»   » ತೆಲುಗು 'ಆಪ್ತರಕ್ಷಕ'ನಾಗಿ ವಿಕ್ಟರಿ ವೆಂಕಟೇಶ್

ತೆಲುಗು 'ಆಪ್ತರಕ್ಷಕ'ನಾಗಿ ವಿಕ್ಟರಿ ವೆಂಕಟೇಶ್

Posted By:
Subscribe to Filmibeat Kannada

'ಆಪ್ತರಕ್ಷಕ' ತೆಲುಗು ಅವತರಣಿಕೆಯಲ್ಲಿ ನಾಯಕ ನಟ ಯಾರು? ಎಂಬ ಬಗ್ಗೆ ನಡೆಯುತ್ತಿದ್ದ ಚರ್ಚೆಗೆ ಕಡೆಗೂ ತೆರೆಬಿದ್ದಿದೆ. ತೆಲುಗು, ತಮಿಳು ರೀಮೇಕ್ ನಲ್ಲಿ ರಜನಿಕಾಂತ್ ನಟಿಸಲಿದ್ದಾರೆ ಎಂಬ ಬಗ್ಗೆ ಸುದ್ದಿ ಹಬ್ಬಿತ್ತು. ಹಾಗೆಯೇ ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಹೆಸರು ಕೇಳಿಬಂದಿತ್ತು. ಆದರೆ ಈಗ ಈ ಎಲ್ಲಾ ಊಹಾಪೋಹಗಳು ಸುಳ್ಳಾಗಿವೆ.

'ಆಪ್ತರಕ್ಷಕ' ರೀಮೇಕ್ ಹಕ್ಕುಗಳನ್ನು ಖರೀದಿಸಲು ತೆಲುಗು ಚಿತ್ರೋದ್ಯಮದಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಕಡೆಗೆ ಆಪ್ತರಕ್ಷಕ ರೀಮೇಕ್ ಹಕ್ಕುಗಳು ತೆಲುಗು ಚಿತ್ರೋದ್ಯಮದ ನಿರ್ಮಾಪಕ ಬೆಲ್ಲಂಕೊಂಡ ಸುರೇಶ್ ಪಾಲಾಗಿವೆ. ಆಪ್ತರಕ್ಷಕ ತೆಲುಗು ರೀಮೇಕ್ ಗೆ ನಾಯಕ ನಟನಾಗಿ ವಿಕ್ಟರಿ ವೆಂಕಟೇಶ್ ಆಯ್ಕೆಯಾಗಿದ್ದಾರೆ.ತೆಲುಗು ಅವರತರಣಿಕೆಯ ನಿರ್ದೇಶನ ಜವಾಬ್ದಾರಿಯನ್ನು ಪಿ.ವಾಸು ಅವರೆ ವಹಿಸಿಕೊಳ್ಳಲಿದ್ದಾರೆ. ಮೇ ತಿಂಗಳಿಂದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರಕ್ಕೆ ತೆಲುಗಿನಲ್ಲಿ ಚಂದ್ರಮುಖಿ ಭಾಗ2 ಎಂದು ಹೆಸರಿಡಲು ಚಿಂತನೆ ನಡೆದಿದೆ.

ಈ ಕುರಿತು ಮಾತನಾಡುತ್ತಿದ್ದ ಬೆಲ್ಲಂಕೊಂಡ ಸುರೇಶ್, 'ಆಪ್ತಮಿತ್ರ' ದಂತಹ ದಾಖಲೆ ಚಿತ್ರ ನೀಡಿದವರು ನಿರ್ದೇಶಕ ಪಿ ವಾಸು. ಅವರ 'ಆಪ್ತರಕ್ಷಕ' ಚಿತ್ರ ಸಹ ಹೊಸ ದಾಖಲೆ ಬರೆಯುತ್ತಿದೆ. ಆ ಚಿತ್ರದ ರೀಮೇಕ್ ಹಕ್ಕುಗಳು ನಮಗೆ ದಕ್ಕಿದ್ದು ತುಂಬ ಸಂತೋಷವಾಗಿದೆ. ಈ ಚಿತ್ರವನ್ನು ನೋಡಿದ ಕೂಡಲೆ ವೆಂಕಟೇಶ್ ಉತ್ಸಾಹದಿಂದ ಚಿತ್ರದಲ್ಲಿ ನಟಿಸುವುದಾಗಿ ತಿಳಿಸಿದರು ಎಂದ್ದಿದ್ದಾರೆ.

ಹೊಸ ರೀತಿಯಲ್ಲಿ ಕತೆ,ಚಿತ್ರಕತೆ ಸಾಗಲಿದೆ. ಎಲ್ಲರಿಗೂ ಮೆಚ್ಚುಗೆಯಾಗುವಂತೆ ಚಿತ್ರವನ್ನು ನಿರ್ಮಿಸಲಿದ್ದೇವೆ. ಭಾರಿ ತಾರಾಗಣ, ತಾಂತ್ರಿಕ ವರ್ಗ ಚಿತ್ರಕ್ಕಿರುತ್ತದೆ. ಈ ಚಿತ್ರ ವೆಂಕಟೇಶ್ ಗೆ ಉತ್ತಮ ಹೆಸರು ತರುವ ಮತ್ತೊಂದು ಚಿತ್ರವಾಗುವುದರಲ್ಲಿ ಯಾವುದೆ ಸಂಶವಿಲ್ಲ. ಚಿತ್ರಕ್ಕೆ ಸಂಬಂಧಿಸಿದವಿವರಗಳನ್ನು ಶೀಘ್ರದಲ್ಲೆ ತಿಳಿಸಲಿದ್ದೇವೆ ಎಂದು ಸುರೇಶ್ ಹೇಳಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada