ಬೆಳ್ಳಗಾದ ಕರಿಯ ದರ್ಶನ್ ಅವರ ಕರಿಬಿಳಿ ಚಿತ್ರಗಳು

ನನ್ನ ಜೀವನದಲ್ಲಿ ನನಗೆ ದೊಡ್ಡ ಬ್ರೇಕ್ ನೀಡಿದ್ದು ಕಲಾಸಿಪಾಳ್ಯ ಚಿತ್ರ. ಆ ಚಿತ್ರದ ನಂತರ ನಾನು ಬಹಳಷ್ಟು ಯಶಸ್ಸು ಕಂಡೆ. ಕೆಲ ಚಿತ್ರಗಳಲ್ಲಿ ಸೋಲನ್ನೂ ಕಂಡೆ. ಚಿತ್ರದಲ್ಲಿ ನಟಿಸುವುದಷ್ಟೇ ನನ್ನ ಕೆಲಸ. ನಿರ್ದೇಶಕರು, ನಿರ್ಮಾಪಕರು ಹೇಳಿದಂತೆ ಮಾಡುತ್ತೇನೆಯೇ ಹೊರತು ಯಾವ ವಿಷಯಕ್ಕೂ ತಲೆ ಹಾಕುವುದಿಲ್ಲ ಇದು ನನ್ನ ಪಾಲಿಸಿ.
ಖಳ ನಟರ ಮಕ್ಕಳು ನಾಯಕರು ಆಗಬಾರದೆಂದು ಏನೂ ಇಲ್ಲ, ಅದಕ್ಕಾಗಿ ಕನ್ನಡ ಚಿತ್ರರಂಗದ ಎಲ್ಲಾ ವಿಲನ್ ಮಕ್ಕಳನ್ನು ಒಟ್ಟಾಗಿಸಿ ನವಗ್ರಹ ಚಿತ್ರ ತೆಗೆದೆವು. ನನ್ನ ಮತ್ತು ಸುದೀಪ್ ಮಧ್ಯೆ ಒಳ್ಳೆ ಸ್ನೇಹವಿದೆ. ಯಾರೋ ಆಗದವರು ನಮ್ಮಿಬ್ಬರ ನಡುವೆ ಹುಳಿ ಹಿಂಡುವ ಕೆಲಸ ಮಾಡಿದರು.
ಆದರೆ ನಾವಿಬ್ಬರೂ ಅದಕ್ಕೆ ತಲೆಕೆಡಿಕೊಳ್ಳಲಿಲ್ಲ. ಸಿಸಿಎಲ್ ಬಗ್ಗೆ ನಾನು ಮಾತಾಡೋಕೆ ಇಷ್ಟ ಪಡಲ್ಲ, ಸುದೀಪ್ ಟೀಮ್ ಮುನ್ನಡೆಸುತ್ತಿದ್ದವನು ಅವನೇ. ಅವನೇ ಈ ಬಗ್ಗೆ ಮಾತನಾಡಿದರೆ ಸೂಕ್ತ.
ಜೊತೆ ಜೊತೆಯಲಿ, ನವಗ್ರಹ ಅದಕ್ಕಿಂತ ಹೆಚ್ಚಾಗಿ ಸಾರಥಿ ಚಿತ್ರದಂತಹ ಸೂಪರ್ ಹಿಟ್ ಚಿತ್ರ ನಿರ್ದೇಶಿಸಿದ ನನ್ನ ತಮ್ಮ ದಿನಕರ್ ಬಳಿ ಒಬ್ಬನೇ ಒಬ್ಬ ನಿರ್ಮಾಪಕರು ಚಿತ್ರ ನಿರ್ಮಿಸಲು ಬನ್ನಿ ಎಂದು ಆಫರ್ ಮಾಡಿಲ್ಲ. ಇದರಿಂದಲೇ ನೀವು ತಿಳಿದುಕೊಳ್ಳಿ ನಮ್ಮ ಗಾಂಧಿನಗರದ ಎಂಗೈತೆ ಅಂತ.
ಇವೆಲ್ಲ ಹೇಗೂ ಆಗಲಿ, ನನ್ನ ಅಭಿಮಾನಿಗಳನ್ನು ನಾನೂ ಎಂದೂ ನಿರಾಶೆಗೊಳಿಸುವುದಿಲ್ಲ ಎಂದು ನಾಳೆಗಳತ್ತ ಬೊಟ್ಟುಮಾಡಿದರು ಬರ್ತ್ ಡೇ ಬಾಯ್ ದರ್ಶನ್.


Click it and Unblock the Notifications











