»   » ಒಂದೇ ವಾರದ ಸಿನಿಮಾ ಬರುತ್ತಿದೆ, ನೋಡಿ ಬೇಗ!

ಒಂದೇ ವಾರದ ಸಿನಿಮಾ ಬರುತ್ತಿದೆ, ನೋಡಿ ಬೇಗ!

Posted By:
Subscribe to Filmibeat Kannada
Akash Thanisha
ಏಕಮೇವ ಎಂಬ ಚಿತ್ರ ನಿರ್ಮಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಹಾಗೂ ಪ್ರಸಿದ್ಧಿ ಪಡೆದಿದ್ದ ಪ್ರವೀಣ್ ಕುಮಾರ್ ಕೊಂಚಾಡಿ ಅದಕ್ಕೂ ಮೊದಲು ಇನ್ನೊಂದು ಚಿತ್ರ ನಿರ್ಮಿಸಿದ್ದರು. ಅದರ ಹೆಸರು 'ಒಂದೇ ಒಂದು ಸಾರಿ'. ಆದರೆ ಅದಕ್ಕೆ ಬಿಡುಗಡೆಯ ಭಾಗ್ಯ ದೊರೆತಿರಲಿಲ್ಲ. ಸಾಕಷ್ಟು ಬಾರಿ ಬಿಡುಗಡೆಯ ಬೇಡಿ ಚಿತ್ರ ಪ್ರೇಕ್ಷಕರೆದುರು ಬರಲು ಸಿದ್ಧವಾಗಿತ್ತಾದರೂ ಫಲ ಸಿಕ್ಕಿರಲಿಲ್ಲ.

ಈಗ ಆ ಚಿತ್ರಕ್ಕೆ ಬಿಡುಗಡೆಯ ಭಾಗ್ಯ. ಆದರೂ ಖುಷಿಯ ಸಮಾಚಾರವೇನಲ್ಲ. ಕಾರಣ ಈ ಚಿತ್ರ ಇದೇ ಡಿಸೆಂಬರ್ 16 ರಂದು ಅನುಪಮ ಥಿಯೇಟರ್ ತೆರೆಗೆ ಬರಲಿದೆ. ಆದರೆ ಅದಕ್ಕೊಂದು ದೊಡ್ಡ ವಿಘ್ನ ಎದುರಾಗಿದೆ. ಸರಿಯಾಗಿ ಒಂದು ವಾರದ ನಂತರ, ಅಂದರೆ ಇದೇ ತಿಂಗಳ 22 ರಂದು ಪಿ ಎನ್ ಸತ್ಯ ನಿರ್ದೇಶನದ ಜೇಡ್ರಳ್ಳಿ ಕೃಷ್ಣಪ್ಪ ನಾಯಕನಾಗಿರುವ 'ಜೇಡ್ರಳ್ಳಿ' ಚಿತ್ರ ಅದೇ ಅನುಪಮದಲ್ಲಿ ತೆರೆ ಕಾಣಲಿದೆ.

ಆಕಾಶ್ ಎಂಬ ಹೊಸ ಹುಡುಗ ನಾಯಕನಾಗಿರುವ 'ಒಂದೇ ಒಂದು ಸಾರಿ' ಎಂಬ ಚಿತ್ರ ಬಿಡುಗಡೆಗೂ ಮೊದಲೇ 'ಒಂದೇ ಒಂದು ವಾರ' ಚಿತ್ರವಾಗಿರುವುದು ಕಾಕತಾಳೀಯ ಸತ್ಯ. ಅಂದುಕೊಂಡಂತೆ ನಡೆದರೆ ಕನ್ನಡ ಚಿತ್ರೋದ್ಮದಲ್ಲಿಯೇ ಇರುವ ಪೈಪೋಟಿ ಹಾಗೂ ಒಳರಾಜಕೀಯಕ್ಕೆ ಇದು ಕನ್ನಡಿ ಹಿಡಿಯುವ ಚಿತ್ರವಾಗುವುದರಲ್ಲಿ ಸಂಶಯವೇ ಇಲ್ಲ. (ಒನ್ ಇಂಡಿಯಾ ಕನ್ನಡ)

English summary
Kannada Movie Onde Ondu Sari releses on Dec 16. Praveen Kumar Konchadi Direction and New comer Aakash is the Hero. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada