»   » ಸಂವಾದ ತಂಡದಿಂದ 'ವಿಮುಕ್ತಿ' ವಿಮರ್ಶಾ ಸ್ಪರ್ಧೆ

ಸಂವಾದ ತಂಡದಿಂದ 'ವಿಮುಕ್ತಿ' ವಿಮರ್ಶಾ ಸ್ಪರ್ಧೆ

Posted By:
Subscribe to Filmibeat Kannada

ಪಿ ಶೇಷಾದ್ರಿಯವರ 'ವಿಮುಕ್ತಿ'ಗೆ ರಜತ ಕಮಲ ಸಿಕ್ಕಿದೆ. ಕಾಸರವಳ್ಳಿಯ ನಂತರ ಕನ್ನಡದಲ್ಲಿ ಬಹು ಮುಖ್ಯ ದಿಗ್ದರ್ಶಕರೆನಿಸಿಕೊಂಡಿರುವವರು ಶೇಷಾದ್ರಿ. ಈ ಕಾರಣವನ್ನೇ ನೆವವಾಗಿಟ್ಟುಕೊಂಡು "ವಿಮುಕ್ತಿ" ಚಿತ್ರದ ಕುರಿತು ವಿಮರ್ಶಾ ಸ್ಪರ್ಧೆ ನಡೆಸಲು ಸಂವಾದ ನಿರ್ಧರಿಸಿದೆ.

ಹಣದ ಹೊಳೆಯಲ್ಲಿ ಕೊಚ್ಚಿ ಹೋಗುತ್ತಿರುವ ಜನಪ್ರಿಯ ಚಿತ್ರಗಳ ನಡುವೆ ಇಂತಹ ಚಿತ್ರಗಳನ್ನು ಪ್ರೋತ್ಸಾಹಿಸುವುದು ಸಹೃದಯ ನೋಡುಗನ ಜವಾಬ್ದಾರಿಯೂ ಹೌದಲ್ಲವೆ? ಮೊದಲನೇ ಅತ್ಯುತ್ತಮ ವಿಮರ್ಶೆಗೆ 2000 ರೂಪಾಯಿಗಳು, ಎರಡನೇ ಅತ್ಯುತ್ತಮ ವಿಮರ್ಶೆಗೆ 1000 ರೂಪಾಯಿಗಳು ಬಹುಮಾನವಾಗಿ ನೀಡಲಾಗುತ್ತದೆ.

ವಿದ್ಯಾರ್ಥಿ ವಿಭಾಗದ ಅತ್ಯುತ್ತಮ ವಿಮರ್ಶಾ ಲೇಖನಕ್ಕೆ 2000 ರೂಪಾಯಿಗಳು. ಬರಹವು ವಿಮರ್ಶಾತ್ಮಕವಾಗಿರಲಿ. ಪದಗಳ ಮಿತಿಯಿಲ್ಲ, ಬರಹ ಸ್ವಂತದ್ದಾಗಿರಲಿ ಎಂಬ ಷರತ್ತುಗಳು ನಿಮ್ಮ ಗಮನಕ್ಕೆ. ಮಾರ್ಚ್ 10 ರೊಳಗೆ ವಿಮರ್ಶೆಯನ್ನು kiran@samvaada.com ಗೆ ಈ ಮೇಲ್ ಮಾಡಿ ಅಥವಾ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಬಹುದು.

ವಿಳಾಸ:
ನಂ 103, ಮೊದಲನೇ ಮಹಡಿ
ಜನಪ್ರಿಯ ಲೇಕ್ ವ್ಯೂ ಅಪಾರ್ಟಮೆಂಟ್
ಕೋಡಿಚಿಕ್ಕನಹಳ್ಳಿ, ಬೆಂಗಳೂರು-560076
ದೂರವಾಣಿ: 080-2648 4617

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada