»   » ಮಲಯಾಳಂ ಭಾಷೆಗೆ 'ಲವ್ ಗುರು' ಡಬ್

ಮಲಯಾಳಂ ಭಾಷೆಗೆ 'ಲವ್ ಗುರು' ಡಬ್

Posted By:
Subscribe to Filmibeat Kannada

ಪ್ರಶಾಂತ್ ರಾಜ್ ನಿರ್ದೇಶನದ 'ಲವ್ ಗುರು' ಚಿತ್ರ ಮಲಯಾಳಂ ಭಾಷೆಗೆ ಡಬ್ ಆಗುತ್ತಿದೆ. ತರುಣ್ ಮತ್ತು ರಾಧಿಕಾ ಪಂಡಿತ್ ಈ ಚಿತ್ರದಲ್ಲಿ ನಟಿಸಿದ್ದರು. ಸರಳ, ಕೌಟುಂಬಿಕ, ಮನರಂಜನಾತ್ಮಾಕ ಚಿತ್ರ ಇದಾಗಿದ್ದು ಜನವರಿ1, 2010ಕ್ಕೆ ಕೇರಳದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಪ್ರಥಮ್ (ತರುಣ್) ಮತ್ತು ಖುಷಿ (ರಾಧಿಕಾ ಪಂಡಿತ್) ಸುತ್ತ 'ಲವ್ ಗುರು' ಕತೆ ಸುತ್ತ್ತುತ್ತದೆ. ಇಬ್ಬರು ಒಂದೇ ದಿನ ಸಾಫ್ಟ್ ವೇರ್ ಕಂಪನಿಯೊಂದಕ್ಕೆ ಸೇರುತ್ತಾರೆ. ಖುಷಿಯ ಸ್ವಭಾವ ಪ್ರಥಮ್ ಗೆ ಇಷ್ಟವಾಗುತ್ತದೆ. ಆಕೆಯ ಕಡೆಗೆ ಆಕರ್ಷಿತನಾಗುತ್ತಾನೆ. ಕಡೆಗೆ ಪ್ರೇಮಪಾಶಕ್ಕೆ ಸಿಲುಕುತ್ತಾನೆ. ಆದರೆ ಕಡೆಗೆ ತನ್ನ ಪ್ರೇಮ ನಿವೇದನೆಯನ್ನು ಖುಷಿಗೆ ತಿಳಿಸುವಲ್ಲಿ ವಿಫಲನಾಗುತ್ತಾನೆ.

ಜೋಶುವಾ ಶ್ರೀಧರ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದರು. ಜ್ಞಾನಮೂರ್ತಿ ಛಾಯಾಗ್ರಹಣವಿದ್ದ 'ಲವ್ ಗುರು' ಚಿತ್ರವನ್ನು ನವೀನ್ ನಿರ್ಮಿಸಿದ್ದರು. ವಿಶೇಷ ಪಾತ್ರದಲ್ಲಿ ದಿಲೀಪ್ ರಾಜ್ ಸಹ ನಟಿಸಿದ್ದು ಜಯಂತ ಕಾಯ್ಕಿಣಿ, ಪ್ರಶಾಂತ್, ವಿ ನಾಗೇಂದ್ರ ಪ್ರಸಾದ್ ಮತ್ತು ಕವಿರಾಜ್ ಅವರ ಸಾಹಿತ್ಯ ಚಿತ್ರಕ್ಕಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada