For Quick Alerts
  ALLOW NOTIFICATIONS  
  For Daily Alerts

  ಪ್ರಚಂಡ ಕುಳ್ಳ ದ್ವಾರಕೀಶ್ ಮತ್ತೊಂದು ಚಿತ್ರ ಆರಂಭ

  By Rajendra
  |

  ಸುದೀಪ್ ಜೊತೆ 'ವಿಷ್ಣುವರ್ಧನ' ಚಿತ್ರದ ಬಳಿಕ ಒಂದಷ್ಟು ಗಂಟು ಮಾಡಿಕೊಂಡಿರುವ ನಟ, ನಿರ್ಮಾಪಕ ದ್ವಾರಕೀಶ್ ಈಗ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಅವರು ಸಿನಿಮಾಗೆ ನಮಸ್ಕಾರ ಮಾಡಲಿದ್ದಾರೆ! ಅವರ ಸಿನಿಮಾದ ಹೆಸರೇ 'ಸಲಾಂ ಸಿನೆಮಾ'.

  ಎರಡು ಸ್ಕ್ರಿಪ್ಟ್‌ಗಳಲ್ಲಿ ಒಂದನ್ನು ಓಕೆ ಮಾಡಿರುವ ದ್ವಾರಕೀಶ್, 2012ನೇ ಸಾಲಿನಲ್ಲೇ 'ಸಲಾಂ ಸಿನೆಮಾ' ನಿರ್ಮಿಸಲಿದ್ದಾರೆ. ಸದ್ಯಕ್ಕೆ ಈ ಚಿತ್ರದ ಶೀರ್ಷಿಕೆ ಬಿಟ್ಟರೆ ಉಳಿದ ಅಂಶಗಳ ಬಗ್ಗೆ ದ್ವಾರಕೀಶ್ ಇನ್ನೂ ಕೈಹಾಕಿಲ್ಲ. ಶೀಘ್ರದಲ್ಲೆ ತಾಂತ್ರಿಕ ಹಾಗೂ ತಾರಾ ಬಳಗದ ವಿವರಗಳು ಹೊರಬೀಳಲಿವೆ.

  'ಆಪ್ತಮಿತ್ರ' ನಿರ್ಮಿಸಿದ ಏಳು ವರ್ಷಗಳ ಬಳಿಕ ವಿಷ್ಣುವರ್ಧನ ಚಿತ್ರವನ್ನು ದ್ವಾರಕೀಶ್ ನಿರ್ಮಿಸಿದ್ದರು. ಅನಗತ್ಯ ವಿವಾದಗಳನ್ನು ಸೃಷ್ಟಿಸುತ್ತಾ ತಮ್ಮ ಚಿತ್ರದ ಬಗ್ಗೆ ಬಿಟ್ಟಿ ಪ್ರಚಾರ ಪಡೆದು ಕಡೆಗೂ ಗೆದ್ದರು ಎಂಬ ಆರೋಪಗಳು ಕೇಳಿಬರುತ್ತಿವೆ. ಏತನ್ಮಧ್ಯೆ 'ವಿಷ್ಣುವರ್ಧನ' ಚಿತ್ರ ಶತಕದೆಡೆಗೆ ಮುನ್ನುಗ್ಗಿದೆ. (ಏಜೆನ್ಸೀಸ್)

  English summary
  Kannada films producer cum actor Dwarakish new film titled as Salam Cinema. In the year 2012 Dwarakish is launching ‘Salam Cinema’ and good preparations are on. Meanwhile his latest film Vishnuvardhana completing 100 days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X