»   » 'ಸೆಕ್ಸ್'ಸ್ವಾಮಿ ಅಲ್ಲ ಕಾಮಿಡಿ ಸ್ವಾಮಿ ಸಮಯಾನಂದ

'ಸೆಕ್ಸ್'ಸ್ವಾಮಿ ಅಲ್ಲ ಕಾಮಿಡಿ ಸ್ವಾಮಿ ಸಮಯಾನಂದ

Posted By:
Subscribe to Filmibeat Kannada

ನಟ ರಮೇಶ್ ಅರವಿಂದ ಅಭಿನಯಿಸಲಿರುವ ಸ್ವಾಮೀಜಿಗಳ ಬಗೆಗಿನ ಚಿತ್ರ ಸ್ವಾಮಿ ನಿತ್ಯಾನಂದ ಕುರಿತದ್ದಲ್ಲ. ಹಾಗೆಯೇ ಯಾವುದೇ ಸ್ವಾಮೀಜಿಯನ್ನು ಉದ್ದೇಶವಾಗಿ ಇಟ್ಟುಕೊಂಡು ತೆಗೆಯುತ್ತಿಲ್ಲ. ಸಾಮಾನ್ಯವಾಗಿ ಸ್ವಾಮೀಜಿಗಳನ್ನು ಗಮನದಲ್ಲಿಟ್ಟುಕೊಂಡು ತೆಗೆಯುತ್ತಿರುವ ಚಿತ್ರ ಇದಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳಲ್ಲಿ ತಾವು ನಿತ್ಯಾನಂದನ ಬಗ್ಗೆ ಸಿನಿಮಾ ತೆಗೆಯುತ್ತಿರುವುದಾಗಿ ಬರೆಯಲಾಗಿತ್ತು. ಆದರೆ ಅದು ಸುಳ್ಳು. ತಾವು ನಿತ್ಯಾನಂದನ ಬಗ್ಗೆ ಸಿನಿಮಾ ತೆಗೆಯುತ್ತಿಲ್ಲ. ಹೆಂಗೆಳೆಯರನ್ನು ಆಕರ್ಷಿಸುವ ಕಾಮಿಡಿ ಸ್ವಾಮೀಜಿ ಸಮಯಾನಂದನ ಚಿತ್ರ ಇದು ಎಂದು ಅವರು ವಿವರ ನೀಡಿದ್ದಾರೆ.

ಇದೊಂದು ಶುದ್ಧ ಮನರಂಜನಾತ್ಮಕ ಚಿತ್ರ. ಎಲ್ಲಾ ಮಸಾಲೆಗಳನ್ನು ಒಳಗೊಂಡಿರುವ ಕಾಮಿಡಿ ಚಿತ್ರವಿದು. ನಕ್ಕುನಗಿಸುವುದರ ಜೊತೆಗೆ ಸಮಯಾನಂದ ಪ್ರೇಕ್ಷಕರಿಗೆ ಸಂದೇಶವನ್ನು ನೀಡುತ್ತಾನೆ. ಗಜೇಂದ್ರಾಚಾರ್ ನಿರ್ದೇಶಿಸುತ್ತಿರುವ ಈ ಚಿತ್ರ ಜುಲೈನಲ್ಲಿ ಸೆಟ್ಟೇರಲಿದೆ. ಧರ್ಮದ ಹೆಸರಿನಲ್ಲಿ ಮಹಿಳೆಯನ್ನು ತುಚ್ಛವಾಗಿ ಅಥವಾ ಶೋಷಿಸುವುದು ತರವಲ್ಲ ಎಂದು ಒತ್ತಿ ಹೇಳುವ ಚಿತ್ರ ಇದಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada