ಪೂಜಾಗಾಂಧಿ ಮಿನುಗು ಚಿತ್ರೀಕರಣ ಮುಕ್ತಾಯ

ಬೆಂಗಳೂರು ಹಾಗೂ ಸಕಲೇಶಪುರ ಸುತ್ತಮುತ್ತ ರಮಣೀಯ ಹೊರಾಂಗಣದಲ್ಲಿ 52 ದಿನಗಳ ಕಾಲ ಚಿತ್ರೀಕರಣ ನಡೆಸಿ, ಚಿತ್ರೀಕರಣ ಪೂರೈಸಿದೆ. ಲವ್ ಸ್ಟೋರಿಯಾದರೂ ಆತಂಕಕಾರಿ ದೃಶ್ಯಗಳೊಂದಿಗೆ ಸಾಗುವ ಈ ಚಿತ್ರದಲ್ಲಿ ಹಾಡುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಸುನಿಲ್ ಕುಮಾರ್ ಸಿಂಗ್ ಅವರು ಈ ಚಿತ್ರದ ಸಂಭಾಷಣೆಗಳನ್ನು ಬರೆದಿದ್ದು, ಸತೀಶ್ ಕುಮಾರ್ ಛಾಯಾಗ್ರಹಣ ಕೆಲಸ ನಿರ್ವಹಿಸಿದ್ದಾರೆ.
ಫುಲ್‌ಪವರ್ ಗೋಪು ಅವರ ಸಂಗೀತ ಸಂಯೋಜನೆ, ಶ್ರೀಕಾಂತ ಕೆ. ತೋಟ ಅವರ ಸಂಕಲನ, ಚಲಪತಿ ಅವರ ಕಲಾನಿರ್ದೇಶನ, ಅರವಿಂದ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಸುನೀಲ್ ರಾವ್, ಅಜಿತ್ ಹಂಡೆ, ಅಕ್ಷತಾ, ಉಮೇಶ್, ಋತು ಹಾಗೂ ಗುರು ಹೆಗ್ಗಡೆ ಪ್ರಮುಖ ತಾರಾಗಣದಲ್ಲಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಮಿನುಗು ತಾರೆಯಾಗಿ ಪೂಜಾಗಾಂಧಿ
ಮರುಕಳುಹಿಸಿದ ಮಿನುಗು ತಾರೆ ಕಲ್ಪನಾ ನೆನಪು
kannada movies pooja gandhi ಪೂಜಾಗಾಂಧಿ ಕನ್ನಡಸಿನಿಮಾ ಮಿನುಗು minugu jayawanth ನಿರ್ದೇಶಕ ಜಯವಂತ್ ಸುನಿಲ್ ರಾವ್ sunil rao


Click it and Unblock the Notifications