»   » ತಾತನಾದ ರವಿ ಬೆಳೆಗೆರೆ; ಅಪ್ಪನಾದ ಶ್ರೀನಗರ ಕಿಟ್ಟಿ

ತಾತನಾದ ರವಿ ಬೆಳೆಗೆರೆ; ಅಪ್ಪನಾದ ಶ್ರೀನಗರ ಕಿಟ್ಟಿ

Posted By:
Subscribe to Filmibeat Kannada

ಪತ್ರಕರ್ತ ರವಿಬೆಳೆಗೆರೆ ಅವರ ಅಳಿಯ ಹಾಗೂ ನಟ ಶ್ರೀನಗರ ಕಿಟ್ಟಿ ತಂದೆಯಾಗಿದ್ದಾರೆ. ಈ ಬಾರಿಯ ಪ್ರೇಮಿಗಳ ದಿನದಂದು ಶ್ರೀನಗರ ಕಿಟ್ಟಿ ಅವರ ಮಡದಿ ಭಾವನಾ ಬೆಳೆಗೆರೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ರವಿ ಬೆಳಗೆರೆ ಅವರಿಗೆ ತಾತನಾದ ಖುಷಿಯಾದರೆ ಶ್ರೀನಗರ ಕಿಟ್ಟಿ ಅವರಿಗೆ ಅಪ್ಪನಾದ ಸಂಭ್ರಮ.

ಭಾವನಾ ಬೆಳಗೆರೆ ಅವರು ಭಾನುವಾರ (ಫೆ.14) ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಮಗು ಆರೋಗ್ಯವಾಗಿದೆ. ಮಗು ದಿನ ತುಂಬುವ ಮುಂಚೆಯೇ ಅನಿರೀಕ್ಷಿತವಾಗಿ ಹುಟ್ಟಿದ್ದು ತಾಯಿ ಮತ್ತು ಮಗು ಇಬ್ಬರೂ ಆರೋಗ್ಯದಿಂದ ಇರುವುದಾಗಿ ಮೂಲಗಳು ತಿಳಿಸಿವೆ.

ಶ್ರೀನಗರ ಕಿಟ್ಟಿ ಮತ್ತು ಭಾವನಾ ಬೆಳೆಗೆರೆಯವರದು ಪ್ರೇಮ ವಿವಾಹ. ಇವರಿಬ್ಬರೂ 2008ರಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದರು. ಹೊಸ ಸದಸ್ಯೆಯ ಆಗಮನದಿಂದ ಶ್ರೀನಗರ ಕಿಟ್ಟಿ ಅವರ ಮನೆಯಲ್ಲಿ ಸಂಭ್ರಮದ ವಾತಾವರಣನೆಲೆಸಿದೆ. ಶ್ರೀನಗರ ಕಿಟ್ಟಿ ಅಭಿನಯದ 'ಸ್ವಯಂವರ' ಹಾಗೂ 'ಸಂಜು ವೆಡ್ಸ್ ಗೀತಾ' ಚಿತ್ರಗಳು ತೆರೆಕಾಣಬೇಕಾಗಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada