»   »  ಖ್ಯಾತ ನಿರ್ದೇಶಕ ಮಣಿರತ್ನಂಗೆ ಹೃದಯಾಘಾತ

ಖ್ಯಾತ ನಿರ್ದೇಶಕ ಮಣಿರತ್ನಂಗೆ ಹೃದಯಾಘಾತ

By: *ಸೇತು ಶಂಕರ್, ಚೆನ್ನೈ
Subscribe to Filmibeat Kannada
Maniratnam suffers heart attack
ಖ್ಯಾತ ಚಿತ್ರ ನಿರ್ದೇಶಕ ಮಣಿರತ್ನಂ ಅವರಿಗೆ ಹೃದಯಾಘಾತವಾಗಿದ್ದು ಚಿಕಿತ್ಸೆಗಾಗಿ ಅವರನ್ನು ಇಂದು ಚೆನ್ನೈನ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಇದು ಮೂರನೇ ಬಾರಿ.

ಮಣಿರತ್ನಂ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಚೆನ್ನೈನ ಆಸ್ಪತ್ರೆ ಮುಂದೆ ಜಮಾಯಿಸಿದ್ದರು. ಅವರು ಚೇತರಿಕೊಂಡಿರುವ ಸುದ್ದಿ ಕೇಳಲು ಕಾತುರದಿಂದ ಕಾಯುತ್ತಿದ್ದರು. ಕಳೆದ 5 ವರ್ಷಗಳಲ್ಲಿ ಮಣಿರತ್ನಂ ಅವರಿಗೆ ಹೃದಯಾಘಾತವಾಗುತ್ತಿರುವುದು ಇದು ಮೂರನೇ ಸಲ.

ಮೊದಲ ಹೃದಯಾಘಾತ 2004ರ ಡಿಸೆಂಬರ್ ನಲ್ಲಿ ಪಣಜಿಯಲ್ಲಿ ಆಗಿತ್ತು. ಗೋವಾದಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಇನ್ನೇನು ಮುಕ್ತಾಯ ಹಂತದಲ್ಲಿತ್ತು ಆ ಸಂದರ್ಭದಲ್ಲೇ ಅವರಿಗೆ ಆರೋಗ್ಯ ಕೈಕೊಟ್ಟಿತ್ತು. ಕೋಲ್ಕತ್ತಾದ ಹೌರಾ ಸೇತುವೆ ಮೇಲೆ 'ಯುವ' ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ (2006) ಎರಡನೇ ಬಾರಿ ಹೃದಯಾಘಾತಕ್ಕೆ ಒಳಗಾಗಿದ್ದರು.

ಪ್ರಸ್ತುತ ಮಣಿರತ್ನಂ ಅವರು 'ರಾವಣ' ಚಿತ್ರೀಕ್ರಣದಲ್ಲಿ ಬ್ಯುಸಿಯಾಗಿದ್ದರು. ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕಾಗಿ ಅವರು ಕೇರಳಕ್ಕೆ ಹೊರಡಲು ಅಣಿಯಾಗಿದ್ದರು. ಸುದೀರ್ಘ ಸಮಯ ಕಾದ ಬಳಿಕ ಕೇರಳ ಸರ್ಕಾರ ರಾವಣನ ಚಿತ್ರೀಕರಣಕ್ಕೆ ಅನುಮತಿ ನೀಡಿತ್ತು. ಅವರ ಆರೋಗ್ಯ ಸುಧಾರಿಸುತ್ತಿದ್ದು ಯಾವುದೇ ಅಪಾಯವಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಅನಂತನಾಗ್ ಮತ್ತು ಸುಹಾಸಿನಿ 'ಎರಡನೇ ಮದುವೆ'!
ಈ ಚಿತ್ರದ ನಾಯಕಿ ಯಾರೆಂದು ನೀವೇ ಊಹಿಸಿ!
ನಂ.1 ಪಟ್ಟಕ್ಕಾಗಿ ನಟಿ ರಮ್ಯಾ ಹೋರಾಟ!
ಸಲ್ಮಾನ್ ಖಾನ್ ನನ್ನ ಸಹ ನಟ ಮಾತ್ರ: ಅಸಿನ್
ವಿಜಯ್ ಮತ್ತು ಶುಭಾ ನಡುವಿನ ಗಾಸಿಪ್ ನಿಜವೇ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada