»   » ಸಾಂಗತ್ಯ ಸಿನಿ ಪತ್ರಿಕೆ ಚಂದಾ ಅಭಿಯಾನ

ಸಾಂಗತ್ಯ ಸಿನಿ ಪತ್ರಿಕೆ ಚಂದಾ ಅಭಿಯಾನ

Posted By:
Subscribe to Filmibeat Kannada
Saangatya Cine Magazine
ಸದಭಿರುಚಿಯ ಚಲನಚಿತ್ರಗಳ ಪ್ರದರ್ಶನ ಮಾಡುತ್ತಾ, ಸಿನಿರಸಿಕರನ್ನು ಒಂದೆಡೆ ಸೇರಿಸುವಲ್ಲಿ ಯಶಸ್ವಿಯಾಗಿರುವ ಸಾಂಗತ್ಯ ಟ್ರಸ್ಟ್ ನವರು ಈಗ ಹೊಸ ಸಾಹಸಕ್ಕೆ ಸಜ್ಜಾಗಿದ್ದಾರೆ. ಮೂರನೇ ಬಾರಿ ಯಶಸ್ವಿ ಚಿತ್ರೋತ್ಸವ ಅಥವಾ ಚಿತ್ರ ಶಿಬಿರ ಯಶಸ್ವಿಯಾದ ನಂತರ ಸಿನಿಮಾ ಶಿಕ್ಷಣ ಕುರಿತ ಪತ್ರಿಕೆಯನ್ನು ಹೊರತರಲು ಸಾಂಗತ್ಯ ಟ್ರಸ್ಟ್ ಮುಂದಾಗಿದೆ.

ಒಂದಿಷ್ಟು ಸಿನಿಮಾಸಕ್ತರೇ ಕೂಡಿಕೊಂಡು ರಚಿಸಿರುವ ಸಾಂಗತ್ಯ ಟ್ರಸ್ಟ್, ಪ್ರತಿ ಮೂರು ತಿಂಗಳಿಗೊಮ್ಮೆ ಹೊಸತನದ ಸಿನಿಮಾ ಕಲಿಕೆಯನ್ನು ಆಸಕ್ತರಿಗೆ ನೀಡಲು ಬಯಸಿದೆ. ಸಾಂಗತ್ಯದ ಸಿನಿಮಾ ಮ್ಯಾಗಜೈನ್(ತ್ರೈಮಾಸಿಕ ಪತ್ರಿಕೆ) ಗೆ ಈಗಾಗಲೇ ಚಂದಾ ಅಭಿಯಾನ ಶುರುವಾಗಿದೆ. ಬಹಳ ಹುಮ್ಮಸ್ಸಿನಿಂದ ಮ್ಯಾಗಜೈನ್ ತಯಾರಿ ನಡೆದಿದೆ. ಲೇಖನ ಸಂಗ್ರಹ, ವಿನ್ಯಾಸ ಇತ್ಯಾದಿಗಳೆಲ್ಲಾ ಭರದಿಂದ ಸಾಗಿದೆ. ಈ ಮಧ್ಯೆ ರಾಜ್ಯಾದ್ಯಂತ ಚಂದಾದಾರರನ್ನು ಕಲೆಹಾಕಲು ಸಾಂಗತ್ಯದ ಬಳಗದವರು ಹೊರಟಿದ್ದಾರೆ.

ಕನ್ನಡದಲ್ಲಿ ಸಿನಿಮಾ ಶಿಕ್ಷಣಕ್ಕೆಂದು ಮ್ಯಾಗಜೈನ್ ಬಂದದ್ದು ತೀರಾ ಕಡಿಮೆ. ಅದರಲ್ಲೂ ಗಂಭೀರ ನೆಲೆಯಲ್ಲಿ (ಸಾಹಿತ್ಯ ಲೋಕದ ಸಾಕ್ಷಿ, ರುಜುವಾತು, ಸಂಕುಲ,ಸಂಕಲನ, ಸಂಚಯ ಇತ್ಯಾದಿ) ಬಂದ ಪತ್ರಿಕೆಗಳು ಬೆರಳೆಣಿಕೆಯಷ್ಟು. ಸಾಂಗತ್ಯ ಶುರುವಾಗುತ್ತಿರುವುದು ಸಾಹಿತ್ಯ ಲೋಕದ ಅಂಥದೊಂದು ಪರಂಪರೆಯನ್ನು ಸಿನಿಮಾ ಲೋಕದಲ್ಲಿ ಆರಂಭಿಸಬೇಕೆಂದು ಹೊರಟಿದೆ. ಇಲ್ಲಿ ಸಿನಿಮಾ ಬಗೆಗಿನ ಗಂಭೀರ ಓದು ನಿಮಗೆ ಪ್ರತಿ ಸಂಚಿಕೆಯಲ್ಲೂ ಲಭ್ಯ. ಸಂದರ್ಶನ, ಲೇಖನ, ಸಂವಾದಗಳ ಜತೆಗೇ ಹೊಸ ಚಿತ್ರಗಳ,ಡಿವಿಡಿ ಗಳ ಪರಿಚಯ ಇತ್ಯಾದಿಯೂ ಲಭ್ಯ. ಹೀಗೇ ತರಹೇವಾರಿ ವಿಷಯ ವೈವಿಧ್ಯ.

ವಾರ್ಷಿಕ ಚಂದಾ 250 ರೂ. ಬಿಡಿ ಪ್ರತಿಯ ದರ ಇನ್ನೂ ನಿರ್ಧರಿಸಿಲ್ಲ. ಸಂಗ್ರಹ ಯೋಗ್ಯ ಸಾಹಿತ್ಯವನ್ನು ಸಿನಿಮಾ ಶಿಕ್ಷಣ ಕುರಿತಾಗಿ ನೀಡುವುದು ನಮ್ಮ ಉದ್ದೇಶ.ಸಿನಿಮಾ ಇಂದು ನಮ್ಮೆಲ್ಲರ ಮಾಧ್ಯಮವಾಗಿ ಬೆಳೆಯುತ್ತಿರುವ ಹೊತ್ತಿನಲ್ಲಿ ಅದರ ರೂಪುರೇಷೆಗಳನ್ನು ಅರ್ಥ ಮಾಡಿಕೊಳ್ಳಲೇಬೇಕಾದ ಹೊತ್ತಿದು. ಚಂದಾ ಆಗಲಿಚ್ಛಿಸುವವರು, ಚಂದಾ ಮಾಡಿ ಕೊಡಲಿಚ್ಛಿಸುವವರು 94807 97113, 94820 73663, 94804 76176 ಗೆ ಸಂಪರ್ಕಿಸಬಹುದು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada