For Quick Alerts
  ALLOW NOTIFICATIONS  
  For Daily Alerts

  ಮಂಡ್ಯ ಫಲಿತಾಂಶದ ದಿನವೇ ಡಿ-ಬಾಸ್ ಪಾಲಿಗೆ ಇನ್ನೊಂದು ವಿಶೇಷ

  |

  ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಭರ್ಜರಿ ಜಯ ಸಾಧಿಸಿದ್ದಾರೆ. ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ವಿರುದ್ಧ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.

  ದರ್ಶನ್ ಅವರಿಗೆ ಹಾಗೂ ದರ್ಶನ್ ಅಭಿಮಾನಿಗಳಿಗೆ ಇದು ಸಂಭ್ರಮ ತಂದಿದೆ. ಯಾಕಂದ್ರೆ, ಸುಮಲತಾ ಅವರ ಗೆಲುವಿನಲ್ಲಿ ದರ್ಶನ್ ಮತ್ತು ಯಶ್ ಪಾತ್ರವೂ ಇದೆ. ಈ ಇಬ್ಬರು ನಟರು ಸುಮಲತಾ ಗೆಲುವಿಗಾಗಿ ಮಂಡ್ಯದಲ್ಲಿ ಪರೇಡ್ ಮಾಡಿದ್ದಾರೆ.

  ಸುಮಲತಾ ಭರ್ಜರಿ ಗೆಲುವು : ದರ್ಶನ್ ಮನೆ ಮುಂದೆ ಅಭಿಮಾನಿಗಳ ಸಂಭ್ರಮ

  ಸುಮಲತಾ ಜಯಗೊಳಿಸಿದ್ದಾರೆ ಎಂದು ಫಲಿತಾಂಶ ಹೊರಬೀಳುತ್ತಿದ್ದಂತೆ ಡಿ ಬಾಸ್ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಆದರೆ ದರ್ಶನ್ ಚಿತ್ರೀಕರಣ ನಿಮಿತ್ತ ಪಾಂಡಿಚೇರಿಗೆ ತೆರಳಿದ್ದಾರೆ ಎಂಬ ಮಾಹಿತಿ ಇದೆ.

  ಅಂದ್ಹಾಗೆ, ಸುಮಲತಾ ಗೆಲುವಿನ ಜೊತೆಗೆ ದರ್ಶನ್ ಗೆ ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ, ಡಿ ಬಾಸ್ ಗೆ 'ಚಾಲೆಂಜಿಂಗ್ ಸ್ಟಾರ್' ಎಂದು ಬಿರುದು ನೀಡಿ ಇಂದಿಗೆ 16 ವರ್ಷ ಆಗಿದೆಯಂತೆ. ಈ ಸಂಭ್ರಮವನ್ನ ಕೂಡ ದರ್ಶನ್ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.

  ಅಲ್ಲಿ ಮಹೇಶ್ ಬಾಬು, ಇಲ್ಲಿ ದರ್ಶನ್ ಮತ್ತು ಶಿವಣ್ಣ

  2003ರಲ್ಲಿ ನಟ ದರ್ಶನ್ ಗೆ ಅಭಿಮಾನಿಗಳು ಈ ಬಿರುದು ನೀಡಿದ್ದರು. ಆಗಾಗಲೇ ಮೆಜಿಸ್ಟಿಕ್, ಧ್ರುವ, ನಿನಗೋಸ್ಕರ, ಕಿಟ್ಟಿ, ಕರಿಯ ಅಂತಹ ಚಿತ್ರಗಳಲ್ಲಿ ನಟಿಸಿದ್ದರು.

  ಎರಡು ದಶಕಗಳ ಕಾಲ ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಿ ಮಿಂಚುತ್ತಿರುವ ದರ್ಶನ್, ಸುಮಾರು 50ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಇದರಲ್ಲಿ ಹಲವು ಹಿಟ್ ಸಿನಿಮಾ ನೀಡಿದ್ದರೆ, ಕೆಲವು ಪ್ಲಾಫ್ ಚಿತ್ರಗಳು ಇವರ ಪಟ್ಟಿಯಲ್ಲಿದೆ.

  English summary
  May 23rd is very special for kannada actor darshan.16 years back darshan get 'Challenging star' title from his fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X