»   » ಮನನೊಂದ ರಮ್ಯಾ ಚಿತ್ರರಂಗಕ್ಕೆ ಸ್ವಯಂ ನಿವೃತ್ತಿ ಘೋಷಣೆ

ಮನನೊಂದ ರಮ್ಯಾ ಚಿತ್ರರಂಗಕ್ಕೆ ಸ್ವಯಂ ನಿವೃತ್ತಿ ಘೋಷಣೆ

Posted By:
Subscribe to Filmibeat Kannada

'ದಂಡಂ ದಶಗುಣಂ' ಚಿತ್ರದಕಿರಿಕಿರಿಯಿಂದ ಬೇಸತ್ತಿರುವ ನಟಿ ರಮ್ಯಾ ಚಿತ್ರರಂಗಕ್ಕೆ ಸ್ವಯಂ ನಿವೃತ್ತಿ ಘೋಷಿಸುತ್ತಿರುವುದಾಗಿ ಹೇಳಿದ್ದಾರೆ. ಈ ರೀತಿಯ ಘಟನೆಗಳ ವಿರುದ್ಧ ಹೋರಾಟ ಮಾಡುವ ಶಕ್ತಿ ನನ್ನ ಬಳಿ ಇಲ್ಲ. ಇನ್ನು ಮುಂದೆ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್‌ನಲ್ಲಿ ಘಂಟಾಘೋಷಾಗಿ ಹೇಳಿದ್ದಾರೆ.

"ಸ್ವತಂತ್ರವಾಗಿ ಬದುಕುತ್ತಿರುವ ಮಹಿಳೆಯೊಬ್ಬಳಿಗೆ ಮಾಧ್ಯಮಗಳಿಂದ ಯಾವುದೇ ಬೆಂಬಲವಿಲ್ಲ...ಇನ್ನು ಮುಂದೆ ಯಾವುದೇ ಕಾರಣಕ್ಕೂ ಚಿತ್ರಗಳಲ್ಲಿ ನಟಿಸುವುದಿಲ್ಲ. ನನ್ನ ಬಳಿ ಹೋರಾಡುವ ಶಕ್ತಿಯೂ ಇಲ್ಲ. ನಾನು ಸ್ವಯಂ ನಿವೃತ್ತಿ ಘೋಷಿಸುತ್ತಿದ್ದೇನೆ. ಹೊಸ ಜೀವನನ್ನು ಶುರು ಮಾಡಲು ನಿರ್ಧರಿಸಿದ್ದೇನೆ" ಎಂದಿದ್ದಾರೆ.

'ದಂಡಂ ದಶಗುಣಂ' ಚಿತ್ರದ ನಿರ್ಮಾಪಕ ಗಣೇಶ್ ಬಗ್ಗೆಯೂ ರಮ್ಯಾ ಕೆಂಡಕಾರಿದ್ದಾರೆ. ಕಳೆದ ಆರು ತಿಂಗಳಿಂದ ನನ್ನ ದೂರವಾಣಿ ಕರೆಗಳಿಗೆ ಗಣೇಶ್ ಯಾಕೆ ಉತ್ತರ ನೀಡುತ್ತಿಲ್ಲ? ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಆಡಿಯೋ ಬಿಡುಗಡೆಗೆ ನಾನು ಬರದೆ ಇರುವುದು ಗಣೇಶ್‌ಗೆ ಲಾಭವೇ ಆಗಿದೆ. 'ದಂಡಂ ದಶಗುಣಂ' ಚಿತ್ರಕ್ಕೆ ಬಿಟ್ಟಿ ಪ್ರಚಾರ ಸಿಕ್ಕಿದೆ. ಒಂದು ವೇಳೆ ನಾನು ಆಡಿಯೋ ಬಿಡುಗಡೆಗೆ ಬಂದಿದ್ದರೆ ಹೀಗಾಗುತ್ತಿತ್ತೆ? ಎಂದು ಪ್ರಶ್ನಿಸಿದ್ದಾರೆ.

English summary
Fed up actress Ramya decides to bid good bye to acting. Tweets, she has no energy to fight the devils. Ramya tweet like, "I don't wish to work anymore cos I have no strength left in me to fight. My life span only got shorter. I am taking voluntary retirement from this industry. I will start afresh, and look ahead. A new life beckons."

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada