ಹೈಕೋರ್ಟ್‌ನಲ್ಲಿ ರೆಬೆಲ್ ಸ್ಟಾರ್ ಅಂಬಿ ಮೌನರಾಗ

ಎಸ್ ಮಹೇಂದರ ನಿರ್ದೇಶಿಸಿದ್ದ ಈ ಚಿತ್ರದ ದೂರದರ್ಶನ ಪ್ರಸಾರ ಹಕ್ಕನ್ನು ನೀಡುವುದಾಗಿ ನಿರ್ಮಾಪಕ ಸಂದೇಶ್ ನಾಗರಾಜ್ ಅವರಿಗೆ ರು.20 ಲಕ್ಷಗಳನ್ನು ಬಸಂತಕುಮಾರ್ ನೀಡಿದ್ದರಂತೆ. ಈಗ ಪ್ರಸಾರ ಹಕ್ಕನ್ನು ಖಾಸಗಿ ವಾಹಿನಿಯೊಂದಕ್ಕೆ ಮಾರಾಟ ಮಾಡಲಾಗಿದೆ. ಈ ಸಂಬಂಧ ಬಸಂತಕುಮಾರ್ ಅವರು ಚಿತ್ರದ ಪ್ರಸಾರಕ್ಕೆ ತಡೆ ನೀಡುವಂತೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಎನ್ ಆನಂದ್ ಅವರು ವಿಚಾರಣೆಯನ್ನು ಮುಂದೂಡಿದ್ದಾರೆ. ಈಗಾಗಲೆ ಚಿತ್ರ ಹಲವಾರು ಬಾರಿ ದೂರದರ್ಶನದಲ್ಲಿ ಪ್ರಸಾರವಾಗಿದೆ. ಈಗ ತಡೆಯಾಜ್ಞೆ ನೀಡುವುದರಲ್ಲಿ ಅರ್ಥವಿಲ್ಲ ಎಂದು ಸಂದೇಶ್ ನಾಗರಾಜ್ ಪರ ವಕೀಲರು ವಾದಿಸಿದ್ದರು. (ಏಜೆನ್ಸೀಸ್)
More from Filmibeat
English summary
The producer of Kannada films Basanth Kumar Patil has filed a case against producer Sandesh Nagaraj seeking to restrain from telecasting Rebel Star Ambarish's movie Mouna Raaga in private tv channels.
ಅಂಬರೀಷ್ ಹೈಕೋರ್ಟ್ ಟಿವಿ ಬಸಂತಕುಮಾರ್ ಪಾಟೀಲ್ ರೆಬೆಲ್ ಸ್ಟಾರ್ ambarish tv high court basant kumar patil rebel star


Click it and Unblock the Notifications











