For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನ ಸ್ಟೈಲು ನೋಡಲು ಎರಡು ಕಣ್ಣು ಸಾಲದಣ್ಣ

  By Rajendra
  |

  ಸುದೀರ್ಘ ಸಮಯದ ಬಳಿಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ಗೆಟಪ್ ಬದಲಾಯಿಸಿದ್ದಾರೆ. ಇತ್ತೀಚೆಗಷ್ಟೆ ಸೆಟ್ಟೇರಿದ ಅವರ ಹೊಸ ಚಿತ್ರ 'ಶಿವ' ಪೋಸ್ಟರ್‌ಗಳನ್ನು ನೋಡಿದರೆ ಶಿವಣ್ಣನ ಗೆಟಪ್ ಗಮನಸೆಳೆಯುತ್ತದೆ. ಶಿವಣ್ಣ ಒಂದೇ ತೆರನಾದ ಚಿತ್ರಗಳಿಂದ ಕೊಂಚ ಟ್ರಾಕ್ ಬದಲಾಯಿಸಿದ್ದಾರೆ ಅನ್ನಿಸುತ್ತದೆ.

  ಕುದುರೆ ಮೇಲೆ ಶಿವಣ್ಣ ಬರುತ್ತಿರುವ ಸ್ಟೈಲ್ ನೋಡಿದರೆ, ಆ ಆಹ ಆಹ ಆಹಹಾ .. ಓಹೊಹೋ ಓ ಹೊಹೊಹೊಹೋ ನಾವಾಡುವ ನುಡಿಯೇ ಕನ್ನಡ ನುಡಿ ಚಿನ್ನದ ನುಡಿ ಸಿರಿಗನ್ನಡ ನುಡಿ...ಎಂದು ಅಣ್ಣಾವ್ರು ಗಂಧದಗುಡಿ ಚಿತ್ರದಲ್ಲಿ ಬಿಳಿ ಕುದುರೆ ಮೇಲೆ ಬಂದಂತಿದೆ.

  ಕೆ ಪಿ ಶ್ರೀಕಾಂತ್ ನಿರ್ಮಿಸುತ್ತಿರುವ ಈ ಚಿತ್ರದ ಸೂತ್ರಧಾರ ಓಂ ಪ್ರಕಾಶ್ ರಾವ್. ಚಿತ್ರದ ನಾಯಕಿ ರಾಗಿಣಿ ದ್ವಿವೇದಿ. ಈ ಚಿತ್ರದಲ್ಲಿ ಶಿವಣ್ಣ ಬೆಟ್ಟಿಂಗ್ ದಂಧೆ ವಿರುದ್ಧ ಹೋರಾಡುವ ಕತೆ ಎನ್ನಲಾಗಿದೆ. ಶಿವಣ್ಣನ ಡಿಫರೆಂಟ್ ಮ್ಯಾನರಿಜಂನ ಚಿತ್ರ ಎಂಬುದು ಸದ್ಯದ ಮಾಹಿತಿ. (ದಟ್ಸ್‌ಕನ್ನಡ ಸಿನಿವಾರ್ತೆ)

  English summary
  Hat trick hero Shivarajkumar's latest flick Shiva posters are out. Shivnna looks great. His cowboy getup rakes up Dr Rajkumar's evergreen movie Gandhada Gudi. Kanakapura Srinivas and K.P. Srikanth produced Shiva which will be directed by Om Prakash Rao.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X