ಮುಖ್ಯಮಂತ್ರಿ ಚಂದ್ರು ಮಗನ ಜಿಮ್ ಸಂಸ್ಥೆ ಆರಂಭ

ಮುಖ್ಯಮಂತ್ರಿ ಚಂದ್ರು ಅವರ ಮೊದಲ ಮಗ ಭರತ್ ಎಂ.ಎಸ್. ಇನ್ಫರ್‌ಮೇಷನ್ ಕಲಿತು ಈಗಾಗಲೇ ಸ್ವಂತದ್ದೊಂದು ಸಾಫ್ಟ್‌ವೇರ್ ಕಂಪೆನಿ ನಡೆಸುತ್ತಿದ್ದಾರೆ. ಎರಡನೇ ಮಗ ಶರತ್ ಚಂದ್ರ ಅತ್ಯುತ್ತಮ ಕ್ರಿಕೆಟ್ ಆಟಗಾರ. ಈಗಾಗಲೇ ಕರ್ನಾಟಕ ಡಿವಿಜನ್‌ನಲ್ಲಿ ಫಾಸ್ಟ್ ಬೌಲರ್ ಆಗಿ ಪಂದ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಇದೇ ಶರತ್ ಚಂದ್ರ ಈಗ ಸ್ವಂತದ್ದೊಂದು ಜಿಮ್ ಆರಂಭಿಸಿದ್ದಾರೆ. ಅದರ ಹೆಸರು 'ಜಿಮ್ ಫಾರ್ ಅಥ್ಲೆಟ್'. ಇದು ವಿಶೇಷವಾಗಿ ಆಟಗಾರರಿಗೆಂದೇ ಶುರು ಮಾಡಿರುವ ಜಿಮ್. ಯಾವ ಯಾವ ಆಟಗಾರರಿಗೆ ಯಾವ ರೀತಿಯ ಫಿಟ್‌ನೆಸ್ ಬೇಕು ಎಂಬುದನ್ನು ತೀರ್ಮಾನಿಸಿ ಕೋಚ್ ಮಾಡಲಾಗುತ್ತದೆ. ಆಟಗಾರರಿಗೆ ಮಾತ್ರವಲ್ಲದೆ ಜನ ಸಾಮಾನ್ಯರಿಗೂ ಇಲ್ಲಿ ತರಬೇತಿ ನೀಡಲಾಗುತ್ತದೆ.
ಈಗಷ್ಟೇ ಆರಂಭವಾಗಿರುವ ಜಿಮ್‌ನಲ್ಲಿ ಸದ್ಯ 25ಜನ ತರಬೇತಿ ಆರಂಭಿಸಿದ್ದಾರೆ. ಅತ್ಯಾಧುನಿಕ ಉಪಕರಣಗಳನ್ನು ಹೊಂದಿರುವ ಈ ಜಿಮ್ ತಿಮ್ಮಯ್ಯ ರಸ್ತೆಯಲ್ಲಿರುವ ಕರ್ನಾಟಕ ಫೈನಾನ್ಷಿಯಲ್ ಕಾರ್ಪೊರೇಷನ್‌ನ ಕೆಳ ಅಂತಸ್ತಿನಲ್ಲಿ ಆರಂಭಗೊಂಡಿದೆ.
ಶರತ್‌ಚಂದ್ರ ತಮ್ಮ ಫಿಟ್‌ನೆಸ್ ಗುರುಗಳಾದ ಶ್ಯಾಂ ಅವರೊಟ್ಟಿಗೆ ಸೇರಿ ಈ ಸಂಸ್ಥೆ ಆರಂಭಿಸಿದ್ದಾರೆ. ಸಿನಿಮಾ ನಟಿ ಸುಧಾರಾಣಿ ಸಹ ಈ ಜಿಮ್‌ನಲ್ಲಿ ತರಬೇತಿ ಶುರು ಮಾಡಿದ್ದಾರೆ. 6.6 ಅಡಿ ಎತ್ತರವಿರುವ ಶರತ್ ಕ್ರಿಕೆಟ್ ನೊಂದಿಗೆ ಈಗ ಜಿಮ್ ಆರಂಭಿಸಿದ್ದಾರೆ ಮಾತ್ರವಲ್ಲ, ಸಿನಿಮಾಗೆ ಬರುವ ಕನಸನ್ನೂ ಹೊಂದಿದ್ದಾರೆ. ಮಗನ ಎಲ್ಲ ಅಪೇಕ್ಷೆಗಳು, ಕನಸುಗಳಿಗೂ ತಂದೆ ಮುಖ್ಯಮಂತ್ರಿ ಚಂದ್ರು ಮತ್ತು ತಾಯಿ ಪದ್ಮಾ ಅವರ ಸಂಪೂರ್ಣ ಬೆಂಬಲ ಮತ್ತು ಸಹಕಾರ ಇದ್ದೇಇದೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











