For Quick Alerts
  ALLOW NOTIFICATIONS  
  For Daily Alerts

  ಕ್ರೇಜಿಸ್ಟಾರ್ ತಮ್ಮ ಈಗ ಈಶ್ವರ್ ಅಲಿಯಾಸ್ ಬಾಲಾಜಿ!

  By * ಚಿತ್ರಗುಪ್ತ
  |

  ಮುತ್ತುರಾಜ ಅಲಿಯಾಸ್ ಡಾ.ರಾಜ್‌ಕುಮಾರ್, ಅಮರನಾಥ್ ಅಲಿಯಾಸ್ ಅಂಬರೀಷ್, ಸಂಪತ್‌ಕುಮಾರ್ ಅಲಿಯಾಸ್ ವಿಷ್ಣುವರ್ಧನ್, ಈಶ್ವರ್ ಅಲಿಯಾಸ್ ಜಗ್ಗೇಶ್, ದಿವ್ಯ ಸ್ಪಂದನ ಅಲಿಯಾಸ್ ರಮ್ಯಾ.. ..ಹೀಗೆ ಅಲಿಯಾಸ್ ಆಗಿರುವ ಮಂದಿ ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಮಂದಿ ಇದ್ದಾರೆ.

  ಅದೇ ರೀತಿ ರವಿಚಂದ್ರನ್ ಸೋದರ ಬಾಲಾಜಿ ಅವರ ಮೂಲ ಹೆಸರು ಈಶ್ವರ್. ಅವರು ಈಗ ಈಶ್ವರ್ ಅಲಿಯಾಸ್ ಬಾಲಾಜಿ. ಅದೇ ಬಾಲಾಜಿ ಸದ್ಯ ಏನು ಮಾಡುತ್ತಿದ್ದಾರೆ? ಈ ಪ್ರಶ್ನೆಗೆ ಅವರು ಮೊನ್ನೆ ಮೊನ್ನೆ ತನಕ ವೇಟ್ ಎಂಡ್ ಸೀ... ಎಂದು ಸ್ಮೈಲ್ ಕೊಡುತ್ತಿದ್ದರು. ಇದೀಗ ಬಂದ ಸುದ್ದಿಯ ಪ್ರಕಾರ ಅವರು ಮಾಡುತ್ತಿರುವ ಮುಂದಿನ ಚಿತ್ರದ ಹೆಸರೇ 'ಅಲಿಯಾಸ್'!ನಿಜ, ಹೀಗೊಂದು ವಿಚಿತ್ರ ಹೆಸರಿನ ಚಿತ್ರ ಮಾಡಲು ಹೊರಟಿದ್ದಾರೆ ಬಾಲಾಜಿ ಅಲಿಯಾಸ್ ಈಶ್ವರ್.

  ಬಾಲಾಜಿ ಚಿತ್ರಬದುಕಲ್ಲಿ ಹೆಚ್ಚಾಗಿ ಸೋಲನ್ನೇ ಉಂಡಿದ್ದಾರೆ. ಅವರ ತುಂಟ, ಅಹಂ ಪ್ರೇಮಾಸ್ಮಿ ಅಂತೆಲ್ಲಾ ಹೆಸರು ಇಟ್ಟು, ಅಣ್ಣ ರವಿಚಂದ್ರನ್ ಕೈ ಆಡಿಸಿದರೂ ಅದ್ಯಾಕೋ ಬಾಲಾಜಿ ಸಿನಿಮಾ ಬಯಾಲಜಿ ಯಶಸ್ವಿಯಾಗಲೇ ಇಲ್ಲ. ಅಲಿಯಾಸ್ ಇಂದಾದರೂ ಆ ಯಶಸ್ಸು ಅವರ ಪಾಲಾಗುತ್ತಾ ಎನ್ನುವುದು ಗಾಂಧೀನಗರದ ಗಲ್ಲಿ ಗಾತ್ರದ ಪ್ರಶ್ನೆ!

  English summary
  Kannada films up coming actor and Crazy Star Ravichandran brother Balaji new flick titled as Alias! It means that is an alternate name for someone or something. Interestingly his original name is Eshwar alias Balaji. More details of this film are awaited.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X