»   »  ದೀಪಿಕಾಗೆ ಸನ್ ಸಿಲ್ಕ್ ಮಿಸ್ ಸೌತ್ ಇಂಡಿಯಾ ಕಿರೀಟ

ದೀಪಿಕಾಗೆ ಸನ್ ಸಿಲ್ಕ್ ಮಿಸ್ ಸೌತ್ ಇಂಡಿಯಾ ಕಿರೀಟ

Subscribe to Filmibeat Kannada
ಸನ್ ಸಿಲ್ಕ್ ಮಿಸ್ ಸೌತ್ ಇಂಡಿಯಾ 2009 ಆಗಿ ಬೆಂಗಳೂರು ಬಾಲೆ ದೀಪಿಕಾ ಆಯ್ಕೆಯಾಗಿದ್ದಾರೆ. ಚೆನ್ನೈನ ಟ್ರೇಡ್ ಸೆಂಟರ್ ನಲ್ಲಿ ಕೆಲವು ದಿನಗಳಿಂದ ನಡೆಯುತ್ತಿದ್ದಸ್ಪರ್ಧೆಯಲ್ಲಿ ಅಂತಿಮವಾಗಿ ಮಿಸ್ ಸೌತ್ ಇಂಡಿಯಾ ಕಿರೀಟ ದೀಪಿಕಾ ಪಾಲಾಯಿತು.

ಬೆಂಗಳೂರಿನ ಮತ್ತೊಬ್ಬ ಬೆಡಗಿ ಜಾಸ್ಮಿನ್ ಮತ್ತು ವಿಜಯವಾಡದ ಬೆಡಗಿ ಸೌಮ್ಯ ಅವರು ಕ್ರಮವಾಗಿ ಎರಡು ಮತ್ತು ಮೂರನೆ ಸ್ಥಾನಗಳನ್ನು ಸ್ಪರ್ಧೆಯಲ್ಲಿ ಪಡೆದಿದ್ದಾರೆ. ದಕ್ಷಿಣ ಭಾರತದ ರೂಪದರ್ಶಿಯರಿಗೆ ಸನ್ ಸಿಲ್ಕ್ ಮಿಸ್ ಇಂಡಿಯಾ ಸ್ಪರ್ಧೆ ಉತ್ತಮ ವೇದಿಕೆ ಎಂದೇ ಹೆಸರಾಗಿದೆ. ಎರಡು ಹಂತಗಳ ಈ ಸ್ಪರ್ಧೆಯನ್ನು ಮಾಯಾ ಇವೆಂಟ್ ಮ್ಯಾನೇಜ್ ಮೆಂಟ್ ಮತ್ತು ಸನ್ ಸಿಲ್ಕ್ ಮಿಸ್ ಸೌತ್ ಇಂಡಿಯಾ ಜಂಟಿಯಾಗಿ ನಿರ್ವಹಿಸಿದ್ದವು.

ಎಲ್ಲ ರಾಜ್ಯದ ರೂಪದರ್ಶಿಯರು ಭಾಗವಹಿಸಿದ್ದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಮಿಸ್ ಕರ್ನಾಟಕ, ಮಿಸ್ ಕೇರಳ, ಮಿಸ್ ಆಂಧ್ರ ಪ್ರದೇಶ್ ಮತ್ತು ಮಿಸ್ ತಮಿಳುನಾಡು ಎಂದು ಆಯ್ಕೆ ಮಾಡಲಾಗಿತ್ತು. ನಂತರ ಈ ನಾಲ್ಕು ಮಂದಿ ರೂಪದರ್ಶಿಯರ ನಡುವೆ ಸನ್ ಸಿಲ್ಕ್ ಮಿಸ್ ಸೌತ್ ಇಂಡಿಯಾಗಾಗಿ ಪ್ರಬಲ ಸ್ಪರ್ಧೆ ಏರ್ಪಟ್ಟಿತ್ತು. ಸ್ಪರ್ಧೆಯಲ್ಲಿ ಗೆದ್ದ ಬೆಡಗಿಯರಿಗೆ ನಟಿ ರಮ್ಯಾ ಕೃಷ್ಣ ಕಿರೀಟ ತೊಡಿಸಿದರು.

(ಏಜೆನ್ಸೀಸ್)

ಬೆಂಗಳೂರು ಚೆಲುವೆ ಮಿಸ್ ಸೌತ್ ಇಂಡಿಯಾ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada