For Quick Alerts
  ALLOW NOTIFICATIONS  
  For Daily Alerts

  ಇಂದು ನಾನು ದೇವರನ್ನು ನೋಡಿದೆ ಎಂದ ರಮ್ಯಾ

  |

  ಸ್ಯಾಂಡಲ್ ವುಡ್ ಲಕ್ಕಿ ಸ್ಟಾರ್ ರಮ್ಯಾ, ಮಹಾಶತಕದ ಸಾಧನೆ ಮಾಡಿದ ಸಚಿನ್ ಅವರನ್ನು ಗ್ರೇಟ್ ಎಂದು ಪ್ರಶಂಸಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ರಮ್ಯಾ, "ಸಚಿನ್ ನಿಜವಾದ ಚಿನ್ನ. ಅವರು ನೂರು ಶತಕದ ಸಾಧನೆ ಮಾಡಿ ನಿಜವಾದ ವೀರ ಎನಿಸಿಕೊಂಡಿದ್ದಾರೆ. ಅವರಿಗೆ ವಯಸ್ಸಾಯಿತು, ಅವರು ನಿವೃತ್ತಿ ಹೊಂದುವುದು ಒಳ್ಳೆಯದು ಎಂಬ ಕೆಲವರ ಟೀಕೆಗಳಿಗೆ ಈ ಶತಕದ ಮೂಲಕ ಉತ್ತರಕೊಟ್ಟಿದ್ದಾರೆ" ಎಂದಿದ್ದಾರೆ.

  ತಮ್ಮ ಕ್ರಿಕೆಟ್ ಆರಾಧ್ಯದೈವದ ಬಗ್ಗೆ ಮಾತನಾಡಿದ ರಮ್ಯಾ, "ನಾನು ಸಚಿನ್ ಅವರ ಅಪ್ಪಟ ಅಭಿಮಾನಿ. ಖಂಡಿತವಾಗಿಯೂ ಸಚಿನ್ ನೂರನೇ ಶತಕದ ಸಾಧನೆ ಮಾಡುತ್ತಾರೆ ಎಂಬ ನಂಬಿಕೆ ನನಗಿತ್ತು. ಆದರೆ ಅದು ಯಾವಾಗ, ಎಲ್ಲಿ ಎಂಬುದು ಮಾತ್ರ ಗೊತ್ತಿರಲಿಲ್ಲ ಅಷ್ಟೇ" ಎಂದಿದ್ದಾರೆ. ಈ ವಯಸ್ಸಿನಲ್ಲಿಯೂ ಅವರು ಮಾಡಿದ ಸಾಧನೆಯನ್ನು ಕೊಂಡಾಡಿದ ರಮ್ಯಾ, "ಇಂದು ನಾನು ದೇವರನ್ನು ನೋಡಿದೆ, ಅವರೇ ಸಚಿನ್" ಎಂದು ಟ್ವಿಟ್ಟರ್ ನಲ್ಲಿ ಉದ್ಘರಿಸಿದ್ದಾರೆ.

  ಯಾವುದೇ ಕ್ಷೇತ್ರದಲ್ಲಿ ಈ ಮಟ್ಟಿಗೆ ಸಾಧನೆ ಮಾಡುವುದು ಕಷ್ಟ ಹಾಗೂ ಅಪರೂಪ. ಆದರೆ ಸಚಿನ್ ಅವರಿಗೆ ಅದು ಸಾಧ್ಯವಾಯ್ತು. ಕೆಲವೊಮ್ಮೆ ಸಾಧಕರು ವಿಫಲರಾದಾಗ ಜನರು ಅವರನ್ನು ಟೀಕಿಸುತ್ತಾರೆ. ಅದು ಸಚಿನ್ ಅವರಿಗೂ ನಡೆದೇ ಇತ್ತು. ಆದರೆ ಸಚಿನ್ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಇದೀಗ ಸಾಧನೆ ಮೆರೆದಿದ್ದಾರೆ. ಸಾಧನೆಯೇ ಅವರು ಟೀಕೆಗಳಿಗೆ ಕೊಟ್ಟ ಉತ್ತರ" ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Soon after Sachin Tendulkar hits 100th international century Kannada actress Ramya tweets "I saw GOD today & his name is Sachin Tendulkar!" Finally, the century catches up with Sachin!!So, Slow and Steady did win the race :o) wow! So proud of you Sachin. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X