»   » ಚಿತ್ರದುರ್ಗ ಮದುವೆ ಮನೆಯೆಲ್ಲಾ ಗಣೇಶನ ಮಾತಿನ ಮನೆ

ಚಿತ್ರದುರ್ಗ ಮದುವೆ ಮನೆಯೆಲ್ಲಾ ಗಣೇಶನ ಮಾತಿನ ಮನೆ

Posted By:
Subscribe to Filmibeat Kannada

ಪ್ರೇಕ್ಷಕರು ನನ್ನನ್ನು ಹೇಗೆ ಓಡಬೇಕು ಎಂದು ಇಷ್ಟಪಡುತ್ತಾರೋ ಅದೇ ರೀತಿ ಪಾತ್ರವನ್ನು 'ಮದುವೆ ಮನೆ' ಚಿತ್ರದಲ್ಲಿ ಕಾಣಬಹುದಾಗಿದೆ. ಸುನೀಲ್ ಕುಮಾರ್ ಸಿಂಗ್ ಅವರ ಡೈಲಾಗ್ ಗಳು ನಾನು ಉದ್ದುದ್ದಾ ಡೈಲಾಗ್ ಹೇಳುವ ರೀತಿ ಮತ್ತೊಮ್ಮೆ ಮುಂಗಾರು ಮಳೆ ಪಾತ್ರವನ್ನು ನೆನಪಿಸುವಂತಿರುತ್ತದೆ ಎಂದು ಗೋಲ್ಡನ್ ಸ್ಟಾರ್ ಗಣೇಶ್ ಅವರು ಹೇಳಿದ್ದಾರೆ.

ಇತ್ತೀಚೆಗೆ ಚಿತ್ರದುರ್ಗದ ಹಳೆ ಪ್ರಾಥಮಿಕ ಶಾಲೆ ಮೈದಾನದಲ್ಲಿ ನಡೆದ ಅದ್ದ್ರೂರಿ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಗಣೇಶ್ ಮಾತನಾಡುತ್ತಿದ್ದರು. ಕಿರುತೆರೆಯಲ್ಲಿ ಈಗಾಗಲೇ ಸುನೀಲ್ ಕುಮಾರ್ ಅವರ ಡೈಲಾಗ್ಸ್ ಫೇಮಸ್ ಆಗಿದೆ.

ಮುಂಗಾರು ಮಳೆಯಲ್ಲಿ ಪ್ರೀತು ಹೊಡೆದ ಡೈಲಾಗ್ಸ್ ಹೇಗೆ ಎಲ್ಲರಲ್ಲೂ ರಂಜಿಸಿತ್ತು. ಅದೇ ರೀತಿ ಮದುವೆ ಮನೆ ಡೈಲಾಗ್ಸ್ ಕೂಡಾ ಮಜಾ ಕೊಡಲಿದೆ ನೋಡ್ತಾ ಇರಿ ಎಂದು ಗಣೇಶ್ ಹಲ್ಲು ಕಿರಿದರು.

ಈ ಚಿತ್ರದಲ್ಲಿ ನಾನು ಹೀರೋಯಿನ್ ಹಿಂದೆ ಸುತ್ತುವುದಿಲ್ಲ. ಆಕೆ ಕೂಡಾ ನನ್ನ ಹಿಂದೆ ಬೀಳಲ್ಲ ಆದರೂ ಕಥೆ ನಡೆಯುತ್ತೆ. ಚಿತ್ರದ ಕೊನೆಗೆ ಎಲ್ಲವೂ ಅರ್ಥವಾಗುತ್ತದೆ. ಚಿತ್ರದುರ್ಗ ಮೂಲದ ನಿರ್ಮಾಪಕ ವಿತರಕ ರೆಹಮಾನ್ ಈಗಾಗಲೇ ಯಜಮಾನ, ಹುಚ್ಚ ದಂಥ ಭರ್ಜರಿ ಯಶಸ್ವಿ ಚಿತ್ರಗಳನ್ನು ನೀಡಿದ್ದಾರೆ.

ಇದೇ ಮ್ಯಾಜಿಕ್ ಮತ್ತೊಮ್ಮೆ ಮದುವೆ ಮನೆ ಚಿತ್ರದ ಮೂಲಕ ಆಗುವ ನಿರೀಕ್ಷೆಯಿದೆ ಎಂದು ಗಣೇಶ್ ಹೇಳಿದರು.

English summary
Kannada actor Golden Star Ganesh back on track. He said character in Madhuve mane movie will be kind of chatterbox. one can relate to Mungaru male role. Ganesh conveyed thanks to dialogue writer Sunil Kumar Singh during audio launch of movie at Chitradurga.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada