»   »  ಅದಿತಿ ಗೋವಿತ್ರಿಕರ್ ಗೆ ಕನ್ನಡದಲ್ಲಿ ನಟಿಸುವಾಸೆ

ಅದಿತಿ ಗೋವಿತ್ರಿಕರ್ ಗೆ ಕನ್ನಡದಲ್ಲಿ ನಟಿಸುವಾಸೆ

Subscribe to Filmibeat Kannada
Aditi Govitrikar wants to act in Kannada
ರೂಪದರ್ಶಿ, ನಟಿ ಮತ್ತು ಸ್ತ್ರೀರೋಗ ತಜ್ಞೆ ಅದಿತಿ ಗೋವಿತ್ರಿಕರ್ ಕನ್ನಡ ಚಿತ್ರದಲ್ಲಿ ನಟಿಸುವ ಆಸೆಯನ್ನು ತೋಡಿಕೊಂಡಿದ್ದಾರೆ. ಕ್ಲಿನಿಕ್ ಆಲ್ ಕ್ಲಿಯರ್, ಕೋಕಾ ಕೋಲಾ, ಪಾಂಡ್ಸ್ , ಫಿಲಿಪ್ಸ್ ಜಾಹೀರಾತುಗಳನ್ನು ನೋಡಿದ್ದರೆ ಈಕೆಯ ಮುಖ ನೆನಪಾಗಬಹುದು. ಅದಿತಿ ಅವರ ಅಜ್ಜ ಮೂಲತಃ ಬೆಳಗಾವಿಯವರಂತೆ ಮತ್ತು ಅಜ್ಜಿಯ ಹುಟ್ಟೂರು ಹುಬ್ಬಳ್ಳಿಯಂತೆ.

ಕನ್ನಡದಲ್ಲಿ ನನಗೆ ಒಪ್ಪುವ ಕತೆ ಸಿಕ್ಕಿದರೆ ತಾನು ಕನ್ನಡದಲ್ಲಿ ನಟಿಸುವುದಾಗಿ ಅದಿತಿ ಹೇಳುತ್ತಾರೆ. ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಆಕೆ ಕನ್ನಡದ ಭಾಷೆಯ ಬಗೆಗಿನ ತಮ್ಮ ಅಭಿಮಾನವನ್ನು ತೋಡಿಕೊಂಡರು. ಕನ್ನಡದಲ್ಲಿ ನಟಿಸಬೇಕೆಂಬ ಭಾಷಾಭಿಮಾನ ಮಾತ್ರ ಆಕೆಗಿಲ್ಲ, ದಕ್ಷಿಣ ಭಾರತದಲ್ಲಿನ ಚಿತ್ರ ನಿರ್ಮಾಣ ಆಕೆಗೆ ಹಿಡಿಸಿದೆಯಂತೆ. ತೆಲುಗು ಚಿತ್ರರಂಗದ ಮೂಲಕ ಅದಿತಿ ಬೆಳ್ಳಿ ಪರದೆಗೆ ಪಾದಾರ್ಪಾಣೆ ಮಾಡಿದ್ದರು. ಈಗ ಕನ್ನಡಕ್ಕೆ ಬರುವ ಇರಾದೆ ವ್ಯಕ್ತಪಡಿಸಿದ್ದಾರೆ.

ನಿಮ್ಮ ಪೂರ್ವಿಕರೇನೋ ಕನ್ನಡದವರು ,ನಿಮಗೆ ಕನ್ನಡ ಬರುತ್ತಾ? ಎಂದು ಕೇಳಿದರೆ. ಇಲ್ಲ ನನಗೆ ಕನ್ನಡ ಬರುವುದಿಲ್ಲ. ಆದರೆ ಭಾಷೆಯನ್ನು ಅರ್ಥ ಮಾಡಿಕೊಳ್ಳುತ್ತೇನೆ ಎನ್ನುತ್ತಾರೆ ಅದಿತಿ. ಬೆಂಗಳೂರಿನ ಜನ ಎಂದರೆ ನನಗೆ ಇಷ್ಟ. ಮುಂಬೈ ಜನಕ್ಕೂ ಬೆಂಗಳೂರಿಗರಿಗೂ ಬಹಳಷ್ಟು ಸಾಮ್ಯತೆ ಇದೆ. ಬಹಳ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದೆ. ಆಗ ವಿಮಾನ ನಿಲ್ದಾಣದಲ್ಲಿ ತಿಂಡ ಮಸಾಲೆ ದೋಸೆ ಇನ್ನೂ ಮರೆತಿಲ್ಲ ಎನ್ನುತ್ತಾರೆ ಅದಿತಿ.

(ದಟ್ಸ್ ಕನ್ನಡ ಚಿತ್ರವಾರ್ತೆ)


ನಯನ ತಾರಾ ಸೊಂಟದ ವಿಷಯ ಬೇಡವೊ ಶಿಷ್ಯ!
ಅನಂತ್ ಮತ್ತು ಸುಹಾಸಿನಿ ಎರಡನೇ ಮದುವೆ!
ಸುದೀಪ್ ನಟನೆ ಬಗ್ಗೆ ಅಮಿತಾಬ್ ಪ್ರಮಾಣ ಪತ್ರ!
ಯೋಗೀಶ್ ಸಂಭಾವನೆ ದಿನಕ್ಕೆ ಸಾವಿರ ರುಪಾಯಿ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada