»   » ಚಿತ್ರೀಕರಣ ವೇಳೆ ಅಪಘಾತ: ಗಾಯಗೊಂಡ ಪುನೀತ್

ಚಿತ್ರೀಕರಣ ವೇಳೆ ಅಪಘಾತ: ಗಾಯಗೊಂಡ ಪುನೀತ್

Subscribe to Filmibeat Kannada

'ಜಾಕಿ' ಚಿತ್ರೀಕರಣದ ವೇಳೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗಾಯಗೊಂಡಿದ್ದಾರೆ. ಪುನೀತ್ ಜೊತೆಗೆ ನಟಿ ಭಾವನಾ ಸಹ ಗಾಯಗೊಂಡಿದ್ದಾರೆ. ಘಟನೆಯ ವಿವರ ಹೀಗಿದೆ; ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ ಜಾಕಿ ಚಿತ್ರೀಕರಣ ನಡೆಯುತ್ತಿತ್ತು. ಗೆಳತಿಯೊಂದಿಗೆ ಪುನೀತ್ ರಾಜ್ ಕುಮಾರ್ ಬೈಕ್ ಹೋಡಿಸುವ ಸನ್ನಿವೇಶ ಅದಾಗಿತ್ತು.

ಬೈಕಿನ ಹಿಂದಿನ ಸೀಟಿನಲ್ಲಿ ಭಾವನಾ ಕುಳಿತಿದ್ದರು. ಕಬ್ಬಿನ ಜಲ್ಲೆಗಳನ್ನು ಭರ್ತಿ ತುಂಬಿದ ಲಾರಿಯೊಂದು ಬೈಕಿನ ಸನಿಹದಲ್ಲೇ ಹಾದುಹೋಗುತ್ತದೆ. ಕಬ್ಬಿನ ಜಲ್ಲೆಯೊಂದನ್ನು ಕಿತ್ತುಕೊಳ್ಳಲು ಭಾವನಾ ಕೈ ಹಾಕುತ್ತಾರೆ. ಈ ಸನ್ನಿವೇಶದ ಚಿತ್ರೀಕರಣದ ವೇಳೆ ಬೈಕ್ ಹೋಡಿಸುತ್ತಿದ್ದ ಪುನೀತ್ ಆಯತಪ್ಪಿ ದ್ದಾರೆ. ಬೈಕಿನ ಸಮೇತ ಬಿದ್ದುಬಿಟ್ಟಿದ್ದಾರೆ.

ಪುನೀತ್ ಗೆ ಅಲ್ಪ ಸ್ವಲ್ಪ ತರಚು ಗಾಯಗಳಾಗಿವೆ. ಭಾವನಾ ಅವರಿಗೆ ಒಂಚೂರು ಹೆಚ್ಚಿನ ತರಚು ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ. ಒಂದು ವಾರ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಭಾವನಾ ಅವರಿಗೆ ಸೂಚಿಸಿದ್ದಾರೆ. ಮಲಯಾಳಿ ಬೆಡಗಿ ಭಾವನಾ ಅಭಿನಯಿಸುತ್ತಿರುವ ಕನ್ನಡದ ಚೊಚ್ಚಲ ಚಿತ್ರ ಇದಾಗಿದೆ.

ಪೂರ್ಣಿಮಾ ಎಂಟರ್‌ಪ್ರೈಸಸ್ ಲಾಂಛನದಡಿಯಲ್ಲಿ ಡಾ.ರಾಜ್ ಕುಮಾರ್ ಅರ್ಪಿಸಿ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸುತ್ತಿರುವ ಅದ್ದೂರಿ ಚಿತ್ರ 'ಜಾಕಿ'. ಸೂರಿ ನಿರ್ದೇಶನ, ಸತ್ಯ ಹೆಗ್ಡೆ ಛಾಯಾಗ್ರಹಣ ಜಾಕಿ ಚಿತ್ರಕ್ಕಿದೆ. ತಾರಾಗಣದಲ್ಲಿ ಪುನೀತ್ ರಾಜ್ ಕುಮಾರ್ ಜೋಡಿಯಾಗಿ ಚತುರ್ಭಾಷಾ ತಾರೆ ಭಾವನಾ ಕಾಣಿಸಿಕೊಳ್ಳುತ್ತಿದ್ದು, ರಂಗಾಯಣ ರಘು, ರವಿ ಕಾಳೆ, ಶೋಭರಾಜ್, ಸಂಪತ್, ಉಮೇಶ್ ಮುಂತಾದವರಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada