»   »  ಇನ್ನೊಂದು ದಾಖಲೆಗೆ ಮುಂದಾದ ಮಾಸ್ಟರ್ ಕಿಶನ್

ಇನ್ನೊಂದು ದಾಖಲೆಗೆ ಮುಂದಾದ ಮಾಸ್ಟರ್ ಕಿಶನ್

Subscribe to Filmibeat Kannada

'ಕೇರಾಫ್ ಫುಟ್ ಪಾತ್' ಚಿತ್ರದ ನಂತರ ಮಾಸ್ಟರ್ ಕಿಶನ್(13)ಮತ್ತೊಂದು ದಾಖಲೆಗೆ ಮುಂದಾಗಿದ್ದಾರೆ. ಈ ಚಿತ್ರವನ್ನು ಕಿಶನ್ ಸ್ವತಃ ನಿರ್ದೇಶಿಸಿ ನಟಿಸಲಿದ್ದಾರೆ. ಪೋಷಕರು ಮತ್ತು ಮಕ್ಕಳ ಸಂಬಂಧವೇ ಚಿತ್ರದ ಕಥಾವಸ್ತು. ಈ ಚಿತ್ರವನ್ನು ಏಕಕಾಲಕ್ಕೆ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಚಿತ್ರೀಕರಿಸಲಾಗುತ್ತದೆ ಎಂದು ಕಿಶನ್ ಅವರ ತಂದೆ ಎಚ್ ಆರ್ ಶ್ರೀಕಾಂತ್ ತಿಳಿಸಿದ್ದಾರೆ.

ತಾಂತ್ರಿಕ ಮತ್ತು ತಾರಾ ಬಳಗದ ಆಯ್ಕೆ ನಡೆಯುತ್ತಿದೆ. ಶೀಘ್ರದಲ್ಲೇ ತಾರೆಗಳ ಆಯ್ಕೆ ಅಂತಿಮವಾಗಲಿದೆ. ಇದೂ ಸಹ ಒಂದು ಮಕ್ಕಳ ಚಿತ್ರ ಎಂಬ ವಿವರಗಳನ್ನು ಶ್ರೀಕಾಂತ್ ನೀಡಿದ್ದಾರೆ. ಪ್ರಸ್ತುತ 9 ನೇ ತರಗತಿಯಲ್ಲಿ ಓದುತ್ತಿರುವ ಕಿಶನ್ ಮುಂದೆ ಆನ್ ಲೈನ್ ನಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆಯಬೇಕೆಂದು ನಿರ್ಧರಿಸಿದ್ದಾರೆ.

ಈ ಹಿಂದೆ ಕಿಶನ್ ನಿರ್ದೇಶಿಸಿದ್ದ ಕೇರಾಫ್ ಫುಟ್ ಪಾತ್ ಚಿತ್ರ 11 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸಹ ಸ್ಥಾನಪಡೆದಿದೆ. ಇದನ್ನು ನಿರ್ದೇಶಿಸಿದಾಗ ಕಿಶನ್ ಗೆ ಕೇವಲ 10 ವರ್ಷ ವಯಸ್ಸು! ಈಗ ಮೂರು ವರ್ಷಗಳ ಬಳಿಕ ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ.

ಸದ್ಯಕ್ಕೆ ಕಿಶನ್ ಚಿತ್ರಕತೆಯಲ್ಲಿ ಮಗ್ನರಾಗಿದ್ದು ಇನ್ನೂ ಹೆಸರಿಡದ ಈ ಚಿತ್ರ ಆಗಸ್ಟ್ ನಲ್ಲಿ ಸೆಟ್ಟೇರಲಿದೆಯಂತೆ. ಈ ಚಿತ್ರವನ್ನು ಕಿರಣ್ ಮೂವಿ ಮೇಕರ್ಸ್ ಲಾಂಛನದಲ್ಲಿ ಕಿಶನ್ ತಂದೆ ನಿರ್ಮಿಸುತ್ತಿದ್ದಾರೆ. ಕೇರಾಫ್ ಫುಟ್ ಪಾತ್ ಚಿತ್ರದಲ್ಲಿ ಜಾಕಿ ಶ್ರಾಫ್, ತಾರಾ ಮತ್ತು ಸೌರಭ್ ಶುಕ್ಲಾ ಜತೆ ಕಿಶನ್ ಅದ್ಭುತವಾಗಿ ನಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada