Just In
Don't Miss!
- News
'ಮಮತಾರನ್ನು 50 ಸಾವಿರ ಮತಗಳಿಂದ ಸೋಲಿಸದಿದ್ದರೆ ರಾಜಕೀಯ ತ್ಯಜಿಸುತ್ತೇನೆ'
- Automobiles
ಇನ್ಮುಂದೆ ಮನೆ ಬಾಗಿಲಿಗೆ ಡೀಸೆಲ್ ಪೂರೈಕೆ ಮಾಡಲಿದೆ ಹೊಸ ಸ್ಟಾರ್ಟ್ ಅಪ್ ಕಂಪನಿ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 18ರ ಚಿನ್ನ, ಬೆಳ್ಳಿ ದರ
- Education
KTIL Recruitment 2021: 38 ಡಿಟಿಸಿ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಜೋ ರೂಟ್ ದ್ವಿಶತಕ, ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ಗೆ 7 ವಿಕೆಟ್ ಗೆಲುವು
- Lifestyle
ಬಂಜೆತನಕ್ಕೆ ಕಾರಣವಾಗುವ ಥೈರಾಯ್ಡ್ ಲಕ್ಷಣಗಳು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಡೆಗೂ ಬಾಯ್‌ಫ್ರೆಂಡ್ ಜೊತೆ ಸಿಕ್ಕಿಬಿದ್ದ ರಮ್ಯಾ!
ತನ್ನ ಬಾಯ್‌ಫ್ರೆಂಡ್ ಐಪಿಎಲ್ ಪಂದ್ಯ ನೋಡಲು ಬಂದೇ ಬರುತ್ತಾನೆ ಎಂದು ರಮ್ಯಾ ಕೆಲ ದಿನಗಳ ಹಿಂದಷ್ಟೆ ಹೇಳಿದ್ದರು. ಆದರೆ ದಿನಕ್ಕೊಂದು ರೋಚಕ ಸಂಗತಿಗಳು, ವಿದ್ಯಮಾನಗಳು ನಡೆಯುತ್ತಿರುವ ಕಾರಣ ರಮ್ಯಾ ಲವ್ ಸ್ಟೋರಿಯನ್ನು ವರದಿಗಾರರು ಮರೆತುಬಿಟ್ಟರು. ಮೇ.14ರಂದು ರಮ್ಯಾ ತನ್ನ ಪ್ರಿಯಕರನೊಂದಿಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ.
ಇವರನ್ನು ಸ್ಥಳದಲ್ಲೆ ಕಂಡ ವರದಿಗಾರನೊಬ್ಬ, ಏನ್ ಮೇಡಂ ಸಮಾಚಾರ ಎಂದಿದ್ದಾನೆ. "ನನ್ನ ಪರ್ಸನಲ್ ಲೈಫ್ ಬಗ್ಗೆ ನಾನು ಮಾತನಾಡಲ್ಲ. ನಾನು ಮತ್ತು ನನ್ನ ಬಾಯ್‌ಫ್ರೆಂಡ್ ರುಪರ್ಟ್ ಬಗ್ಗೆ ಏನಾದರೂ ಬರೆದುಕೊಳ್ಳಿ. ಐ ಡೋಂಟ್ ಮೈಂಡ್ " ಎಂದಿದ್ದಾಗಿ ಮಿಡ್ ಡೇ ದೈನಿಕ ರೋಚಕ ಸುದ್ದಿಯನ್ನು ಪ್ರಕಟಿಸಿದೆ. ಅಂದಹಾಗೆ ಇವರಿಬ್ಬರ ನಡುವಿನ ಸ್ನೇಹ ಸಂಬಂಧ ಇಂದು ನೆನ್ನೆಯದಲ್ಲವಂತೆ!
ಸ್ವಿಟ್ಜರ್‌ಲ್ಯಾಂಡ್ ಮೂಲದ ರಾಬರ್ಟ್ ರೂಪರ್ಟ್ ಎಲೆಕ್ಟ್ರಾನಿಕ್ ಉತ್ಪನ್ನಗಳು ಹಾಗೂ ಚಿನ್ನದ ರಫ್ತುದಾರನಾಗಿ ಕೆಲಸ ಮಾಡುತ್ತಿದ್ದಾನೆ. ರಮ್ಯಾ ಮತ್ತು ರೂಪರ್ಟ್ ಸೋಷಿಯಲ್ ನೆಟ್‌ವರ್ಕ್ ಸೈಟ್‌ಗಳಲ್ಲಿ ಒಬ್ಬರಿಗೊಬ್ಬರು "ಐ ಲವ್ ಯೂ" ಎಂದೂ ಪರಸ್ಪರ ಶುಭಾಶಯಗಳನ್ನು ರವಾನಿಸಿಕೊಂಡಿದ್ದಾರೆ. ಬಲ್ಲ ಮೂಲಗಳ ಪ್ರಕಾರ, ಇವರಿಬ್ಬರೂ ಮುಂದಿನ ವರ್ಷ ಮದುವೆಯಾಗಲಿದ್ದಾರೆ. ಬಳಿಕ ರಮ್ಯಾ ತನ್ನವನ ಜೊತೆ ಸ್ವಿಟ್ಜರ್‌ಲ್ಯಾಂಡ್‌ಗೆ ಹಾರಲಿದ್ದಾರಂತೆ. (ಮಿಡ್ ಡೇ)
ಇದು ರಮ್ಯಾ ಅವರ ಪ್ರೇಮಾಯಣದ ಒಂದು ಝಲಕ್. ಇನ್ನು 'ತೀಸ್ ಮಾರ್ ಖಾನ್' ಚಿತ್ರದಲ್ಲಿ "ಶೀಲಾ ಕಿ ಜವಾನಿ" ಹಾಡಿನ ಮೂಲಕ ಕಿಚ್ಚು ಹಚ್ಚಿದ ಕತ್ರಿನಾ ಕೈಫ್ ಮಾಡಿದ ಮಾದರಿಯಲ್ಲೇ ಕನ್ನಡದಲ್ಲೂ ಒಂದು ಐಟಂ ಸಾಂಗ್ ಮಾಡುವುದಕ್ಕೆ ರಮ್ಯಾ ಒಪ್ಪಿಕೊಂಡಿದ್ದಾರಂತೆ. ಚಿತ್ರದ ಹೆಸರು 'ಜಾನಿ ಮೇರಾ ನಾಮ್' ಹಾಡಿನ ಪಲ್ಲವಿ ಊರಿಗೆಲ್ಲಾ ಪದ್ಮಾವತಿ.