Just In
Don't Miss!
- Sports
ಜೋ ರೂಟ್ ದ್ವಿಶತಕ, ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ಗೆ 7 ವಿಕೆಟ್ ಗೆಲುವು
- News
ಭಾರತದ ಗಡಿಯಲ್ಲಿ ಚೀನಾ ಹಳ್ಳಿ: ಇದು ಬಾಹ್ಯಕಾಶದ ಚಿತ್ರ ತೆರೆದಿಟ್ಟ ಸತ್ಯ!
- Education
KSMHA Recruitment 2021: 15 ಅಧ್ಯಕ್ಷರು ಮತ್ತು ಸದಸ್ಯರು ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಬಂಜೆತನಕ್ಕೆ ಕಾರಣವಾಗುವ ಥೈರಾಯ್ಡ್ ಲಕ್ಷಣಗಳು
- Automobiles
25 ಪೈಸೆ ಹೆಚ್ಚಳದೊಂದಿಗೆ ಸಾರ್ವಕಾಲಿಕ ಏರಿಕೆ ಕಂಡ ಪೆಟ್ರೋಲ್ ಬೆಲೆ
- Finance
ಮೈಂಡ್ ಟ್ರೀ ಕಂಪೆನಿ ನಿವ್ವಳ ಲಾಭ 66% ಹೆಚ್ಚಳ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕ್ರೇಜಿಸ್ಟಾರ್ ರವಿಚಂದ್ರನ್ ಸಂಸಾರದಲ್ಲಿ ಸರಿಗಮ
ಕ್ರೇಜಿಸ್ಟಾರ್ ರವಿಚಂದ್ರನ್ ಈಗ ಹ್ಯಾಪಿ ಹಸ್ಪೆಂಡ್. ಕನ್ನಡ ಚಿತ್ರರಂಗದ 'ಗಡಿಬಿಡಿ ಗಂಡ' ದಾಂಪತ್ಯದಲ್ಲಿ ಇಪ್ಪತ್ತೈದರ ವಸಂತಕ್ಕೆ ಅಡಿಯಿಟ್ಟಿದ್ದಾರೆ. ಸೋಮವಾರ (ಫೆ.14) ಪ್ರೇಮಿಗಳ ದಿನದಂದು ಅರಮನೆ ಮೈದಾನದಲ್ಲಿ ತಮ್ಮ ಪತ್ನಿ ಸುಮತಿ ಅವರೊಂದಿಗೆ 25ರ ವಾರ್ಷಿಕೋತ್ಸವವನ್ನು ರವಿ ಆಚರಿಸಿಕೊಂಡರು ಸಂಭ್ರಮಿಸಿದರು.
ತಮ್ಮ ದಾಂಪತ್ಯ ಜೀವನದ ಸಂಭ್ರಮವನ್ನು ಹಂಚಿಕೊಳ್ಳಲು ರವಿ ಚಿತ್ರರಂಗದ ಬಹುತೇಕ ಗಣ್ಯರನ್ನು ಆಹ್ವಾನಿಸಿದ್ದರು. ಫೆಬ್ರವರಿ 14, 1986ರಲ್ಲಿ ರವಿಚಂದ್ರನ್ ಅವರು ಸುಮತಿ ಅವರನ್ನು ವರಿಸಿದ್ದರು. ಈಗ ಅವರ ದಾಂಪತ್ಯಕ್ಕೆ ರಜತ ಸಂಭ್ರಮ. ಇದೇ ಸಂದರ್ಭದಲ್ಲಿ ರವಿ ಅವರ ಹೊಸ ಚಿತ್ರ 'ನರಸಿಂಹ' ಕೂಡ ಸೆಟ್ಟೇರಿದೆ.
ಕನಸುಗಾರ ರವಿಚಂದ್ರನ್ ಕೈಯಲ್ಲಿ ಸದ್ಯಕ್ಕೆ ಮೂರು ಚಿತ್ರಗಳಿವೆ. ಈಗಾಗಲೆ 'ಮಲ್ಲಿಕಾರ್ಜುನ' ಮತ್ತು 'ಹ್ಯಾಪಿ ಹಸ್ಪೆಂಡ್ಸ್' ಚಿತ್ರೀಕರಣ ಮುಗಿದಿದೆ. 'ನರಸಿಂಹ' ಚಿತ್ರ ಈಗಷ್ಟೇ ಸೆಟ್ಟೇರಿದೆ. ಈ ಚಿತ್ರವವನ್ನು ಎನ್ ಕುಮಾರ್ ನಿರ್ಮಿಸುತ್ತಿದ್ದು ಮೋಹನ್ ಆಕ್ಷನ್, ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮೂಲಕ ಹಂಸಲೇಖ ಮತ್ತು ರವಿಚಂದ್ರನ್ ಮತ್ತೆ ಜೋಡಿ ಮತ್ತೆ ಒಂದಾಗಿದ್ದಾರೆ.