Just In
Don't Miss!
- Sports
ಪೂಜಾರ ವಿರುದ್ಧ ಆಸ್ಟ್ರೇಲಿಯಾ ತನ್ನ ಯೋಜನೆಯನ್ನು ಉತ್ತಮವಾಗಿ ಕಾರ್ಯಗತಗೊಳಿಸಿದೆ
- News
ಅಮಿತ್ ಶಾ ಬಳಿ ಸ್ಪಷ್ಟನೆ ಕೇಳಿ ಎಚ್. ಡಿ. ಕುಮಾರಸ್ವಾಮಿ ಟ್ವೀಟ್!
- Finance
ಸ್ಟಾರ್ಟ್ ಅಪ್ ಗಳಿಗೆ 1000 ಕೋಟಿ ರು. ಸೀಡ್ ಫಂಡ್ ಘೋಷಣೆ ಮಾಡಿದ ಪ್ರಧಾನಿ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Automobiles
2020ರ ಡಿಸೆಂಬರ್ ಅವಧಿಯಲ್ಲಿ ಕಾರು ಮಾರಾಟದಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡ ನ್ಯೂ ಜನರೇಷನ್ ಕ್ರೆಟಾ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಿರ್ದೇಶಕ ಪ್ರೇಮ್ ಹೊಸಾ ರೂಲ್ಸು?! ಜೈ ಮಾದೇಶ್ವರಾ!!
ಚಲನಚಿತ್ರ ನಿರ್ದೇಶಕ ಪ್ರೇಮ್ ಕಿರುತೆರೆ ಲೋಕದಲ್ಲೊಂದು ಹೊಸ ಕಾನೂನು ರೂಪಿಸುವ ಹೋರಾಟದಲ್ಲಿದ್ದಾರೆ. ಅದೇನಪ್ಪಾ ಎಂದರೆ, ಇತ್ತೀಚೆಗೆ ಕಿರುತೆರೆ ವಾಹಿನಿಗಳಿಗೆ ಅತ್ಯಂತ ಹೆಚ್ಚು ಲಾಭ ತಂದುಕೊಡುತ್ತಿರುವ ಬಿಜಿನೆಸ್ ಎಂದರೆ, ಚಲನಚಿತ್ರಗಳ ಪ್ರದರ್ಶನ.
ಅಂದರೆ, ಮಿಸ್ಟರ್ ಗರಗಸ, ಎದ್ದೇಳು ಮಂಜುನಾಥ, ಜೋಗಿ, ಮಠ ಮೊದಲಾದ ಚಿತ್ರಗಳು ತಿಂಗಳಿಗೊಮ್ಮೆಯಾದರೂ ಪ್ರಸಾರವಾಗುತ್ತಲೇ ಇರುತ್ತದೆ. ಇಂಥ ಚಿತ್ರಗಳನ್ನು ಪದೇ ಪದೆ ಪ್ರದರ್ಶಿಸಿ ವಾಹಿನಿಯವರು ಕೋಟಿಗಟ್ಟಲೇ ದುಡ್ಡು ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಪ್ರೇಮ್ ಮತ್ತು ಅವರ ಖಾಸಾ ಸ್ನೇಹಿತರು ಮಾಡುತ್ತಿರುವ ಆರೋಪ ಮತ್ತು ಕಂಡುಕೊಂಡ ಸತ್ಯ!
ಇದೊಂದು ದೊಡ್ಡ ಮಟ್ಟದ ಬಿಜಿನೆಸ್ ಆದರೂ ಅದರಿಂದ ಆ ಚಿತ್ರದ ನಿರ್ಮಾಪಕರಿಗೇನೂ ನಯಾಪೈಸೆ ಪ್ರಯೋಜನ ಆಗುತ್ತಿಲ್ಲ. ಈ ಕಾರಣಕ್ಕೆ ಪ್ರೇಮ್ ಮತ್ತು ತಂಡ ಹೊಸದೊಂದು ಕಾನೂನು ಜಾರಿಗೆ ತರುವ ಯೋಚನೆಯಲ್ಲಿದೆ. ಈ ಕುರಿತು ಪ್ರೇಮ್ ವಾಣಿಜ್ಯಮಂಡಳಿಯಿಂದ ಹಿಡಿದು, ಸಂಬಂಧಪಟ್ಟ ಕಡೆಯೆಲ್ಲಾ ಓಡಾಡುತ್ತಲೇ ಇದ್ದಾರೆ.
ಪ್ರೇಮ್ ಮಾಡಲು ಹೊರಟಿರುವುದು ಇಷ್ಟೇ.. ಇನ್ನುಮುಂದೆ ಖಾಸಗೀ ವಾಹಿನಿಯವರು ಕಮಿಷನ್ ಬೇಸಿಸ್ ಮೇಲೆ ನಿರ್ಮಾಪಕರಿಂದ ಪಡೆಯಬೇಕು. ಒಂದೇ ಮೊತ್ತಕ್ಕೆ ಕೊಂಡುಕೊಂಡು ಅದನ್ನು ಬೇಕುಬೇಕಾದಾಗ ಪ್ರದರ್ಶನ ಮಾಡುವಂತಿಲ್ಲ. ಯಾವ್ಯಾಯಾಗ ಪ್ರದರ್ಶನ ಮಾಡುತ್ತಾರೋ ಆಯಾ ಪ್ರದರ್ಶನಕ್ಕೆ ನಿಗದಿತ ಹಣವನ್ನು ನಿರ್ಮಾಪಕರಿಗೆ ಕೊಡಬೇಕು! ಹೇಗಿದೆ ಪ್ರೇಮ್ ಹೊಸಾ ರೂಲ್ಸು?! ಜೈ ಮಾದೇಶ್ವರಾ!!!