twitter
    For Quick Alerts
    ALLOW NOTIFICATIONS  
    For Daily Alerts

    ಕರ್ನಾಟಕದಲ್ಲಿ ರು.1.80 ಕೋಟಿ ಬಾಚಿದ ತೆಲುಗು ರಚ್ಚ

    By Rajendra
    |

    ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳಿಗೆ ಬೇಜಾನ್ ಮಾರ್ಕೆಟ್ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪರಭಾಷಾ ಚಿತ್ರಗಳಿಗೆ ಬ್ರೇಕ್ ಹಾಕುವಲ್ಲಿ ಫಿಲಂ ಚೇಂಬರ್ ಪದೇ ಪದೇ ಮುಗ್ಗರಿಸುತ್ತಲೇ ಇದೆ. ತೆಲುಗು, ತಮಿಳು ಚಿತ್ರಗಳು ಮಾತ್ರ ಭರ್ಜರಿ ಪ್ರದರ್ಶನ ಕಾಣುತ್ತಾ ಬಾಕ್ಸಾಫೀಸ್ ಕೊಳ್ಳೆಹೊಡೆಯುತ್ತಿವೆ.

    ಇತ್ತೀಚೆಗೆ ತೆರೆಕಂಡ ರಾಮ್ ಚರಣ್ ತೇಜ ಅಭಿನಯದ ಭಾರಿ ಬಜೆಟ್ ಚಿತ್ರ 'ರಚ್ಚ' ಕರ್ನಾಟಕದಲ್ಲಿ ಒಂದೇ ವಾರದಲ್ಲಿ ರು.1.80 ಕೋಟಿ ಬಾಚಿದೆಯಂತೆ. ಈ ಚಿತ್ರ ಫಿಲಂ ಚೇಂಬರ್ ನೀತಿ ನಿಯಮಗಳನ್ನು ಗಾಳಿಗೆ ತೂರಿ 35ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು.

    ಬೆಂಗಳೂರು ಸೇರಿದಂತೆ ರಾಜ್ಯದ ಗಡಿ ಪ್ರದೇಶಗಳಲ್ಲೂ 'ರಚ್ಚ' ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಈ ಹಿಂದೆ ಮಹೇಶ್ ಬಾಬು ಅಭಿನಯದ 'ದೂಕುಡು' ಚಿತ್ರವೂ ಬಾಕ್ಸಾಫೀಸ್ ನುಚ್ಚು ನೂರು ಮಾಡಿದ್ದು. ಇನ್ನೇನು ಜೂನಿಯರ್ ಎನ್ಟಿಆರ್ ಅಭಿನಯದ 'ದಮ್ಮು' ಚಿತ್ರ ಬಿಡುಗಡೆಯಾಗುತ್ತಿದೆ. ಕತೆ ಹೀಗೇ ಮುಂದುವರಿದರೆ ಕನ್ನಡ ಚಿತ್ರಗಳ ಗತಿ ಗೋವಿಂದಾ ಗೋವಿಂದ. (ಒನ್‌ಇಂಡಿಯಾ ಕನ್ನಡ)

    English summary
    According to a trader, Racha has approximately raked in Rs 1.80 crore in Karnataka. The movie was released in the state in more than 36 theatres. While cinema halls in Bangalore ran into packed houses, other places witnessed above average occupancy. Especially, the border regions like Raichur witnessed 100% occupancy in the first weekend.
    Wednesday, April 11, 2012, 12:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X