»   » ನಟ ಕೆ.ಎಸ್.ಅಶ್ವತ್ಥ್ ಆರೋಗ್ಯದಲ್ಲಿ ಚೇತರಿಕೆ

ನಟ ಕೆ.ಎಸ್.ಅಶ್ವತ್ಥ್ ಆರೋಗ್ಯದಲ್ಲಿ ಚೇತರಿಕೆ

Posted By:
Subscribe to Filmibeat Kannada
Veteran Kannada actor K.S. Ashwath
ಕನ್ನಡದ ಹಿರಿಯ ನಟ ಕೆ.ಎಸ್.ಅಶ್ವತ್ಥ್ ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿದೆ. ಗುರುವಾರ ಅವರು ಮಾತನಾಡುವ ಮಟ್ಟಿಗೆ ಚೇತರಿಸಿಕೊಂಡಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅಶ್ವತ್ಥ್ ಅವರನ್ನು ಚಿಕಿತ್ಸೆಗಾಗಿ ಮೈಸೂರಿನ ಬಸಪ್ಪ ಸ್ಮಾರಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮೆದುಳಿಗೆ ರಕ್ತ ಪೂರೈಕೆ ನಿಧಾನಗೊಂಡು ಆರೋಗ್ಯ ವಿಷಮಿಸಿದ ಹಿನ್ನೆಲೆಯಲ್ಲಿ ಅವರನ್ನು ಬುಧವಾರ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ಗುರುವಾರ ಅವರು ಮಾತನಾಡುವ ಮಟ್ಟಿಗೆ ಚೇತರಿಸಿಕೊಂಡಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಅನೇಕ ಗಣ್ಯರು ಅವರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು.

ಗುರುವಾರ ಬೆಳಗ್ಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿ ಅಶ್ವತ್ಥ್ ಅವರ ಯೋಗಕ್ಷೇಮ ವಿಚಾರಿಸಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ, ಚಿತ್ರ ನಿರ್ಮಾಪಕ ಸಾ.ರಾ.ಗೋವಿಂದು, ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಸಹ ಭೇಟಿ ನೀಡಿ ಆರೋಗ್ಯದ ಬಗ್ಗೆ ವಿಚಾರಿಸಿದರು.

ಅಶ್ವತ್ಥ್ ಅವರ ಮಗ ಶಂಕರ್ ಅಶ್ವತ್ಥ್ ತಂದೆಯ ಕಿವಿಯ ಬಳಿ ಜೋರಾಗಿ ಜಯಮಾಲಾ ಬಂದ ಸುದ್ದಿಯನ್ನು ತಿಳಿಸಿದರು. 'ಓ ಜಯಮಾಲಾ ಬಂದಿದ್ದಾರಾ...'ಎಂದು ಹೇಳಿ ನಕ್ಕಿದ್ದರು. ಬಳಿಕ ಜಯಮಾಲಾ ಅವರು ಅಶ್ವತ್ಥ್ ಅವರ ಕೈಹಿಡಿದು ಬೇಗ ಗುಣಮುಖರಾಗಿ ಎಂದು ಹಾರೈಸಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಯಮಾಲಾ, ಕನ್ನಡದ ಹಿರಿಯ ನಟ ಅಶ್ವತ್ಥ್ ಅವರ ಆಸ್ಪತ್ರೆ ಖರ್ಚು ವೆಚ್ಚಕ್ಕಾಗಿ ವಾಣಿಜ್ಯ ಮಂಡಳಿಯಿಂದ ರು.1 ಲಕ್ಷ ಸಹಾಯ ಧನ ನೀಡುವುದಾಗಿ ತಿಳಿಸಿದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada