»   »  ಫೋರಂನಲ್ಲಿ ಸಿಎಂ ಸಂಸಾರದ ಸವಾರಿ !

ಫೋರಂನಲ್ಲಿ ಸಿಎಂ ಸಂಸಾರದ ಸವಾರಿ !

Posted By:
Subscribe to Filmibeat Kannada

ಬೆಂಗಳೂರು, ಜೂ. 14 : ಪಕ್ಷದೊಳಗಿನ ಭಿನ್ನಮತ ಗೆದ್ದಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಶನಿವಾರ ಸಂಜೆ ಬಿಡುವು ಮಾಡಿಕೊಂಡು ಸವಾರಿ' ಕನ್ನಡ ಸಿನಿಮಾ ನೋಡಿ ಆನಂದಿಸಿದರು. ಸರಕಾರದ ವಿಕಾಸ ಸಂಕಲ್ಪ ಉತ್ಸವದೊಂದಿಗೆ ಆರಂಭಗೊಂಡ ಭಿನ್ನಮತ ಎರಡು ದಿನಗಳ ಹಿಂದಷ್ಟೇ ತಣ್ಣಗಾಗಿದೆ. ಮುಖ್ಯಮಂತ್ರಿ ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ವಿಜಯನಗರದಲ್ಲಿ ಸಂಜೆ ನಿಗದಿಯಾಗಿದ್ದ ಶರಣ ಸಂಸ್ಕೃತಿ ಉತ್ಸವದಲ್ಲಿ ಅವರು ಪಾಲ್ಗೊಳ್ಳಲಿಲ್ಲ. ಆದರೆ, ಕುಟುಂಬದ ಕೆಲ ಸದಸ್ಯರೊಡನೆ ಕೋರಮಂಗಲದ ಫೋರಂ ಮಹಲ್‌ನಲ್ಲಿರುವ ಪಿವಿಆರ್ ಚಿತ್ರಮಂದಿರಕ್ಕೆ ತೆರಳಿ,ಯಶಸ್ವಿ ಪ್ರದರ್ಶನ ಕಾಣುತ್ತಿರುವ ಶ್ರೀನಗರ ಕಿಟ್ಟಿ, ರಘು ಮುಖರ್ಜಿ, ಕಮಲಿನಿ ಮುಖರ್ಜಿ ಮುಖ್ಯ ಭೂಮಿಕೆಯ ಸವಾರಿ' ಚಲನಚಿತ್ರ ನೋಡಿ ಖುಷಿಪಟ್ಟರು. ಮೂವರು ಪುತ್ರಿಯರು, ಪುತ್ರ, ಸೊಸೆ ಹಾಗೂ ಮೊಮ್ಮಕ್ಕಳು ಯಡಿಯೂರಪ್ಪನವರೊಂದಿಗೆ ತೆರಳಿದ್ದರು ಎಂದು ಅವರ ಆಪ್ತ ಮೂಲಗಳು ದೃಢಪಡಿಸಿವೆ.

ಚಿತ್ರಮಂದಿರಕ್ಕೆ ಹೋಗಿ ಜನರ ಮಧ್ಯೆ ಸಿನಿಮಾ ನೋಡುವುದು ಮುಖ್ಯಮಂತ್ರಿಗೆ ಬಹಳ ಖುಷಿ ಕೊಡುವ ಸಂಗತಿಯಂತೆ. ಸಿಎಂ ಆಗುವುದಕ್ಕೆ ಮುನ್ನ ಅಪರೂಪಕ್ಕೊಮ್ಮೆ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುತ್ತಿದ್ದರಂತೆ. ಒಳ್ಳೆ ಕನ್ನಡ ಸಿನಿಮಾ, ಅದರಲ್ಲೂ ಡಾ.ರಾಜ್ ಕುಮಾರ್ ಸಿನಿಮಾ ಅಂದರೆ ಯಡಿಯೂರಪ್ಪನವರಿಗೆ ಬಹಳ ಇಷ್ಟವಂತೆ. ದೇಶಾದ್ಯಂತ ಚಿತ್ರ ರಸಿಕರ ಮನಸೂರೆಗೊಂಡಿದ್ದ ಲಗಾನ್' ಹಿಂದಿ ಸಿನಿಮಾವನ್ನೂ ನೋಡಿದ್ದರು ಎಂದು ಸಿಎಂ ಆಪ್ತ ವಲಯ ಹೇಳುತ್ತದೆ. ಚಲನಚಿತ್ರ ನೋಡಿ ಹೊರ ಬಂದ ಮುಖ್ಯಮಂತ್ರಿ, ಸಿನಿಮಾ ಚೆನ್ನಾಗಿದೆ, ಹಾಡುಗಳು ಬಹಳ ಸೊಗಸಾಗಿವೆ ಎಂದು
ಪ್ರತಿಕ್ರಿಯಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಇತ್ತ ಕಣ್ಣಾಯಿಸಿ:

ವಾಲ್ ಪೇಪರ್
ಕನ್ನಡ ನಟಿಯರ ಭಂಗಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada