For Quick Alerts
  ALLOW NOTIFICATIONS  
  For Daily Alerts

  ರು.250 ಕೋಟಿ ಆಸ್ತಿಗೆ 'ವಾರಸ್ದಾರ' ರವಿ ಬೆಳಗೆರೆ

  By Rajendra
  |

  24x7 ಪತ್ರಕರ್ತ ಹಾಗೂ ಪಾರ್ಟ್ ಟೈಂ ಕಲಾವಿದರಾಗಿ ಗುರುತಿಸಿಕೊಂಡಿರುವ ರವಿ ಬೆಳಗೆರೆ ಅವರು ತಮ್ಮ ಆಸ್ತಿಯನ್ನು ಘೋಷಿಸಿದ್ದಾರೆ. ಮಹಾನದಿ ಕ್ರಿಯೇಷನ್ಸ್ ಲಾಂಛನದಲ್ಲಿ ರವಿ ಬೆಳಗೆರೆ ಅರ್ಪಿಸುತ್ತಿರುವ 'ಬಾಲ್ ಪೆನ್' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಅವರು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

  ತಮ್ಮ ಆರಂಭದ ದಿನಗಳನ್ನು ನೆನೆಸಿಕೊಂಡ ಅವರು, ತಾನು ಬಳ್ಳಾರಿಯಿಂದ ತುಮಕೂರಿಗೆ ಬಂದಿಳಿದಾಗ ನನ್ನ ಬಳಿ ಇದ್ದದ್ದು ಕೇವಲ 380 ರುಪಾಯಿ. ಈಗ ತಮ್ಮ ಶಿಕ್ಷಣ ಸಂಸ್ಥೆ ಪ್ರಾರ್ಥನಾ ಸೇರಿದಂತೆ ತಮ್ಮ ಸಮಗ್ರ ಆಸ್ತಿ ಬೆಲೆ 250 ಕೋಟಿ ರುಪಾಯಿಗಳು ಎಂದು ತಿಳಿಸಿದರು. ತಮ್ಮ ಪ್ರಾರ್ಥನಾ ಶಾಲೆಯಲ್ಲಿ 6,700 ಮಕ್ಕಳು ಶಿಕ್ಷಣ ಪಡೆಯುತ್ತಿರುವುದಾಗಿ ಹೆಮ್ಮೆಯಿಂದ ಹೇಳಿಕೊಂಡರು.

  ಒಬ್ಬ ಶಿಕ್ಷಕಿಯ ಮಗ, ಹಾಗೆಯೇ ಶಿಕ್ಷಕಿಯಾದ ಮಡದಿಗೆ ಪತಿಯಾಗಿ ಮೂರು ಮಕ್ಕಳ ತಂದೆಯಾಗಿ ತಮ್ಮದು ಸುಖಿ ಕುಟುಂಬ ಎಂದ ಅವರು, ತಮ್ಮ ಇಬ್ಬರು ಪುತ್ರಿಯರು ಅಂತರ್ಜಾತೀಯ ವಿವಾಹವಾಗಿರುವುದು ತಮಗೆ ಖುಷಿ ಕೊಟ್ಟಿದೆ ಎಂದರು. ತಮ್ಮ ಪುತ್ರನೂ ಶೀಘ್ರದಲ್ಲೇ ಮದುವೆಯಾಗುವುದಾಗಿ ತಿಳಿಸಿದರು.

  'ಬಾಲ್ ಪೆನ್' ಚಿತ್ರವನ್ನು ಭಾವನಾ ಬೆಳೆಗೆರೆ ಹಾಗೂ ಶ್ರೀನಗರ ಕಿಟ್ಟಿ ನಿರ್ಮಿಸುತ್ತಿದ್ದಾರೆ. ಮಣಿಕಾಂತ್ ಕದ್ರಿ ಅವರ ಸಂಗೀತವಿರುವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಶಶಿಕಾಂತ್. ಛಾಯಾಗ್ರಹಣ ಸಿಜೆ ರಾಜ್‌ಕುಮಾರ್, ಸಂಕಲನ ಶ್ರೀ, ಕತೆ ಕೆಸಿ ಮಂಜುನಾಥ್ ಹಾಗೂ ಸಾಹಿತ್ಯ ರಾಘವ ದ್ವಾರ್ಕಿ. ಪಾತ್ರವರ್ಗದಲ್ಲಿ ಸುಚೇಂದ್ರ ಪ್ರಸಾದ್, ಶ್ರೀನಗರ ಕಿಟ್ಟಿ, ಮಿಲಿಂದ್ ಶರ್ಮ ಮುಂತಾದವರಿದ್ದಾರೆ.

  ಈ ಚಿತ್ರದ ಮೂಲಕ ಅನಿವಾಸಿ ಭಾರತೀಯ ಆದಿತ್ಯ ರಾವ್ ಗಾಯಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿರುತ್ತಿದ್ದಾರೆ. ಅವರ ಚೊಚ್ಚಲ ನಿರ್ದೇಶನ 'ಬಾಲ್ ಪೆನ್' ಚಿತ್ರ ಅಕ್ಟೋಬರ್ 26ರಂದು ತೆರೆಕಾಣುತ್ತಿದೆ. ಈ ಚಿತ್ರದ ಮೂಲಕ ಆದಿತ್ಯ ಅವರು ಕನ್ನಡ ಚಿತ್ರರಂಗದಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. (ಒನ್‌ಇಂಡಿಯಾ ಕನ್ನಡ)

  English summary
  24x7 journalist cum actor Ravi Belagere declared that he is worth Rs.250 cr. He addressing at Kannada movie Ballpen press meet, presented by Ravi Belagere under Mahanadi creations. The movie is being produced by Bhavana Belagere and Srinagara Kitty. Aditya Rao debut as a singer for this film.
  Tuesday, October 9, 2012, 17:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X