»   »  ನಟ ರಘುವೀರ್ ಗೆ ಹುಟ್ಟುಹಬ್ಬದ ಸಂಭ್ರಮ

ನಟ ರಘುವೀರ್ ಗೆ ಹುಟ್ಟುಹಬ್ಬದ ಸಂಭ್ರಮ

Posted By:
Subscribe to Filmibeat Kannada
Raghuveer
ನಟ, ನಿರ್ಮಾಪಕ 'ಚೈತ್ರದ ಪ್ರೇಮಾಂಜಲಿ' ಖ್ಯಾತಿಯ ರಘುವೀರ್ ಗೆ ಭಾನುವಾರ (ಮೇ17) ಹುಟ್ಟುಹಬ್ಬದ ಸಂಭ್ರಮ. ಅವರು ಇಂದು ತಮ್ಮ 37ನೇ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ಅತಿ ಕಿರಿಯ ವಯಸ್ಸಿಗೇ ಬೆಳ್ಳಿತೆರೆಗೆ ಅಡಿಯಿಟ್ಟ ರಘುವೀರ್ 19 ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದ ಅವರು ಕೆಲವರ್ಷಗಳಿಂದ ಚಿತ್ರರಂಗದಿಂದ ದೂರ ಸರಿದಿದ್ದರು.

ಚೈತ್ರದ ಪ್ರೇಮಾಂಜಲಿ, ಶೃಂಗಾರ ಕಾವ್ಯ, ಕಾವೇರಿ ತೀರದಲ್ಲಿ, ನವಿಲೂರ ನೈದಿಲೆ, ಮೌನ ಸಂಗ್ರಾಮ, ಮುಗಿಲ ಚುಂಬನ, ತುಂಗ ಭದ್ರ, ದುರ್ಗಾಪೂಜೆ, ಕತ್ತಲೆ ಕಾಡು ಎಸ್ಟೇಟ್ ...ರಘುವೀರ್ ನಟಿಸಿದ ಕೆಲವು ಚಿತ್ರಗಳು. ರಘುವೀರ್ ನಟಿಸಿದ ಮೊದಲ ಚಿತ್ರಅಜಯ್ ವಿಜಯ್. ಈ ಚಿತ್ರದಲ್ಲಿ ಹಿರಿಯ ನಿರ್ದೇಶಕ ಸಿದ್ಧಲಿಂಗಯ್ಯ ಅವರ ಪುತ್ರ ಮುರಳಿ ಸಹ ನಟಿಸಿದ್ದರು.

ಸಹಾಯಕ ನಿರ್ದೇಶಕನಾಗೇ ಇದ್ದ ಎಸ್. ನಾರಾಯಣ್‌ಗೆ ಚೈತ್ರದ ಪ್ರೇಂಮಾಂಜಲಿಯಲ್ಲಿ ಅವಕಾಶ ಕೊಟ್ಟು ನಿರ್ದೇಶಕ ಸ್ಥಾನಕ್ಕೆ ಬಡ್ತಿ ನೀಡಿದವರು ರಘುವೀರ್. ಎಸ್ ಮಹೇಂದರ್‌ಗೂ ಸಹ ಮೊದಲ ಬಾರಿಗೆ ನಿರ್ದೇಶನದ ಅವಕಾಶ ಕೊಟ್ಟಿದ್ದರು.ಸ್ವತಃ ನಿರ್ಮಾಪಕನಾಗಿಯೂ ಕನ್ನಡ ಚಿತ್ರರಂಗಕ್ಕೆ ಮೌಲಿಕವಾದ ಸೇವೆ ಸಲ್ಲಿಸಿರುವ ರಘುವೀರ್ ಪ್ರಸ್ತುತ 'ಯಾರಿಗೋಸ್ಕರ ಪ್ರೀತಿ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಚೈತ್ರದ ಪ್ರೇಮಾಂಜಲಿ ರಘುವೀರ್ ಮರಳಿ ಗೂಡಿಗೆ

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X