ಏಕಾಂಗಿಯಾಗಿ ಏನೂ ಮಾಡಲು ಸಾಧ್ಯವಿಲ್ಲ: ಶಿವಣ್ಣ
ಈ 25 ವರ್ಷಗಳಲ್ಲಿ ಈ ಗುರಿಯನ್ನು ಮುಟ್ಟಲು ಸಹಕರಿಸಿದ ಎಲ್ಲ ನಿರ್ಮಾಪಕರು, ನಿರ್ದೇಶಕರನ್ನು ಶಿವಣ್ಣ ಸನ್ಮಾನಿಸಿದರು. ಜೀವನದಲ್ಲಿ ಏಕಾಂಗಿಯಾಗಿ ಏನೂ ಸಾಧಿಸಲು ಸಾಧ್ಯವಿಲ್ಲ. ಐದು ಬೆರಳು ಸೇರಿದರೇನೆ ಮುಷ್ಠಿ ಬಿಗಿಯಲು ಸಾಧ್ಯ ಎಂಬ ಮಾತನ್ನು ಶಿವಣ್ಣ ನೂರಕ್ಕೆ ನೂರರಷ್ಟು ಸತ್ಯ ಎನ್ನುತ್ತಾರೆ. ತನ್ನ ವೃತ್ತಿ ಜೀವನದಲ್ಲಿ ಸಹಕರಿಸಿದ ಎಲ್ಲರಿಗೂ ಶಿವಣ್ಣ ವಂದನೆ, ಅಭಿನಂದನೆಗಳನ್ನು ತಿಳಿಸಿ ಕೃತಾರ್ಥರಾದರು. [ಚಿತ್ರಪಟ ನೋಡಿರಿ]
ನನ್ನ ಸಿನಿ ಪಯಣದಲ್ಲಿ ಯಾರಿಗಾದರೂ ನನ್ನಿಂದ ನೋವಾಗಿದ್ದರೆ ಕ್ಷಮಿಸಿ. ಬೇಕು ಎಂತಲೇ ನಾನು ಯಾವ ತಪ್ಪು ಮಾಡಿಲ್ಲ. ಒಂದು ವೇಳೆ ಹಾಗೇನಾದರೂ ಆಗಿದ್ದರೆ ಅದು ಕೇವಲ ಸಿನಿಮಾದ ದೃಷ್ಟಿಯಿಂದಲೇ ಹೊರತು ಇನ್ಯಾವ ವೈಯಕ್ತಿಕ ಉದ್ದೇಶದಿಂದಲೂ ಅಲ್ಲ. ತಿಳಿದೋ ತಿಳಿಯದೆಯೋ ನನ್ನಿಂದ ತಪ್ಪಾಗಿದ್ದರೆ ಮನ್ನಿಸಿ ಎಂದು ವಿನಮ್ರರಾಗಿ ನುಡಿದರು.
ಬಳಿಕ ಶಿವಣ್ಣನ ಮಾತು ತನ್ನ ಸಹದ್ಯೋಗಿಗಳ ಕಡೆಗ ಹರಿಯಿತು. ಕೈಲಾಸಂ(ನೃತ್ಯ ನಿರ್ದೇಶಕ) ಮತ್ತು ಸ್ವಾಮಿ(ಸ್ಟಂಟ್ ಮಾಸ್ಟರ್) ಅವರನ್ನು ನೋಡಿದಾಗ ಇವರಿಬ್ಬರೂ ನನ್ನ ಕಣ್ಣುಗಳಿದ್ದಂತೆ. ಇವರ ಬಗ್ಗೆ ನನಗೆ ತುಂಬ ಭಾವನಾತ್ಮಕ ಸಂಬಂಧವಿದೆ. ಇನ್ನು ರಾಘಣ್ಣನ ಬಗ್ಗೆ ಹೇಳಬೇಕೆಂದರೆ ಅವರು ನನ್ನ ತಮ್ಮ ಅನ್ನುವುದಕ್ಕಿಂತ ದೊಡ್ಡಣ್ಣ ಇದ್ದಂತೆ. ಅವರ ಸಹಕಾರ ಇಲ್ಲದಿದ್ದರೆ ನಾನು ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ. ನನ್ನ ಪತ್ನಿ ಕೂಡ ಸಾಕಷ್ಟು ಶ್ರಮಿಸಿದ್ದಾರೆ. ಅವರೆಲ್ಲರಿಗೂ ನಾನು ಚಿರಋಣಿಯಾಗಿರುತ್ತೇನೆ ಎಂದಿದ್ದಾರೆ ಶಿವಣ್ಣ.


Click it and Unblock the Notifications












