»   »  ಬಿಬಿಎಂಪಿ ಚುನಾವಣಾ ಕಣಕ್ಕೆ ನಿರ್ಮಾಪಕ ಸುರೇಶ್!

ಬಿಬಿಎಂಪಿ ಚುನಾವಣಾ ಕಣಕ್ಕೆ ನಿರ್ಮಾಪಕ ಸುರೇಶ್!

Posted By:
Subscribe to Filmibeat Kannada
Film producer N M Suresh
ಕನ್ನಡ ಚಿತ್ರ ನಿರ್ಮಾಪಕ ಎನ್ ಎಂ ಸುರೇಶ್ ಅವರು ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಅವರು ಈ ಹಿಂದೆ ಮಲ್ಲೇಶ್ವರಂ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇದೇ ಮೊದಲ ಬಾರಿಗೆ ರಾಜಕೀಯ ಕ್ಷೇತ್ರಕ್ಕೆ ಅಡಿಯಿಡುತ್ತಿದ್ದಾರೆ.

ಎನ್ ಎಂ ಸುರೇಶ್ ಅವರು ಮಲ್ಲೇಶ್ವರಂನ ವಾರ್ಡ್ ನಂ .7ರಿಂದ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಈಗಾಗಲೇ ಚಿತ್ರ ನಿರ್ಮಾಣದಲ್ಲಿ ಬ್ಯುಸಿಯಾಗಿರುವ ಸುರೇಶ್, ತಮ್ಮ ಅದೃಷ್ಟವನ್ನು ರಾಜಕೀಯ ಕ್ಷೇತ್ರದಲ್ಲಿ ಪರೀಕ್ಷಿಸಿಕೊಳ್ಳಲು ಹೊರಟಿದ್ದಾರೆ. ಸುರೇಶ್ ನಿರ್ಮಾಣದ 'ಗಾಂಧಿ ಸ್ಮೈಲ್ಸ್' ಮತ್ತು 'ಕಾರಂಜಿ' ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ.

ಎಕ್ಸ್ ಕ್ಯೂಸ್ ಮಿ ಚಿತ್ರ ಎನ್ ಎಂ ಸುರೇಶ್ ನಿರ್ಮಿಸಿದ ಮೊದಲ ಸಿನಿಮಾ. ನಂತರ 7 ಓ ಕ್ಲಾಕ್, ಚಪ್ಪಾಳೆ ಮತ್ತು ತನನಂ ತನನಂ ಚಿತ್ರಗಳನ್ನು ನಿರ್ಮಿಸಿದ್ದರು. ತೆಲುಗಿನಲ್ಲಿ 'ಸೀನು ವಾಸಂತಿ ಲಕ್ಷ್ಮಿ' ಎಂಬ ಚಿತ್ರವನ್ನ್ನೂ ನಿರ್ಮಿಸಿದ್ದರು. ಈ ಚಿತ್ರ ಕನ್ನಡಕ್ಕೆ 'ನಮ್ಮ ಪ್ರೀತಿಯ ರಾಮು' ಹೆಸರಿನಲ್ಲಿ ರೀಮೇಕ್ ಆಗಿತ್ತು. ಈ ಎಲ್ಲಾ ಚಿತ್ರಗಳಿಂದ ಸುಮಾರು ರು.7ಕೋಟಿ ಲುಕ್ಸಾನಾಗಿದೆ ಎನ್ನುತ್ತಾರೆ ಸುರೇಶ್.

ಶಿವರಾಜ್ ಕುಮಾರ್ ನಾಯಕ ನಟನಾಗಿರುವ 'ಚೆಲುವೆಯೆ ನಿನ್ನ ನೋಡಲು' ಚಿತ್ರ ಸುರೇಶ್ ನಿರ್ಮಿಸುತ್ತಿರುವ ಭಾರಿ ಬಜೆಟ್ ಚಿತ್ರ. ಅದರ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಒಂದು ಕಡೆ ಚಿತ್ರ ನಿರ್ಮಾಣದ ಮತ್ತೊಂದು ಕಡೆ ರಾಜಕೀಯ ಜೀವನ ಇವೆರಡನ್ನೂ ಒಟ್ಟಿಗೆ ಸುರೇಶ್ ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು. ಜುಲೈ 31ರೊಳಗೆ ಬಿಬಿಎಂಪಿ ಚುನಾವಣೆಗಳನ್ನು ನಡೆಸಬೇಕು ಎಂದು ಹೈಕೋರ್ಟ್ ಗಡುವು ನೀಡಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಯನ್ನು ನಡೆಸಲು ರಾಜ್ಯ ಸರಕಾರ ಅಂತಿಮ ತಯಾರಿ ನಡೆಸಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ನೆನಪಿರಲಿ ಪ್ರೇಮ್ ಜತೆ ಅಮೂಲ್ಯ 'ಪ್ರೇಮಿಸಮ್'
ಮರುಕಳುಹಿಸಿದ ಮಿನುಗು ತಾರೆ ಕಲ್ಪನಾ ನೆನಪು
ಸುದೀಪ್, ರಮ್ಯಾ ಜೋಡಿಯ ಕಿಚ್ಚ ಹುಚ್ಚ್ಚ ಆರಂಭ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada