗಲೆ ಕನ್ನಡಕ್ಕೆ ತರಲಾಗಿದೆ. ಈಗ ತಮಿಳಿನಲ್ಲಿ ಯಶಸ್ವಿಯಾದ ಹಾಸ್ಯ ಪ್ರಧಾನ ಚಿತ್ರ 'ಕಲಾವಾಣಿ' ಕನ್ನಡಕ್ಕೆ ರೀಮೇಕ್ ಆಗುತ್ತಿದೆ.

ಇಬ್ಬರು ಹಳ್ಳಿ ಯುವಕರು ಪ್ರೀತಿ, ಪ್ರೇಮದಲ್ಲಿ ಸಿಲುಕುವ ಕಥಾಹಂದರವನ್ನು ಈ ಚಿತ್ರ ಒಳಗೊಂಡಿದೆ. ಯಶ್ ಚಿತ್ರದ ನಾಯಕ ನಟ. ಮೂಲ ಚಿತ್ರದಲ್ಲಿ ಅಭಿನಯಿಸಿದ್ದ ಒವಿಯಾ ಚಿತ್ರದ ನಾಯಕಿ. ಯಶ್ ಅಭಿನಯಿಸುತ್ತಿರುವ ಚೊಚ್ಚಲ ರೀಮೇಕ್ ಚಿತ್ರ ಇದಾಗಿದೆ.

ತಮಿಳು ಚಿತ್ರದಲ್ಲಿ ನಾಯಕನ ಪಾತ್ರವನ್ನು ವಿಮಲ್ ಪೋಷಿಸಿದ್ದರು. ಚಿತ್ರದಲ್ಲಿನ ತಮ್ಮ ಪಾತ್ರಕ್ಕಾಗಿ ಯಶ್ ಹೇರ್ ಸ್ಟೈಲನ್ನು ಬದಲಾಯಿಸಿಕೊಂಡಿದ್ದಾರೆ. ಕನ್ನಡ ಚಿತ್ರಕ್ಕಾಗಿ ಒವಿಯಾ ಸಹ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಲಿದ್ದಾರೆ ಎನ್ನುತ್ತವೆ ಮೂಲಗಳು.

ಏತನ್ಮಧ್ಯೆ ಯಶ್ ಅಭಿನಯದ ಎರಡು ಚಿತ್ರಗಳು 'ಮೊದಲಾಸಲ' ಹಾಗೂ 'ರಾಜಧಾನಿ' ಬಿಡುಗಡೆಗೆ ಸಿದ್ಧವಾಗಿವೆ. ಜಾಹೀರಾತುಗಳನ್ನು ನಿರ್ಮಿಸುತ್ತಿದ್ದ ಪ್ರದೀಪ್ ರಾಜ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರಲಿದೆ. ಮೈಸೂರು, ಮಂಡ್ಯ ಹಾಗೂ ಕಾವೇರಿಯ ನದಿ ತೀರಗಳಲ್ಲಿ ಚಿತ್ರೀಕರಣ ನಡೆಯಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X