»   » ಟಾಲಿವುಡ್ ಸುಂದರಿ ಸಮೀರಾ ರೆಡ್ಡಿಯ ಕನಸು ನನಸು

ಟಾಲಿವುಡ್ ಸುಂದರಿ ಸಮೀರಾ ರೆಡ್ಡಿಯ ಕನಸು ನನಸು

Posted By:
Subscribe to Filmibeat Kannada

ಬಾಲಿವುಡ್ ನಲ್ಲೂ ಖ್ಯಾತಳಾಗಿರುವ ಕಪ್ಪು ಸುಂದರಿ ಸಮೀರಾ ರೆಡ್ಡಿ ಸಾಕಷ್ಟು ಕನಸುಗಳ ರಾಣಿ. ಅದರಲ್ಲೊಂದು ಸ್ವಂತ ಮನೆ ಕಟ್ಟುವ ಕನಸು ಎಂದಿದ್ದರು ಈ ಸಮೀರಾ. ಅದೀಗ ನನಸಾದ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಆರು ವರ್ಷಗಳಲ್ಲಿ ಹದಿನೈದು ಚಿತ್ರಗಳಲ್ಲಿ ನಟಿಸಿ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದು ಪ್ರತಿಭಾವಂತೆ ಎನಿಸಿಕೊಂಡಾಕೆ.

ಇಂಥ ಸಮೀರಾಗೆ ಮನೆ ಕಟ್ಟುವ ಕನಸು ಇರುವುದು ಸಹಜ ಬಿಡಿ. ಆದರೆ ಆಕೆ ಸ್ವಂತ ಮನೆಯನ್ನು ಕೊಂಡಿದ್ದಾಳೆ. ಬಹುದಿನಗಳ ಕನಸಿನಂತೆ ಇದೆಯಂತೆ ಈ ಮನೆ. ಅದರಲ್ಲಿ ಅವಳಿಗಾಗಿ ಒಂದು ಚೆಂದದ ರೂಮು, ಅಕ್ವೇರಿಯಮ್, ಹಕ್ಕಿ, ಬೆಕ್ಕು, ನಾಯಿಮರಿ, ಕೈ ತೋಟ ಎಲ್ಲವೂ ಅಲ್ಲಿದೆಯಂತೆ.

"ಬಿಡುವಿಲ್ಲದೇ ನಾನು ಒದ್ದಾಡುತ್ತಿದ್ದ ಸಮಯದಲ್ಲಿ ನನ್ನ ಮನೆಯನ್ನು ಶೃಂಗಾರ ಮಾಡಿದ್ದು ನನ್ನ ಅಪ್ಪ, ಅಮ್ಮ ಮತ್ತು ಸೋದರಿಯರು. ಅವರಿಗೆ ಎಷ್ಟು 'ಥ್ಯಾಂಕ್ಸ್' ಹೇಳಿದರೂ ಕಡಿಮೆಯೇ. ನನಗೆ ನನ್ನ ಕನಸು ನನಸಾದ ಈ ಕ್ಷಣದಲ್ಲಿ ನನ್ನ ಫ್ಯಾಮಿಲಿ ಹಾಗೂ ನನ್ನ ಅಭಿಮಾನಿಗಳಿಗೆ ಹೇಗೆ ಕೃತಜ್ಞತೆ ಹೇಳಬೇಕೆಂಬುದೇ ತಿಳಿಯುತ್ತಿಲ್ಲ" ಎಂದಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
Actress Sameera Reddy had a dream of Own House. Now, she has purchased own house and fulfilled her dream. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada