»   » ಶಿವಣ್ಣನಿಗೆ ಅಭಿಮಾನಿಯಿಂದ ನಾಟಿ ಹುಂಜ ಕೊಡುಗೆ

ಶಿವಣ್ಣನಿಗೆ ಅಭಿಮಾನಿಯಿಂದ ನಾಟಿ ಹುಂಜ ಕೊಡುಗೆ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ನಾಟಿ ಹುಂಜವನ್ನು ಉಡುಗೊರೆಯಾಗಿ ನೀಡಲು ಅವರ ಅಭಿಮಾನಿಯೊಬ್ಬ ಮುಂದಾಗಿದ್ದಾನೆ. ಶಿವಣ್ಣನ ಹುಟ್ಟುಹಬ್ಬಕ್ಕೆಂದು ಆತ ದೂರದ ತುಮಕೂರು ಜಿಲ್ಲೆಯ ಪಾವಗಡದಿಂದ ಹುಂಜವನ್ನು ಹೊತ್ತುಕೊಂಡು ಬಂದಿದ್ದ. ನಾಟಿ ಹುಂಜವನ್ನು ಶಿವಣ್ಣನಿಗೆ ಉಡುಗೊರೆಯಾಗಿ ಕೊಡಬೇಕೆಂಬುದು ಆತನ ಮನದಾಳದ ಅಭಿಮಾನ.

ಎಲ್ಲರೂ ಹೂಗುಚ್ಛ, ತರಹೆವಾರಿ ಉಡುಗೊರೆಗಳನ್ನು ಕೊಡುತ್ತಾರೆ ಆದರೆ ತಾವು ಕೊಂಚ ಭಿನ್ನವಾಗಿ ಉಡುಗೊರೆ ಕೊಡಬೇಕು ಎಂಬುದು ಪಾವಗಡದ ಜಿ ಎ ಮಂಜುನಾಥ್ ಅವರ ಆಸೆ. ಎಲ್ಲರ ರೀತಿ ಅಲ್ಲದೆ ಹೊಸ ಶೈಲಿಯಲ್ಲಿ ಶಿವಣ್ಣನಿಗೆ ಉಡುಗೊರೆ ಕೊಡಬೇಕೆಂದು ಹುಂಜಕೊಡಲು ಮುಂದಾಗಿದ್ದೇನೆ ಎನ್ನುತ್ತಾರೆ ಮಂಜುನಾಥ್.

ಒಟ್ಟು ಮೂರುವರೆ ಕೆ.ಜಿ ತೂಗುವ ಹುಂಜುವನ್ನು ಕೊಡಲು ಅವರು ಸೋಮವಾರ ಬೆಳಗ್ಗೆಯಿಂದ ಕಂಠೀರವ ಕ್ರೀಡಾಂಗಣದ ಬಳಿ ಕಾಯುತ್ತಿದ್ದರು.ಒಂದು ವೇಳೆ ಶಿವಣ್ಣ ಇಂದು ಸಿಗದಿದ್ದರೆ ಸಂಜೆ ಅವರ ಮನೆಗೆ ಹೋಗಿ ಹುಂಜವನ್ನು ಕೊಡುತ್ತೇನೆ. ಇಲ್ಲದಿದ್ದರೆ ನಾಳೆ ಬೆಳಗ್ಗೆಗಾದರೂ ಹೋಗಿ ಹುಂಜವನ್ನು ಅವರಿಗೆ ಒಪ್ಪಿಸುವುದಾಗಿ ಮಂಜುನಾಥ್ ಹೇಳಿದರು.

ನಾಟಿ ಹುಂಜವನ್ನು ಶಿವರಾಜ್ ಕುಮಾರ್ ಬೇಕಿದ್ದರೆ ಸಾಕಿಕೊಳ್ಳಬಹುದು ಅಥವಾ ಕಬಾಬ್ ಮಾಡಿಕೊಂಡು ತಿನ್ನಬಹುದು. ಅದು ಅವರ ನಿರ್ಧಾರಕ್ಕೆ ಬಿಟ್ಟಿದ್ದು ಎನ್ನುತ್ತಾರೆ ಮಂಜುನಾಥ್. ಈ ನಾಟಿ ಹುಂಜವನ್ನು ಶಿವಣ್ಣ ಸ್ವೀಕರಿಸಿದ್ದಾರೋ ಇಲ್ಲವೋ ಎಂಬುದು ತಿಳಿದುಬಂದಿಲ್ಲ. ಒಟ್ಟಿನಲ್ಲಿ ಅಭಿಮಾನಿಯ ಅಭಿಮಾನಕ್ಕೆ ಶಿವಣ್ಣ ಏನಂತಾರೋ?

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada