»   »  ರಾಜ್ ದಿಶೋಮ್ಯಾ ವಿಶ್ವದಾದ್ಯಂತ ಬಿಡುಗಡೆ ಆಯ್ತಾ?

ರಾಜ್ ದಿಶೋಮ್ಯಾ ವಿಶ್ವದಾದ್ಯಂತ ಬಿಡುಗಡೆ ಆಯ್ತಾ?

Subscribe to Filmibeat Kannada

ಬಹುನಿರೀಕ್ಷಿತ ರಾಜ್ ಶೋಮ್ಯಾನ್ ಚಿತ್ರ ಇಂದು ಕೊನೆಗೂ ಚಿತ್ರಮಂದಿರಕ್ಕೆ ತಲುಪಿದೆ. ಪುನೀತ್ ರಾಜ್ ಕುಮಾರ್ ಹಾಗೂ ಮಾಸ್ ನಿರ್ದೇಶಕ ಪ್ರೇಮ್ ಸಂಗಮದ ಈ ಚಿತ್ರಕ್ಕೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ, ಚಿತ್ರಮಂದಿರದಿಂದ ಹೊರಬಂದ ಅನೇಕ ಪ್ರೇಕ್ಷಕರು ಇದು ಜೋಗಿ ಚಿತ್ರದ ಎರಡನೇ ಅವತರಣಿಕೆ ಎಂದು ಮುಖ ಸಪ್ಪೆ ಮಾಡಿಕೊಂಡು ಹೊರಗೆ ಬರುತ್ತಿರುವ ದೃಶ್ಯ ಕಂಡುಬಂದಿತು.

ರಾಜ್ ದಿ ಮ್ಯಾನ್ ಚಿತ್ರ ಭಾರಿ ಅಬ್ಬರಕ್ಕೊಳಗಾದ ಚಿತ್ರ. ಈ ಚಿತ್ರ ಇಂಗ್ಲೆಂಡ್ ನ 8 ಕಡೆಗೆ, ಅಮೆರಿಕದಲ್ಲಿ 6 ಚಿತ್ರಮಂದಿರಕ್ಕೆ, ಆಸ್ಟ್ರೇಲಿಯಾದ ಎರಡು ಕಡೆಗೆ, ಅರಬ್ ದೇಶಗಳಲ್ಲಿ ಮೂರು ಕಡೆಗೆ, ಕೆನಡಾದ ಎರಡು ಕಡೆಗೆ, ಹಾಂಕಾಂಗ್ ನ ಒಂದು ಚಿತ್ರಮಂದಿರದಲ್ಲಿ, ಮಲೇಶಿಯಾದ ಒಂದು, ಸಿಂಗಾಪೂರ್ ನ ಒಂದು, ನ್ಯೂಜಿಲ್ಯಾಂಡ್ ನ ಒಂದು ಹಾಗೂ ಇಂಡೋನೇಷಿಯಾದ ಒಂದು ಥೇಟರ್ ಸೇರಿ ರಾಜ್ಯ ಸುಮಾರು 102 ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿತ್ತು. ಏಕಕಾಲಕ್ಕೆ ವಿಶ್ವದಾದ್ಯಂತ ಬಿಡುಗಡೆ ಮಾಡುವುದಾಗಿ ಈ ಹಿಂದೆ ಘೋಷಿಸಿಕೊಂಡ ಕೆಲವು ಚಿತ್ರಗಳು ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ ವಿಫಲವಾಗಿರುವ ಉದಾಹರಣೆಗಳಿವೆ. ಉದಾ : ಬೊಂಬಾಟ್ ಮತ್ತು ಸೈಕೋ.

ದಟ್ಸ್ ಕನ್ನಡ ಓದುಗರು ವಿಶ್ವವ್ಯಾಪಿಯಾಗಿರುವುದರಿಂದ ನಮ್ಮ ಕಚೇರಿಗೆ ರಾಶಿ ಈಮೇಲ್ ಗಳು, ಕರೆಗಳು ಬರುತ್ತಿದ್ದು, ವಿದೇಶಗಳಲ್ಲಿ ರಾಜ್ ದಿಶೋಮ್ಯಾನ್ ಬಿಡುಗಡೆ ಬಗ್ಗೆ ವಿವರಣೆ ಕೇಳುತ್ತಿದ್ದಾರೆ. ಆದರೆ, ಪತ್ರಿಕಾ ಜಾಹೀರಾತು ಪ್ರಕಾರ ವಿಶ್ವದಾದ್ಯಂತ ಅತೀ ಹೆಚ್ಚು ಥೇಟರ್ ಗಳಲ್ಲಿ ಬಿಡುಗಡೆ ಹೊಂದಿದ ಕೀರ್ತಿ ರಾಜ್ ದಿ ಶೋಮ್ಯಾನ್ ಸಲ್ಲಬೇಕು ಎನ್ನುವುದು ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಅಂಬೋಣ. ಆದರೆ, ವಾಸ್ತವಾಂಶ ಬೇರೆ ಇದೆ ಎಂದು ಅನಿವಾಸಿ ಪ್ರೇಕ್ಷಕರು ವರದಿ ಮಾಡುತ್ತಿದ್ದಾರೆ. ಈ ಸಂಶಯ, ಗೊಂದಲವನ್ನು ಚಿತ್ರದ ನಿರ್ಮಾಪಕರೇ ನಿವಾರಿಸಬೇಕು.

ಹಣಕಾಸಿನ ವಿಚಾಕರ್ರೆ ಬಂದರೆ, ಚಿತ್ರದ ಪ್ರತಿ ಪ್ರಿಂಟ್ ಗೆ ಕನಿಷ್ಠ 70 ಸಾವಿರ ರುಪಾಯಿಗಳು ಬೇಕು. ರಾಜ್ಯದಲ್ಲಿ ಬಿಡುಗಡೆಯಾಗುವ 102 ಥೇಟರ್ ಗಳಿಗೆ ಸಾಕಷ್ಟು ಹಣ ವಿನಿಯೋಗಿಸಲಾಗಿದೆ. ಇದರ ಜೊತೆಗೆ ವಿದೇಶಿಗಳಿಗೆ 26 ಪ್ರಿಂಟ್ ಕಳಿಸುವ ಖರ್ಚು, ಕಾರ್ಗೋ ಕೋರಿಯರ್ ನ ವೆಚ್ಚ ( ಸುಮಾರು 21 ಲಕ್ಷ) ಸಾಮಾನ್ಯವಾದುದಲ್ಲ. ದಿನಪತ್ರಿಕೆಗಳಲ್ಲಿ ಕಾಣಿಸಿಕೊಂಡ ಜಾಹೀರಾತಿನ ಪ್ರಕಾರ ವಿದೇಶದಲ್ಲಿ ರಾಜ್ ದಿ ಶೋಮ್ಯಾನ್ ರಾಜ್ಯದೊಂದಿಗೆ ಏಕಕಾಲದಲ್ಲಿ ಬಿಡುಗಡೆಗೊಂಡಿದೆ ಎನ್ನುವ ಅಂಶ ತುಸು ಅನಮಾನಕ್ಕೆ ಈಡುಮಾಡಿದೆ. ಚಿತ್ರ ವಿಶ್ವದಾದ್ಯಂತ ನಿಜಕ್ಕೂ ಬಿಡುಗಡೆ ಆಗಿದೆಯೋ ಅಥವಾ ಇದೊಂದು ಪ್ರಚಾರ ತಂತ್ರವೋ ಎಂದು ವಿಶ್ವ ಕನ್ನಡಿಗರು ಕೇಳುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada