»   »  ಕಡೆಗೂ ಟ್ರಿಬ್ಯುನಲ್ ನಲ್ಲಿ ಗೆದ್ದು ಬಂದ ಸುನಾಮಿ

ಕಡೆಗೂ ಟ್ರಿಬ್ಯುನಲ್ ನಲ್ಲಿ ಗೆದ್ದು ಬಂದ ಸುನಾಮಿ

Subscribe to Filmibeat Kannada

ಶ್ರೀ ಪದ್ಮಾವತಿ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಸುನಾಮಿ' ಬಿಡುಗಡೆಯ ಸಮಯದಲ್ಲಿ ಸುದ್ದಿ ಮಾಡಿದ ಚಿತ್ರ. ಚಿತ್ರಕ್ಕೆ ಚಿತ್ರೀಕರಣ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ಪೂರ್ಣವಾದ ಮೇಲೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಿತ್ತು. ನಂತರ ಚಿತ್ರಕ್ಕೆ 'ಎ' ಅರ್ಹತಾಪತ್ರವನ್ನು ನೀಡಿದ ಮಂಡಳಿ 35 ನಿಮಿಷಗಳಷ್ಟು ಅವಧಿಯನ್ನು ಕಡಿತಗೊಳಿಸಲು ಸೂಚಿಸಿತ್ತು. ಪ್ರಾದೇಶಿಕ ಸೆನ್ಸಾರ್ ಮಂಡಳಿಯ ತೀರ್ಪಿನಿಂದ ನೊಂದ ನಿರ್ಮಾಪಕರು ಟ್ರಿಬ್ಯುನಲ್‌ಗೆ ಮೊರೆ ಹೋದರು.

ನಿರ್ಮಾಪಕರ ಮನವಿಯನ್ನು ಪರಾಮರ್ಷಿಸಿದ ಅಲ್ಲಿನ ಮಂಡಳಿ ಸುನಾಮಿಗೆ ಯು\ಎ ಅರ್ಹಾತಾಪತ್ರವನ್ನು ನೀಡಿ ಸಿನೆಮಾ ಇರುವ ರೀತಿಯಲ್ಲೇ ಬಿಡುಗಡೆಗೊಳಿಸಲು ಸೂಚಿಸಿದೆ. ಸಂಸ್ಥೆಯ ತೀರ್ಪಿನಿಂದ ಸಂತಸಗೊಂಡಿರುವ ನಿರ್ಮಾಪಕ ರಾಜು ಪಾಟೀಲ್ ಜೂನ್‌ನಲ್ಲಿ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ.

'ಸುನಾಮಿಗೆ ನಿರ್ದೇಶಕ ಮಾಕಂ ಮನೋಹರ್ ಅವರೇ ಕಥೆ, ಚಿತ್ರಕಥೆ, ಬರೆದಿದ್ದಾರೆ. ಸದ್ಗುಣರಾಜರ ಸಂಗೀತವಿರುವ ಚಿತ್ರಕ್ಕೆ ವೆಂಕಟೇಶ್ ಅವರ ಛಾಯಾಗ್ರಹಣವಿದೆ. ಥ್ರಿಲ್ಲರ್‌ಮಂಜು, ಕೌರವವೆಂಕಟೇಶ್, ಟೈಗರ್‌ಮಧು ಸಾಹಸ, ಬಾಲನಾಯಕ್ ಸಂಕಲನ, ಪ್ರಸಾದ್, ಪರಮೇಶ್ ನೃತ್ಯ, ಶ್ರೀನಿವಾಸ್ ಕೌಶಿಕ್ ಸಂಭಾಷಣೆಯಿರುವ ಚಿತ್ರದ ತಾರಾಬಳಗದಲ್ಲಿ ರಾಜ, ಪೂನಂ, ರಂಗಾಯಣ ರಘು, ದೊಡ್ದಣ್ಣ, ಟೆನ್ನಿಸ್ ಕೃಷ್ಣ, ಬುಲೆಟ್‌ಪ್ರಕಾಶ್, ಗಜರ್ ಖಾನ್, ರೇಖಾದಾಸ್, ಕಿಲ್ಲರ್‌ವೆಂಕಟೇಶ್, ರಾಜಾ ರವೀಂದ್ರ, ಮೈಕಲ್ ಮಧು, ಹ್ಯಾರಿ, ಭರತ್ ಕಪೂರ್, ದೀಪಕ್ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದನ್ನೂ ಓದಿ
ಜಗ್ಗೇಶ್ ವಿರುದ್ಧ ಬೆಂಗಳೂರಲ್ಲಿ ಕರವೇ ಪ್ರತಿಭಟನೆ
ಬಿಬಿಎಂಪಿ ಚುನಾವಣಾ ಕಣಕ್ಕೆ ನಿರ್ಮಾಪಕ ಸುರೇಶ್!
ಕಿರುತೆರೆ ನಟಿ ಅಭಿನಯಾ ವೈವಾಹಿಕ ಜೀವನಕ್ಕೆ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada