»   » ಆದಿ ಲೋಕೇಶ್‌ ಕೈಗೆ ಮಚ್ಚು... ‘ಪೂಜಾರಿ’ ಬಂದೇ ಬಿಟ್ಟನಲ್ಲಪ್ಪೋ!

ಆದಿ ಲೋಕೇಶ್‌ ಕೈಗೆ ಮಚ್ಚು... ‘ಪೂಜಾರಿ’ ಬಂದೇ ಬಿಟ್ಟನಲ್ಲಪ್ಪೋ!

Subscribe to Filmibeat Kannada

ಕನ್ನಡಕ್ಕೆ ಹೊಸ ನಾಯಕನ ಸೇರ್ಪಡೆ! ಎಂದಿನಂತೆಯೇ ಮಚ್ಚಿನ ಸಮೇತ!

ಈತನ ಹೆಸರು ಆದಿ ಲೋಕೇಶ್‌ ಅಂದರೆ ನಿಮಗೆ ಗುರ್ತಿಸಲು ಕಷ್ಟವಾಗಬಹುದು. ಈತ ‘ಜೋಗಿ’ ಚಿತ್ರದ ಬಿಡ್ಡನ ಪಾತ್ರಧಾರಿ ಎಂದರೆ ನಿಮಗೆ ಬೇಗ ನೆನಪಾಗಬಹುದು! ನೀಳ ಕಾಯದ, ಮಿಂಚು ಕಣ್ಣಿನ ಈ ಸುಂದರ ತನ್ನ ಪುಟ್ಟ ಪಾತ್ರದ ಮೂಲಕವೇ ಪ್ರೇಕ್ಷಕರನ್ನು ಸೆಳೆದಿದ್ದ. ಆ ಪಾತ್ರಕ್ಕಾಗಿ ಈಟೀವಿ-ವಾಟಿಕಾ ‘ಅತ್ಯುತ್ತಮ ಖಳನಟ’ ಪ್ರಶಸ್ತಿ ಕೂಡ ಬಾಚಿಕೊಂಡಿದ್ದ.

ಆದಿ ಲೋಕೇಶ್‌ಗೀಗ ನಾಯಕ ಸ್ಥಾನದ ಬಡ್ತಿ ಸಿಕ್ಕಿದೆ. ಅವರ ಅಭಿನಯದ ‘ಪೂಜಾರಿ’ ಚಿತ್ರದ ಮುಹೂರ್ತ ಸಮಾರಂಭ ನಗರದ ರಾಜಾಜೀನಗರದ ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ನೆರವೇರಿತು. ‘ಕುಳ್ಳರ ಲೋಕ’ ಮತ್ತು ‘ಡಾ.ಅಂಬೇಡ್ಕರ್‌’ ಚಿತ್ರದ ನಿರ್ಮಾಪಕ ಶರಣ್‌, ಪೂಜಾರಿಯ ನಿರ್ಮಾಪಕ. ಜೊತೆಗೆ ನಿರ್ದೇಶಕರೂ ಹೌದು. ಏ.25ರಿಂದ ಚಿತ್ರೀಕರಣ ಮೂರು ಹಂತದಲ್ಲಿ ಆರಂಭವಾಗಲಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಚಿತ್ರದ ಸಂಭಾಷಣೆಗಾರ ಕೇಶವ ಆದಿತ್ಯ, ಚಿತ್ರಕ್ಕೆ ತಮ್ಮದೇ ಆದ ಟಚ್‌ ನೀಡಿರುವುದಾಗಿ ಹೇಳುತ್ತಾರೆ. ‘ಪೂಜಾರಿ’ ಅರ್ಥವನ್ನು ಅವರ ಬಾಯಲ್ಲಿಯೇ ಹೇಳಿದರೆ ನೀವು ಗಾಬರಿಗೊಳ್ಳುವಿರಿ. ‘ಪೂಜಾರಿ ಅಂದ್ರೆ ಸುಮ್ಮನೆ ಅಲ್ಲಾ ಸಾರ್‌. ಪೂ ಅಂದರೆ ಪೂಜೆ ಮಾಡ್ತಾ, ಜಾ ಅಂದರೆ ಜಾತಕ ನೋಡ್ತಾ,.. ರಿ ಅಂದರೆ ರೀಪೇರಿ ಮಾಡೋನು ಪೂಜಾರಿ ಸಾರ್‌’ ಎಂದು ಕೇಶವ ಆದಿತ್ಯ ಪುಳಕಿತರಾದರು.

ಮತ್ತೊಂದು ‘ಹೊಡಿ--ಬಡಿ-ಕೊಚ್ಚು’ ಎಂಬ ಮಚ್ಚಿನ ಚಿತ್ರ ಸಿದ್ಧವಾಗುತ್ತಿದೆ. ಬ್ರಾಹ್ಮಣರ ಹುಡುಗರು ರೌಡಿಗಳಾಗುವ ಚಿತ್ರಗಳು ನಮಗೆ ಗೊತ್ತು(ಓಂ, ಶಾಸ್ತ್ರಿ , ಇತ್ಯಾದಿ). ಈ ಪೂಜಾರಿ ಚಿತ್ರದಲ್ಲೂ ತೀರ್ಥ ನೀಡೋ ಕೈ ಮಚ್ಚು ಹಿಡಿಯುತ್ತಂತೆ. ಸಂಧ್ಯಾವಂದನೆ ಮಾಡೋ ದೇಹ ಇನ್ನೇನೋ ಮಾಡುತ್ತಂತೆ! ಸರಿ, ಕಾದು ನೋಡೋಣ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada