ನಟ, ನಿರ್ದೇಶಕ ಎಂ ಎಸ್ ಕಾರಂತ್ ಇನ್ನು ನೆನಪು ಮಾತ್ರ

By Rajendra

M S Karanth passes away
ಕನ್ನಡ ಚಿತ್ರರಂಗದ ನಟ, ನಿರ್ದೇಶಕ ಹಾಗೂ ರಂಗಕರ್ಮಿ ಎಂ ಶ್ರೀನಿವಾಸ ಕಾರಂತ್ (67) ಭಾನುವಾರ ಮುಂಜಾನೆ ಇಹಲೋಕಕ್ಕೆ ಗುಡ್ ಬೈ ಹೇಳಿದ್ದಾರೆ. ಪೋಷಕ ನಟನಾಗಿ ಕಾರಂತ್ ಅವರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೋಮಾದಲ್ಲಿದ್ದರು.

ಕಿರುತೆರೆ, ಹಿರಿತೆರೆ ಹಾಗೂ ಚಲನಚಿತ್ರ ನಟನೆ, ನಿರ್ದೇಶನ, ನಿರ್ಮಾಣದಲ್ಲೂ ಕಾರಂತ್ ಗುರುತಿಸಿಕೊಂಡಿದ್ದರು. ಮಧುಮೇಹದಿಂದ ಬಳಲುತ್ತಿದ್ದ ಅವರು ಹನುಮಂತನಗರದ ಶೇಖರ್ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಪುಟ್ಟಣ್ಣ ಕಣಗಾಲರ ಗೆಜ್ಜೆಪೂಜೆ ಬಳಿಕ ಅವರು ಸರಿಸುಮಾರು 10 ವರ್ಷ ಚಿತ್ರರಂಗದಿಂದ ದೂರ ಸರಿದಿದ್ದರು. ಆಕ್ರೋಶ, ಪ್ರೀತಿ ವಾತ್ಸಲ್ಯ, ಜೀವನ ಚಕ್ರ, ಪೂರ್ಣಚಂದ್ರ, ಅಂತಿಮ ಘಟ್ಟ, ಪ್ರಜಾಪ್ರಭುತ್ವ, ಕೃಷ್ಣ ಮೆಚ್ಚಿದರಾಧೆ, ಗಂಡದ್ರೆ ಗಂಡು, ಪದ್ಮವ್ಯೂಹ, ಡಾ.ಕೃಷ್ಣ, ಚಪಲ ಚೆನ್ನಿಗರಾಯ, ಅಶ್ವಮೇಧ, ಹೊಸ ಜೀವನ, ಗಂಡನಿಗೆ ತಕ್ಕ ಹೆಂಡ್ತಿ, ರೆಡಿ ಮೇಡ್ ಗಂಡ, ನಗುನಗುತಾ ನಲಿ, ಕರುಳಿನ ಕೂಗು ಸೇರಿದಂತೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Kannada films renowned actor and directo MS Karanth (67) passes away on Sunday at Shekar Nursing Home in Hanumanthnagar, Bangalore. he acted in films like Aakrosha, Preethi Vatsalya, Jeevana Chakra, Poorna Chandra, Anthima Ghatta and many more movies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X