twitter
    For Quick Alerts
    ALLOW NOTIFICATIONS  
    For Daily Alerts

    ಮಾರ್ಚ್ 3 ರಿಂದ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ: ನೋಂದಣಿ, ಶುಲ್ಕ ಇತರೆ ಮಾಹಿತಿ

    |

    ಪ್ರತಿಷ್ಟಿತ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮಾ ಉತ್ಸವ ಮಾರ್ಚ್ 3ನೇ ತಾರೀಖಿನಿಂದ ಆರಂಭವಾಗಲಿದೆ. ಏಳು ದಿನ ನಡೆಯಲಿರುವ ಈ ಸಿನಿಮೋತ್ಸವ ಮಾರ್ಚ್ 10ರಂದು ಕೊನೆಯಾಗಲಿದೆ.

    ಮಾರ್ಚ್ 03 ರಂದು ನಗರದ ಜಿಕೆವಿಕೆ ಆವರಣದಲ್ಲಿ ನಡೆವ ಅದ್ಧೂರಿ ಕಾರ್ಯಕ್ರಮದಲ್ಲಿ ಸಿನಿಮೋತ್ಸವಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಬಾಲಿವುಡ್ ಸೇರಿದಂತೆ ಇತರ ಸಿನಿಮಾ ರಂಗದ ಗಣ್ಯರು ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭ ಮಾರ್ಚ್ 10 ರಂದು ಸಂಜೆ ಟಾಟಾ ಸಭಾಂಗಣದಲ್ಲಿ ನಡೆಯಲಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಹೇಳಿದ್ದಾರೆ.

    ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ ದಿನಾಂಕ ಪ್ರಕಟಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ ದಿನಾಂಕ ಪ್ರಕಟ

    2020 ಹಾಗೂ 21 ರ ಅವಧಿಯಲ್ಲಿ ಬಿಡುಗಡೆ ಆಗಿರುವ 50 ದೇಶಗಳ 200 ಸಿನಿಮಾಗಳು ಈ ಬಾರಿ ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ. ರಾಜಾಜಿನಗರದ ಒರಾಯಿನ್ ಮಾಲ್‌ನ 11 ಪರದೆಗಳಲ್ಲಿ ಸಿನಿಮಾಗಳ ಪ್ರದರ್ಶನ ನಡೆಯಲಿದೆ. ಜೊತೆಗೆ ಚಾಮರಾಜಪೇಟೆಯಲ್ಲಿನ ಕಲಾವಿದರ ಸಂಘದ ರಾಜ್ ಸಭಾಂಗಣ ಹಾಗೂ ಬನಶಂಕರಿಯ ಸುಚಿತ್ರಾ ಅಕಾಡೆಮಿಯಲ್ಲಿ ಸಿನಿಮಾಗಳ ಪ್ರದರ್ಶನಗಳು ನಡೆಯಲಿವೆ. ಈ ಬಾರಿ ಸಿನಿಮಾ ಪ್ರದರ್ಶನ ಆಫ್‌ಲೈನ್ ಹಾಗೂ ಆನ್‌ಲೈನ್ ಎರಡೂ ಮಾದರಿಯಲ್ಲಿ ಇರಲಿದೆ.

    13th Bengaluru International Film Fest Will Start From March 03

    ಸಿನಿಮಾ ವೀಕ್ಷಣೆಗೆ ಶುಲ್ಕ ನಿಗದಿ ಮಾಡಲಾಗಿದ್ದು ಸಾರ್ವಜನಿಕರಿಗೆ 800 ರುಪಾಯಿ, ವಿದ್ಯಾರ್ಥಿಗಳಿಗೆ, ಸಿನಿಮಾ ರಂಗದ ಸದಸ್ಯರಿಗೆ, ಸಿನಿಮಾ ಸಮಾಜದವರಿಗೆ 400 ರುಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಚಿತ್ರೋತ್ಸವದ ನೊಂದಣಿ ಹಾಗೂ ಇನ್ನಿತರ ಮಾಹಿತಿಗೆ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದ ವೆಬ್‌ಸೈಟ್ ನೋಡಬಹುದಾಗಿದೆ.

    ಗೋವಾ ಚಲನಚಿತ್ರೋತ್ಸವದಲ್ಲಿ ಪವನ್ ಒಡೆಯರ್ ನಿರ್ಮಾಣದ ಸಿನಿಮಾಕ್ಕೆ ಪ್ರಶಸ್ತಿಗೋವಾ ಚಲನಚಿತ್ರೋತ್ಸವದಲ್ಲಿ ಪವನ್ ಒಡೆಯರ್ ನಿರ್ಮಾಣದ ಸಿನಿಮಾಕ್ಕೆ ಪ್ರಶಸ್ತಿ

    ಈ ಬಾರಿಯ ಚಿತ್ರೋತ್ಸವದಲ್ಲಿ ಪುನೀತ್ ರಾಜ್‌ಕುಮಾರ್, ಸಂಚಾರಿ ವಿಜಯ್ ಗೌರವಾರ್ಥ ವಿಶೇಷ ಸಿನಿಮಾಗಳ ಪ್ರದರ್ಶನ ಆಯೋಜಿತವಾಗಲಿವೆ. ವಿದೇಶದ ಸಿನಿಮಾಗಳು, ಭಾರತೀಯ ಭಾಷೆಗಳ ಸಿನಿಮಾಗಳ ಜೊತೆಗೆ ಸಿನಿಮಾ ಸಂಬಂಧಿ ಹಲವು ವಿಷಯಗಳ ವಿಚಾರಗೋಷ್ಠಿಗಳು ಸಹ ಆಯೋಜಿತವಾಗಿವೆ.

    English summary
    13th Bengaluru International Film Fest will start from March 03. CM Basavaraj Bommai will inaugurate the event and fest will end on March 10.
    Thursday, February 17, 2022, 9:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X