»   » ಎಂ.ಎಸ್.ಪಾಳ್ಯದಲ್ಲಿ 'ಸಲಗ'ನಿಗೆ ಸ್ಕೆಚ್!

ಎಂ.ಎಸ್.ಪಾಳ್ಯದಲ್ಲಿ 'ಸಲಗ'ನಿಗೆ ಸ್ಕೆಚ್!

Posted By:
Subscribe to Filmibeat Kannada

ಮಂದಾರತಿ ಮೂವೀ ಮೇಕರ್ಸ್ ಲಾಂಛನದಲ್ಲಿ ರಮಾ ಅವರು ನಿರ್ಮಿಸುತ್ತಿರುವ 'ಸಲಗ' ಚಿತ್ರಕ್ಕೆ ಕಳೆದ ವಾರ ಬೆಂಗಳೂರಿನ ಎಂ.ಎಸ್.ಪಾಳ್ಯದ ತೋಟದ ಮನೆಯೊಂದರಲ್ಲಿ ಚಿತ್ರೀಕರಣ ನಡೆಯಿತು. ಆ ಮನೆಯಲ್ಲಿ ಪಾತಕಿಗಳಾದ ರೌಡಿ ರೆಡ್ಡಿ (ಸತ್ಯಜಿತ್) ಸಿದ್ದು ಹಾಗೂ ಸೇಕಿ, ಮೂವರೂ ಸೇರಿ ನಾಯಕ ಕಿರಣ್‌ನನ್ನು ಮುಗಿಸಲು ಸ್ಕೆಚ್ ಹಾಕುತ್ತಾರೆ. ಆದರೆ ಕಿರಣ್ ಸ್ವಲ್ಪದರಲ್ಲೇ ಪಾರಾಗುತ್ತಾನೆ.

ಪೊಲೀಸ್ ಇನ್ಸ್‌ಪೆಕ್ಟರ್ ಪ್ರಭಾಕರ್ ನಾಯಕನನ್ನು ಪಾರು ಮಾಡುತ್ತಾನೆ. ಇದಲ್ಲದೆ ಪಕ್ಕದ ರಾಮಚಂದ್ರಪುರದ ಅಲ್ಯೂಮೀನಿಯಂ ಫ್ಯಾಕ್ಟರಿಯಲ್ಲಿ ರೌಡಿಗಳ ಗ್ಯಾಂಗ್ ಮತ್ತು ನಾಯಕನ ಮಧ್ಯ ನಡೆಯುವ ಅನೇಕ ದೃಶ್ಯಗಳನ್ನು ಕೂಡ ಚಿತ್ರೀಕರಿಸಲಾಯಿತು.

ನಿರ್ಮಾಪಕರೇ ಬರೆದ ಕಥೆಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವವರು ಪ್ರಾಣ್, ಶಂಕರ್ ಛಾಯಾಗ್ರಹಣ, ಸಿ.ವಿ.ಬ್ರದರ್ ಸಂಭಾಷಣೆ, ಮಧುರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಕುಮಾರ್ ಆಣೆ ಚೌಡನಹಳ್ಳಿ ಸಹ ನಿರ್ಮಾಪಕರಾಗಿದ್ದು ಎನ್.ಬಿ.ಲೋಕೇಶ್, ಮಧುರ, ಪ್ರಾಣ್ ಸಾಹಿತ್ಯ ರಚಿಸಿದ್ದಾರೆ.

ಕೌರವ ವೆಂಕಟೇಶ್ ಅಲ್ಟಿಮೇಟ್ ಶಿವು ಸಾಹಸ, ರಾಜೇಶ್ ಬ್ರಹ್ಮಾವರ್, ಹರಿಕೃಷ್ಣ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಕಿರಣ್, ಚೈತ್ರ ರೈ, ಉಲ್ಲಾಸಿನಿ, ಪ್ರಭಾಕರ್, ದಯಾನಂದ್, ಸತ್ಯಜಿತ್, ಬ್ಯಾಂಕ್ ಜನಾರ್ಥನದ, ಅಪೂರ್ವ, ಮಾರಿಮುತ್ತು, ಶೋಭಾರಾಣಿ, ಎನ್.ಜಿ.ಎಫ್ ಮಂಜು, ಕೃಷ್ಣ ಅಡಿಗ, ರಮೇಶ್ ಬಾಬು ತಾರಾಗಣದಲ್ಲಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada