»   »  ಬೆಂಗಳೂರು ಹುಡುಗಿ ರಾಗಿಣಿಗೆ ಮಸ್ತ್ ಅವಕಾಶ

ಬೆಂಗಳೂರು ಹುಡುಗಿ ರಾಗಿಣಿಗೆ ಮಸ್ತ್ ಅವಕಾಶ

Subscribe to Filmibeat Kannada
Bangalore actress Raagini Dwivedi
ಸುದೀಪ್ ರ 'ವೀರ ಮದಕರಿ' ಚಿತ್ರ ಯಶಸ್ವಿ ಪ್ರದರ್ಶನ ಕಾಣುವ ಮೂಲಕ ನಟಿ ರಾಗಿಣಿ ದ್ವಿವೇದಿ ಅವರಿಗೆ ಉತ್ತಮ ಬ್ರೇಕ್ ಕೊಟ್ಟಿದೆ. ವೀರ ಮದಕರಿ ಚಿತ್ರದ ಯಶಸ್ಸು ಖುಷಿ ಕೊಟ್ಟಿದೆ ಎನ್ನುತ್ತಾರೆ ಬೆಂಗಳೂರು ಹುಡುಗಿ ರಾಗಿಣಿ. ಅವರು ನಟಿಸುತ್ತಿದ್ದ 'ಹೋಳಿ'ಎಂಬ ಸಣ್ಣ ಬಜೆಟ್ ನ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ಈ ಚಿತ್ರವನ್ನು ಶಂಕರಲಿಂಗ ಸುಗನಳ್ಳಿ ನಿರ್ದೇಶಿಸಿದ್ದಾರೆ. 'ಮಸ್ತ್ ಮಜಾ ಮಾಡಿ' ಚಿತ್ರದ ಹಾಡೊಂದರಲ್ಲಿ ಉಪೇಂದ್ರ ಹನ್ನ್ನೆರಡು ಮಂದಿ ನಾಯಕಿಯರೊಂದಿಗೆ ಹೆಜ್ಜೆ ಹಾಕಿದ್ದರು. ಆ ಹನ್ನೆರಡು ಮಂದಿ ನಾಯಕಿಯರಲ್ಲಿ ರಾಗಿಣಿ ಸಹ ಒಬ್ಬರಾಗಿದ್ದರು. ಅಷ್ಟೇ ಅಲ್ಲ ರಾಗಿಣಿ ಅವರು ಫೆಮೀನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ Miss Beautiful Hair ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಮಾಡೆಲಿಂಗ್ ನಲ್ಲಿ ಹೆಚ್ಚು ಹೆಚ್ಚು ಅವಕಾಶಗಳು ಬೆಂಗಳೂರಿನಲ್ಲೇ ಬರುತ್ತಿರುವ ಕಾರಣ ರಾಗಿಣಿ ಮತ್ತೆಲ್ಲೂ ಅವಕಾಶಗಳಿಗಾಗಿ ಅಲೆಯಲಿಲ್ಲ. ತಮಿಳಿನಲ್ಲೂ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆಯಂತೆ. ರಾಗಿಣಿ ಪೋಷಕರು ಎರಡು ದಶಕಗಳ ಹಿಂದೆಯೇ ಬೆಂಗಳೂರಿಗೆ ಸ್ಥಳಾಂತರವಾಗಿದ್ದರು. ಹಾಗಾಗಿ ಬೆಂಗಳೂರಿನಲ್ಲೇ ರಾಗಿಣಿ ವಿದ್ಯಾಭ್ಯಾಸ ಆರಂಭವಾಯಿತು. ಇನ್ನೂ ಪದವಿ ಓದುತ್ತಿರುವ ರಾಗಿಣಿ ಮೊಡೆಲಿಂಗ್ ಮತ್ತು ಸಿನಿಮಾ ಎರಡು ನನ್ನ ನೆಚ್ಚಿನ ಕ್ಷೇತ್ರಗಳು ಎನ್ನುತ್ತಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ತೆಲುಗು ಮೋಹಕ ತಾರೆ ಇಲಿಯಾನಾ ಕನ್ನಡಕ್ಕೆ?
ಬಾಲಿವುಡ್ ನಾಯಕಿಯರಿಗೆ ಕಿಮ್ಮತ್ತಿಲ್ಲ: ಬಿಪಶಾ
ಕಿರುತೆರೆ ನಟಿ ಅಭಿನಯಾ ವೈವಾಹಿಕ ಜೀವನಕ್ಕೆ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada