»   » ಮಾತಿನ ಮರುಲೇಪನ ಮುಗಿಸಿದ 'ಜಯಹೇ'

ಮಾತಿನ ಮರುಲೇಪನ ಮುಗಿಸಿದ 'ಜಯಹೇ'

Posted By:
Subscribe to Filmibeat Kannada

ಸಿಗ್ನಸ್ ಏಂಟರ್‌ಟೈನ್ ಮೆಂಟ್ ರವರ "ಜಯಹೇ" ಚಿತ್ರದ ಮಾತಿನ ಮರುಲೇಪನ ಕಾರ್ಯವು ಇತ್ತೀಚೆಗೆ ನಗರದ ಚಾಮುಂಡೇಶ್ವರಿ ಸ್ಟುಡಿಯೋವಿನಲ್ಲಿ ಮುಕ್ತಾಯಗೊಂಡಿತು.ಚಿತ್ರಕ್ಕೆ ಬರುವವಾರದಿಂದ ರೀರಿಕಾರ್ಡಿಂಗ್ ಹಾಗೂ ಮಿಕ್ಸಿಂಗ್ ಕಾರ್ಯವು ಆರಂಭವಾಗಲಿದೆ ಎಂದು ನಿರ್ದೇಶಕ ಥ್ರಿಲ್ಲರ್ ಮಂಜು ತಿಳಿಸಿದ್ದಾರೆ.

ಚಿತ್ರಕ್ಕೆ ಕಮಲ್ ಸಾರಥಿ, ಸಂಭಾಷಣೆ, ಜನಾರ್ಧನ್ ಬಾಬು ಛಾಯಾಗ್ರಹಣ, ಎಂ.ಎನ್. ಕೃಪಾಕರ್ ಸಂಗೀತ, ತ್ರಿಭುವನ್, ಹರಿಕೃಷ್ಣ ನೃತ್ಯ, ಗೋವರ್ಧನ್ ಸಂಕಲನ, ಬಾಬುಖಾನ್ ಕಲೆ, ಶ್ರೀನಿವಾಸ್‌ಕುಮಾರ್ ನಿರ್ದೇಶನ ಸಹಕಾರ, ಅನಿಲ್‌ಕುಮಾರ್ ನಿರ್ಮಾಣ ಮೇಲ್ವಿಚಾರಣೆಯಿದ್ದು, ಚಿತ್ರದ ಕಥೆ, ಚಿತ್ರಕಥೆ, ಸಾಹಸ, ಸಾಹಿತ್ಯ ಮತ್ತು ನಿರ್ದೇಶನ ಥ್ರಿಲ್ಲರ್ ಮಂಜು.

ಕರಾಟೆಯಲ್ಲಿ ಲೇಡಿ ಬ್ರೂಸ್ಲೀ ಆಯೇಷಾ ಈ ಚಿತ್ರದ ಮೂಲಕ ನಾಯಕಿನಟಿಯಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದು, ಇವರೊಂದಿಗೆ ಜೈ ಆಕಾಶ್, ಗೌರೀ ಪಂಡಿತ್, ಥ್ರಿಲ್ಲರ್ ಮಂಜು, ಅವಿನಾಶ್, ರಮೇಶ್ ಭಟ್, ಸೂರ್ಯನಾರಾಯಣ, ರವಿಕುಮಾರ್, ರೇಖಾ ಉಳಿದ ತಾರಾಬಳಗದಲ್ಲಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada