»   » ವಿಷ್ಣು ಚಿತ್ರಕ್ಕೆ ನಾವು ಸ್ಪರ್ಧಿಗಳಲ್ಲ: ಸುದೀಪ್

ವಿಷ್ಣು ಚಿತ್ರಕ್ಕೆ ನಾವು ಸ್ಪರ್ಧಿಗಳಲ್ಲ: ಸುದೀಪ್

Subscribe to Filmibeat Kannada

ದಿವಂಗತ ವಿಷ್ಣುವರ್ಧನ್ ಅಭಿನಯದ ಕೊನೆಯ ಎರಡು ಚಿತ್ರಗಳಾದ 'ಸ್ಕೂಲ್ ಮಾಸ್ಟರ್' ಮತ್ತು ಬಹು ನಿರೀಕ್ಷಿತ 'ಆಪ್ತರಕ್ಷಕ' ಚಿತ್ರಗಳು ಕ್ರಮವಾಗಿ ಜನವರಿ 22 ಮತ್ತು ಫೆಬ್ರವರಿ 5ರಂದು ತೆರೆ ಕಾಣಲು ಸಜ್ಜಾಗಿವೆ. ವಿಷ್ಣುಗೆ ಗೌರವ ಸಲ್ಲಿಸಲು ಅವರ ಚಿತ್ರ ಬಿಡುಗಡೆಯಾಗುವಾಗ ಬೇರೆ ಚಿತ್ರಗಳು ಬಿಡುಗಡೆಯಾಗದಿದ್ದರೆ ಒಳ್ಳೆಯದು. ಹೀಗೆಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಅವರು ಸ್ಕೂಲ್ ಮಾಸ್ಟರ್ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಹೇಳಿದ್ದರು.

ಬಿಡುಗಡೆಗೆ ಸಿದ್ಧವಾಗಿದ್ದ ಮತ್ತೆರಡು ಬಹು ನಿರೀಕ್ಷಿತ ಚಿತ್ರಗಳಾದ 'ಜಸ್ಟ್ ಮಾತ್ ಮಾತಲ್ಲಿ' ಮತ್ತು 'ಪೊರ್ಕಿ' ಚಿತ್ರಗಳನ್ನು ಗಮನದಲ್ಲಿಟ್ಟುಕೊಂಡು ಜಯಮಾಲಾ ಅವರು ಮೇಲಿನ ಮಾತುಗಳನ್ನು ಹೇಳಿದ್ದರು. ಜಯಮಾಲ ಅವರು ತಮ್ಮ ಅಭಿಪ್ರಾಯ ತಿಳಿಸಿದ ಬೆನ್ನಲ್ಲೇ ಸುದೀಪ್ ಈ ಬಗ್ಗೆ ತನ್ನ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಸುದೀಪ್ ಎತ್ತಿದ ಪ್ರಶ್ನೆಗಳು, ತೋಡಿಕೊಂಡ ಅಸಮಾಧಾನ ಹೀಗಿದೆ.

ಬಿಡುಗಡೆಯಾಗುತ್ತಿರುವುದು ವಿಷ್ಣು ಸರ್ ಚಿತ್ರ ಸುದೀಪ್ ಚಿತ್ರವಲ್ಲ. ವಿಷ್ಣು ಚಿತ್ರಗಳಿಗೆ ನಾವು ಸ್ಪರ್ಧೆ ನೀಡಲಾಗುತ್ತದೆಯೇ? ವಿಷ್ಣುವರ್ಧನ್ ಚಿತ್ರ ನೋಡಿ ಕಲಿತವರುನಾವು. ಅವರ ಮುಂದೆ ನಾವೆಲ್ಲಾ ಮಕ್ಕಳು. ಅವರ ಬಗ್ಗೆ ನಮಗೆ ಬಹಳ ಗೌರವವಿದೆ. ಅವರಿಗೆ ಗೌರವ ಕೊಡುವುದು ಯಾರಿಂದಲೂ ಕಲಿಯ ಬೇಕಾಗಿಲ್ಲ ಎಂದು ಜಯಮಾಲಾರನ್ನು ಪರೋಕ್ಷವಾಗಿ ಚುಚ್ಚಿದ್ದಾರೆ.

ಬದುಕ್ಕಿದ್ದಾಗಲೇ ಸಿನಿಮಾ ತರಹದಲ್ಲೇ ಬದುಕಿದವರು. ಅವರ ನಟನೆ ಮತ್ತು ಜೀವನ ಶೈಲಿಯನ್ನು ನೋಡಿ ಬಹಳಷ್ಟು ಕಲಿತಿದ್ದೇನೆ. ಅವರ ಹೆಸರಿನಲ್ಲಿ ಕಿತ್ತಾಟ ಬೇಡ. ನಮ್ಮ ಚಿತ್ರಗಳ ಮಧ್ಯೆ ಪೈಪೋಟಿ ಬೇಡ ಎಂದು ಮುಂಚಿನಿಂದಲೂಒ ವಾದ ಮಾಡುತ್ತಲೇ ಬಂದಿದ್ದೇನೆ. ನಿರ್ಮಾಪಕರು ವಿಷ್ಣು ಸರ್ ಗೆ ಪ್ರೀತಿಯಿಂದ ಗೌರವಿಸಲಿ. ಅವರ ಸಾವನ್ನು ಎನ್ ಕ್ಯಾಷ್ ಮಾಡೋಕೆ ಪ್ರಯತ್ನ ಮಾಡುವುದು ಬೇಡ ಎಂಬ ಬುದ್ಧಿ ಮಾತನ್ನು ಸುದೀಪ್ ಹೇಳಿದ್ದಾರೆ.

ವಿಷ್ಣು ಅಭಿನಯದ ಕೊನೆಯ ಎರಡು ಚಿತ್ರಗಳನ್ನು ವ್ಯವಸ್ಥಿತವಾಗಿ ಪ್ರಚಾರ ಮಾಡಿ. ಪೈಪೋಟಿಯಲ್ಲಿ ಬಿಡುಗಡೆ ಮಾಡಬೇಡಿ. ಚಿತ್ರ ಯಶಸ್ವಿಯಾಗಲೆಂದು ಇಚ್ಛಿಸುತ್ತೇನೆ. ಅವರ ಚಿತ್ರಕ್ಕಾಗಿ ನನ್ನ ಚಿತ್ರ ಮುಂದೂಡಲು ನನ್ನದೇನು ಅಭ್ಯಂತರವಿಲ್ಲ. ಒಂದು ವಾರ, ಎರಡು ವಾರ, ಒಂದು ತಿಂಗಳು ಮುಂದೂಡಲು ತಯಾರಿದ್ದೇನೆ. ಆದರೆ ದಯವಿಟ್ಟು ವಿಷ್ಣು ಸರ್ ಚಿತ್ರವನ್ನು ಪ್ರೀತಿಸಿ ಯಾಕೆಂದರೆ ಇನ್ನೆಂದೂ ಅವರ ಅಭಿನಯದ ಹೊಸ ಚಿತ್ರಗಳು ಬರುವುದಿಲ್ಲ ಎಂದು ವಿಷ್ಣು ಚಿತ್ರಗಳ ಬಗ್ಗೆ ಸುದೀಪ್ ಅಭಿಮಾನದ ಮಾತುಗಳನ್ನು ಆಡಿದ್ದಾರೆ.

ವಿಡಿಯೋ: ಕಣ್ಮರೆಯಾದ ಸಾಹಸ ಸಿಂಹ

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಜನವರಿ 22ರಂದು ಸ್ಕೂಲ್ ಮಾಸ್ಟರ್ ಜೊತೆ ದರ್ಶನ್ ಅಭಿನಯದ ಪೊರ್ಕಿ ಚಿತ್ರ ಬಿಡುಗಡೆಯಾಗುತ್ತಿದೆ. ಸುದೀಪ್, ರಮ್ಯಾ ಜೋಡಿಯ ಜಸ್ಟ್ ಮಾತ್ ಮಾತಲ್ಲಿ ಚಿತ್ರ ಜನವರಿ 29ಕ್ಕೆ ತೆರೆ ಕಾಣಲಿದೆ. ಚೇತನ್ ಅಭಿನಯದ 'ಸೂರ್ಯಕಾಂತಿ' ಚಿತ್ರ ಸಂಕ್ರಾಂತಿಯಂದೇ (ಜ.14) ಅರಳಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada