For Quick Alerts
  ALLOW NOTIFICATIONS  
  For Daily Alerts

  ಉಗಾದಿಗೆ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ನರಸಿಂಹ

  By Rajendra
  |

  ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಅಭಿಮಾನಿಗಳಿಗೆ ಉಗಾದಿ ಹಬ್ಬದ ಉಡುಗೊರೆ ನೀಡುತ್ತಿದ್ದಾರೆ. ನರಸಿಂಹನಾಗಿ ಅವರು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಉಗಾದಿ ಹಬ್ಬದ ದಿನ ಈ ಚಿತ್ರ 125 ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ ಎಂದು ಚಿತ್ರದ ನಿರ್ಮಾಪಕ ಎನ್ ಕುಮಾರ್ ತಿಳಿಸಿದ್ದಾರೆ. ರವಿಚಂದ್ರನ್ ಅವರ ಬಹುತೇಕ ಚಿತ್ರಗಳಿಗೆ ಕತೆ ಬರೆದಿರುವ ಮೋಹನ್ ಆಕ್ಷನ್ ಕಟ್ ಹೇಳಿರುವ ಚಿತ್ರ ಇದು.

  ಈ ಚಿತ್ರದ ಮತ್ತೊಂದು ಆಕರ್ಷಣೆ ಎಂದರೆ, ಸುದೀರ್ಘ ಸಮಯದ ಬಳಿಕ ಹಂಸಲೇಖ ಮತ್ತೆ ರವಿ ಚಿತ್ರಕ್ಕೆ ಸಂಗೀತ ಸಂಯೋಜಿಸಿರುವುದು. ಚಿತ್ರ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಲಿದೆ ಎಂದಿದ್ದಾರೆ ನಿರ್ಮಾಪಕ ಕುಮಾರ್. ರೊಮ್ಯಾಂಟಿಕ್ ಸನ್ನಿವೇಶಗಳಷ್ಟೇ ಲೀಲಾಜಾಲವಾಗಿ ರವಿ ಸರ್ ಭಾವನಾತ್ಮಕ ಸನ್ನಿವೇಶಗಳಿಗೂ ಜೀವ ತುಂಬಿದ್ದಾರೆ. ತಮ್ಮ ಪಾತ್ರದ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಂಡು ಪರಿಣಾಮಕಾರಿಯಾಗಿ ಅಭಿನಯಿಸಿದ್ದಾರೆ ಎಂದು ಮೋಹನ್ ಸರ್ಟಿಫಿಕೇಟ್ ನೀಡಿದ್ದಾರೆ.

  ನರಸಿಂಹ ಚಿತ್ರದಲ್ಲಿ ರವಿಶಂಕರ್ ಖಳನಟನಾಗಿ ಕಾಣಿಸಿಕೊಳ್ಳುತ್ತಿದ್ದು ಸಾಧು ಕೋಕಿಲ ಕಾಮಿಡಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲಿದೆ. ಇದುವರೆಗೂ ತಮ್ಮ ಮದರ್ ಸೆಂಟಿಮೆಂಟ್ ಚಿತ್ರಗಳು ಬಾಕ್ಸಾಫೀಸಲ್ಲಿ ಸೋತ ಉದಾಹರಣೆಗಳಿಲ್ಲ. ಈ ಚಿತ್ರವೂ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸವನ್ನು ರವಿಚಂದ್ರನ್ ವ್ಯಕ್ತಪಡಿಸಿದ್ದಾರೆ. ನಿಕೇಶಾ ಪಟೇಲ್ ಹಾಗೂ ಸಂಜನಾ ಚಿತ್ರದ ನಾಯಕಿಯರು. ಅಂದಹಾಗೆ ಈ ಚಿತ್ರ ತಮಿಳಿನ 'ಮಾಯಿ' ಚಿತ್ರದ ರೀಮೇಕ್. (ಏಜೆನ್ಸೀಸ್)

  English summary
  Crazy Star Ravichandran's upcoming movie Narasimha releasing on Ugadi festival. Narasimha movie is a remake of Tamil movie Maayi. The movie is being directed by actor Mohan and after a long gap Hamsalekha is giving music for a Ravichandran film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X