»   » ಅಪ್ಪು ಪಪ್ಪು ಮೂಲಕಕನ್ನಡಕ್ಕೆ ಮರಳಿದ ಅಬ್ಬಾಸ್

ಅಪ್ಪು ಪಪ್ಪು ಮೂಲಕಕನ್ನಡಕ್ಕೆ ಮರಳಿದ ಅಬ್ಬಾಸ್

Subscribe to Filmibeat Kannada
'ಅಪ್ಪ್ಪು ಪಪ್ಪು' ಚಿತ್ರಕ್ಕಾಗಿ ಒರಾಂಗುಟಾನ್ (ಒಂದು ಬಗೆಯ ಕೋತಿ, ದೊಡ್ಡ ನರವಾನರ) ಸೆರೆಹಿಡಿಯಲು ಕಾಂಬೋಡಿಯಾಗೆ ಚಿತ್ರತಂಡ ಪ್ರಯಾಣ ಬೆಳೆಸಿದೆ. ಈ ಮೂಲಕ ಒರಾಂಗುಟಾನ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದೆ. ಇಪ್ಪತ್ತು ದಿನಗಳ ಚಿತ್ರೀಕರಣದಲ್ಲಿ ಒರಾಂಗುಟಾನ್ ಪಾಲ್ಗೊಳ್ಳಲಿದೆ. ಸೌಂದರ್ಯ ಜಗದೀಶ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಅನಂತರಾಜು.

ಚಿತ್ರಕ್ಕಾಗಿ ಒರಾಂಗುಟಾನ್ ಬಳಕೆ ಮಾಡಿಕೊಳ್ಳುವುಕ್ಕೆ ಸೌಂದರ್ಯ ಜಗದೀಶ್ ಗೆ ಅನುಮತಿಯೂ ಸಿಕ್ಕಿದೆ. 'ಮಸ್ತ್ ಮಜಾ ಮಾಡಿ' ಚಿತ್ರದ ಹಾಡಿನಲ್ಲಿ ಕುಣಿದಿದ್ದ ಮಾಸ್ಟರ್ ಸ್ನೇಹಿತ್ 'ಅಪ್ಪು ಪಪ್ಪು' ಚಿತ್ರದಲ್ಲಿ ಗಮನಾರ್ಹ ಪಾತ್ರಧಾರಿ. 'ಶಾಂತಿ ಶಾಂತಿ ಶಾಂತಿ' ಚಿತ್ರದ ಬಳಿಕ ತಮಿಳು ಚಿತ್ರನಟ ಅಬ್ಬಾಸ್ ಮತ್ತೆ ಕನ್ನಡಕ್ಕೆ ಅಪ್ಪು ಪಪ್ಪು ಮೂಲಕ ಹಿಂತಿರುಗುತ್ತಿದ್ದಾರೆ.

ಕಾಂಬೊಡಿಯಾ ಮತ್ತು ಬ್ಯಾಂಕಾಕ್ ನಲ್ಲಿ 20 ದಿನಗಳ ಕಾಲ ಅಪ್ಪು ಪಪ್ಪು ಚಿತ್ರೀಕರಣ ನಡೆಯಲಿದೆ. ಜನವರಿ 20ರಂದು ಕಾಂಬೋಡಿಯಾದಲ್ಲಿ ಚಿತ್ರೀಕರಣ ಆರಂಭವಾಗಲಿದ್ದು ಉಳಿದ ಭಾಗದ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ನಡೆಸುವುದಾಗಿ ಚಿತ್ರದ ನಿರ್ಮಾಪಕರು ತಿಳಿಸಿದ್ದಾರೆ.

'ಜಿಂಕೆ ಮರಿ' ರೇಖಾ ಚಿತ್ರದ ನಾಯಕಿ. ಕೋಮಲ್ ಕುಮಾರ್ ಮತ್ತು ರಂಗಾಯಣ ರಘು ಉಳಿದ ಪಾತ್ರವರ್ಗದಲ್ಲಿದ್ದಾರೆ. ಚಿಂಪಾಂಜಿಯನ್ನು ಈ ಹಿಂದೆಯೂ ಕನ್ನಡ ಚಿತ್ರದಲ್ಲಿ ಬಳಸಿಕೊಳ್ಳುವ ಪ್ರಯತ್ನ ನಡೆದಿತ್ತು. ಆ ಪ್ರಯತ್ನವನ್ನು ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಮಾಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. 'ಕಾಳಿದಾಸ ಲವಲ್ಲಿ ಬಿದ್ದ' ಚಿತ್ರದ ಬಳಿಕ ಕಾಂಬೋಡಿಯಾದಲ್ಲಿ ಚಿತ್ರೀಕರಣ ನಡೆಸುತ್ತಿರುವ ಎರಡನೇ ಕನ್ನಡ ಚಿತ್ರ 'ಅಪ್ಪು ಪಪ್ಪು'.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada