ನೆರೆಯವರಿಗೆ 'ಹೊರೆ'ಯಾದ ಚಿತ್ರನಟಿ ರಂಜಿತಾ
ಸ್ವಾಮಿ ನಿತ್ಯಾನಂದ ಪ್ರಕರಣದಿಂದ ದಿಢೀರನೆ ಹೆಸರು ಮಾಡಿದ ನಟಿ ರಂಜಿತಾಗೆ ನೆರೆಹೊರೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಚೆನ್ನೈನ ಆಕೆಯ ಮನೆಯ ಅಕ್ಕಪಕ್ಕ ಇರುವವರು ಕೂಡಲೆ ಮನೆ ಖಾಲಿ ಮಾಡುವಂತೆ ಆಕೆಗೆ ಒತ್ತಾಯ ಹೇರುತ್ತಿದ್ದಾರೆ.
ಪ್ರಸ್ತುತ ರಂಜಿತಾ ಚೆನ್ನೈನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಟಿ ನಗರದಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿನ ನಿವಾಸಿಗಳಿಗೆ ರಂಜಿತಾ ಅಲ್ಲಿರುವುದು ಇಷ್ಟವಿಲ್ಲ. ಹಾಗಾಗಿ ಎಲ್ಲರೂ ಒಟ್ಟಿಗೆ ಆಕೆಯನ್ನು ಮನೆ ಖಾಲಿ ಮಾಡುವಂತೆ ತೀವ್ರ ಒತ್ತಡ ಹೇರುತ್ತಿದ್ದಾರೆ. ತಮ್ಮ ಮಕ್ಕಳು ಎಲ್ಲಿ ಹಾದಿ ತಪ್ಪುತ್ತಾರೋ ಎಂಬ ಭಯ ಅಲ್ಲಿನ ನಿವಾಸಿಗಳಿಗೆ ಕಾಡುತ್ತಿದೆಯಂತೆ.
ಸ್ವಾಮಿ ನಿತ್ಯಾನಂದ ರಾಸಲೀಲೆ ಪ್ರಕರಣ ಬಯಲಾಗುತ್ತಿದ್ದಂತೆ ನಟಿ ರಂಜಿತಾ ನಾಪತ್ತೆಯಾಗಿದ್ದರು. ಆಗ ಅವರು ಇದೇ ಬಡಾವಣೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಈಗ ಪ್ರಕರಣ ತಣ್ಣಗಾದ ಬಳಿಕ ಪುನಃ ಅವರು ಟಿ ನಗರಕ್ಕೆ ಹಿಂತಿರುಗಿದ್ದು ಇಲ್ಲೇ ವಾಸಿಸುತ್ತಿದ್ದಾರೆ. ಆದರೆ ಇಲ್ಲಿನ ನಿವಾಸಿಗಳಿಗೆ ಆಕೆ ಅಲ್ಲಿರುವುದು ಸುತಾರಾಂ ಇಷ್ಟವಿಲ್ಲವಂತೆ. [ಸ್ವಾಮಿ ನಿತ್ಯಾನಂದ]


Click it and Unblock the Notifications











